newsfirstkannada.com

ಚುನಾವಣೆ ಬಗ್ಗೆ ಭವಿಷ್ಯ ನುಡಿದ ಪ್ರಧಾನಿ ಮೋದಿ.. ಅಷ್ಟಕ್ಕೂ ಏನಂದ್ರು ಅವರು..?

Share :

Published May 13, 2024 at 6:30am

Update May 12, 2024 at 10:20pm

  ಈ ಚುನಾವಣೆಯಲ್ಲಿ ಎನ್​ಡಿಎಗೆ ಎಲ್ಲೆಲ್ಲಿ ಬಹುಮತ?

  ನಮಗೆ ಜನಪ್ರಿಯತೆ ಬೇಕಿಲ್ಲ, ಕೆಲಸದ ವೇಗ ನೋಡಿದ್ದಾರೆ

  ನಮೋ ಅಭಿವೃದ್ಧಿಯ ಮಂತ್ರದ ಗುಟ್ಟು ಏನೇನು..?

ಈ ಬಾರಿಯ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಮೂರು ಹಂತದ ಮತದಾನ ನಡೆದು, ಇಂದು 4ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದೆ. ಇದೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಎನ್​ಡಿಎ ಅತಿ ಹೆಚ್ಚು ಸ್ಥಾನ ಗೆಲ್ಲುವ ರಾಜ್ಯಗಳ ಪಟ್ಟಿ ಮಾಡಿದ್ದಾರೆ. ಎನ್​ಡಿಎ ಸರ್ಕಾರದ ದಶಕಗಳ ಸಾಧನೆಯೇ ಭರ್ಜರಿ ಗೆಲುವಿಗೆ ಪ್ರೇರಕ ಎಂಬ ಮಂತ್ರ ಜಪಿಸಿದ್ದಾರೆ.

ಅಬ್​​ ಕೀ ಬಾರ್ ಮೋದಿ ಸರ್ಕಾರ್, ಚಾರ್ ಸೌ ಪಾರ್ ಅನ್ನೋದು ಎನ್​ಡಿಎ ಮೈತ್ರಿಕೂಟದ ಘೋಷವಾಕ್ಯ.. ಇದೇ ಮಂತ್ರ ಜಪಿಸುತ್ತಾ ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇರಿಸಿದೆ. ಚುನಾವಣಾ ಅಖಾಡಗಳಲ್ಲಿ ಅಬ್ಬರಿಸಿದೆ. ಎನ್​ಡಿಎ ಕೂಟ 400 ಕ್ಷೇತ್ರಗಳನ್ನು ಗೆಲ್ತಾರಾ ಎಂಬ ಚರ್ಚೆ ನಡೆಯುವ ಹೊತ್ತಲ್ಲೇ ಸ್ವತಃ ಪ್ರಧಾನಿ ಮೋದಿ ಎನ್​ಡಿಎ ಭವಿಷ್ಯ ಹೇಳಿದ್ದಾರೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..

ದೇಶದಲ್ಲಿ 3ನೇ ಬಾರಿಗೆ ಎನ್​ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ದೇಶದೆಲ್ಲೆಡೆ ಮಿಂಚಿನ ಸಂಚಾರ ನಡೆಸಿದ್ದಾರೆ. ಉತ್ತರದಿಂದ ದಕ್ಷಿಣದವರೆಗೂ ಎಲ್ಲಾ ರಾಜ್ಯಗಳಿಗೂ ತೆರಳಿ ರಣಕಹಳೆ ಮೊಳಗಿಸಿದ್ದಾರೆ. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ತರುವುದನ್ನೇ ಕೇಂದ್ರೀಕರಿಸಿ ಎಲ್ಲೆಲ್ಲಿ ಪ್ರಚಾರ ಹೇಗೆ ನಡೆದಿದೆ. ಯಾವ್ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಖುದ್ದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮೋದಿ ಭವಿಷ್ಯ!
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕೇರಳದಲ್ಲಿ ಎನ್​ಡಿಎ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದಾರೆ ಅಂತ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಎನ್​ಡಿಎ ಮೈತ್ರಿಕೂಟಕ್ಕೆ ಯಾಕೆ ಬಹುಮತ ಬರಲಿದೆ ಅನ್ನೋ ಬಗ್ಗೆ ತಮ್ಮ ಸಂದರ್ಶನದಲ್ಲಿ ಪ್ರಮುಖ 10 ಕೀ ಪಾಯಿಂಟ್​​ಗಳನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು.. ಇವರ ದೇಹದಲ್ಲಿ ಹಂದಿ ಕಿಡ್ನಿ ಎಷ್ಟು ದಿನ ಕೆಲಸ ಮಾಡಿತ್ತು?

ನಮೋ ಅಭಿವೃದ್ಧಿಯ ಮಂತ್ರ!
ನಮಗೆ ಜನಪ್ರಿಯತೆ ಬೇಕಿಲ್ಲ, ಜನ ನಮ್ಮ ಕೆಲಸದ ವೇಗವನ್ನು ದೇಶದ ಜನ ನೋಡಿದ್ದಾರೆ. ಅಭಿವೃದ್ಧಿ ಅಂದ್ರೆ ಏನು ಅಂತ ಕಳೆದ 10 ವರ್ಷಗಳಲ್ಲಿ ಇಡೀ ವಿಶ್ವಕ್ಕೆ ತೋರಿಸಿದ್ದೇವೆ, ಇನ್ನು ಬಲಿಷ್ಠ, ನಿರ್ಣಾಯಕ, ಸಂವೇದನಾಶೀಲ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ.. ದಕ್ಷಿಣ ಭಾರತದ ರಾಜ್ಯಗಳೊಂದಿಗೆ ದೇಶದ ಅಭಿವೃದ್ಧಿ ಸಂದೇಶ ಪ್ರತಿಧ್ವನಿಸುತ್ತಿದೆ. ದೇಶದ 140 ಕೋಟಿ ಭಾರತೀಯರ ಕುಟುಂಬದ ಕನಸು ಈಡೇರಿಸುವ ಬಯಕೆ ಹೊಂದಿದ್ದೇವೆ, ದೇಶದ ಬಡವರು, ರೈತರು, ಮಹಿಳೆಯರು, ಮಧ್ಯಮ ವರ್ಗದವರ ಸಬಲೀಕರಣ 3ನೇ ಬಾರಿ ಅಧಿಕಾರಕ್ಕೆ ಬಂದ್ರೆ ಹೆಚ್ಚು ಒತ್ತು, ದೇಶದಲ್ಲಿ ನಿರುದ್ಯೋಗದ ಮಟ್ಟ ತಗ್ಗಿದೆ, ಉದ್ಯೋಗ ಸೃಷ್ಟಿಯಾಗಿದೆ, ಹಣದುಬ್ಬರ ಕೂಡ ನಿಯಂತ್ರಣಕ್ಕೆ ತಂದಿದ್ದೇವೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೆ ‘ಮೋದಿ ಹಟಾವೋ’ ಬಿಟ್ಟರೆ ಬೇರೆ ದೃಷ್ಟಿಕೋನವೇ ಇಲ್ಲದಂತಾಗಿದೆ.. ಇನ್ನು ಕಾಂಗ್ರೆಸ್​​​ ಪಿತ್ರಾರ್ಜಿತ ತೆರಿಗೆ ಹಂಚಿಕೆ ಪದ್ಧತಿ ಬಗ್ಗೆ ಜನರ ಬಳಿಯಲ್ಲೇ ಚರ್ಚೆ ನಡೆಸಬೇಕಿದೆ. ದೇಶಾದ್ಯಂತ ಬಿಜೆಪಿಯ ಸಿದ್ಧಾಂತ ಆಕರ್ಷಿತವಾಗುತ್ತಿದೆ. ಬಿಜೆಪಿ ಪರ ಚಳವಳಿ ನಡೆಯುತ್ತಿದೆ.

ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!

ಚುನಾವಣೆಗೆ ಹೋಗಲು ನಮಗೆ ಯಾವುದೇ ಜನಪ್ರಿಯ ಕ್ರಮಗಳ ಅಗತ್ಯವಿಲ್ಲ. ಹೀಗಾಗಿ ಮಧ್ಯಂತರ ಬಜೆಟ್​​​ನಲ್ಲಿ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಕಳೆದ 10 ವರ್ಷಗಳಲ್ಲಿ ಜನರು ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಒಟ್ಟಾರೆ, ಪ್ರಧಾನಿ ಮೋದಿ ಹೇಳಿದಂತೆ ಈ ಬಾರಿ ಎನ್‌ಡಿಎ ಸ್ಪಷ್ಟ ಬಹುಮತಗಳಿಸಿದರೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬಳಿಕ ಈ ಸಾಧನೆ ಮಾಡಿದ ದೇಶದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚುನಾವಣೆ ಬಗ್ಗೆ ಭವಿಷ್ಯ ನುಡಿದ ಪ್ರಧಾನಿ ಮೋದಿ.. ಅಷ್ಟಕ್ಕೂ ಏನಂದ್ರು ಅವರು..?

https://newsfirstlive.com/wp-content/uploads/2024/04/Modi-7.jpg

Load More