newsfirstkannada.com

ಬೆಂಗಳೂರು ಮನೆ ಮಾಲೀಕರೇ ಎಚ್ಚರ.. ಬಾಡಿಗೆ ಮನೆಗೆ ಕನ್ನ ಹಾಕಿ ದಂಪತಿ ಎಸ್ಕೇಪ್; ಸಿಕ್ಕಿದ್ದೇ ರೋಚಕ!

Share :

Published May 14, 2024 at 7:51pm

Update May 14, 2024 at 7:58pm

    ಮನೆ ಮಾಲೀಕ ಆಚೆ ಹೋಗಿದ್ದಾಗ ಹಿಂಬದಿ ಬಾಗಿಲು ಮುರಿದು ಕಳ್ಳತನ

    ಚಾಲಕನಿಗೆ ಕರೆ ಮಾಡಿ ಆರೋಪಿಗಳ ಬಗ್ಗೆ ತಿಳಿದುಕೊಂಡ ಪೊಲೀಸ್​

    24 ಲಕ್ಷ ನಗದು, 150 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದ ಕಿಲಾಡಿ ದಂಪತಿ

ಬೆಂಗಳೂರು: ಬಾಡಿಗೆಯಲ್ಲಿದ್ದ ಮನೆಯ ಮಾಲೀಕನ ಮನೆಗೆ ಕನ್ನ ಹಾಕಿರೋ ಘಟನೆ ಅಶೋಕನಗರದಲ್ಲಿ ನಡೆದಿದೆ. ಮೊಹಮ್ಮದ್ ಸಾಬುದೀನ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರೌಡಿಶೀಟರ್ ಸಲ್ಮಾನ್ ಖಾನ್ @ಹಂಡ ಸಲ್ಮಾನ್, ಅಸ್ಘರ್ ಮೆಹಬಿ, ಫಾತಿಮಾ, ಮೋಹಿದ್ ರಜಾ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಫಾತಿಮಾ, ಮೋಹಿದ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಾಬುದೀನ್ ಒಳ್ಳೆ ಜನ ಅಂದುಕೊಂಡು ಈ ದಂಪತಿಗೆ ಮನೆ ಬಾಡಿಗೆ ಕೊಟ್ಟಿದ್ರು. ಆದರೆ ಬಾಡಿಗೆಗೆ ಕೊಟ್ಟ ಮನೆಯ ಮಾಲೀಕನ ಮನೆಯಲ್ಲಿದ್ದ 24 ಲಕ್ಷ ನಗದು,150 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ಏನಿದು ಪ್ರಕರಣ?

ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದ ಸಾಬುದೀನ್ ತಂದೆ ಮನೆ ಖರೀದಿಗೆ ಅಂತ 50 ಲಕ್ಷ ಹಣ ಕೊಟ್ಟಿದ್ರು. ಈ ಹಣದ ಮ್ಯಾಟರ್ ಪಕ್ಕದ ಮನೆಯಲ್ಲಿದ್ದ ಈ ಮೋಹಿದ್​ ದಂಪತಿಗೆ ಗೊತ್ತಾಗಿದೆ. ಹೇಗಾದ್ರೂ ಮಾಡಿ ಆ ಹಣ ಲಪಾಟಾಯಿಸಬೇಕು ಅಂತ ಪ್ಲಾನ್ ಮಾಡಿದ್ದ ಕಳ್ಳ ಜೋಡಿ ಸಾಬುದ್ದೀನ್ ಮಗಳನ್ನ ಟಾರ್ಗೆಟ್ ಮಾಡಿದೆ. ಸಾಬುದ್ದೀನ್​ಗೆ ಇಬ್ಬರು ಹೆಣ್ಮಕಳ್ಳು ಅದ್ರಲ್ಲಿ ಎರಡನೇ ಮಗಳಿಗೆ ಮನೆಯಲ್ಲಿ ಹಣ ಇಟ್ಟಿರೋದು ಗೊತ್ತಾಗಿದೆ. ಮನೆಯಲ್ಲಿದ್ದ ಹಣವನೆಲ್ಲ ಪಾರ್ಟಿ ಅಂತೆಲ್ಲ ಖರ್ಚು ಮಾಡಿದ್ದಾಳೆ. ಇತ್ತ ಪಕ್ಕದ ಮನೆಯಲ್ಲಿದ್ದ ಮೋಹಿದ್ ದಂಪತಿ ಇದೆನ್ನೆಲ್ಲ ಗಮನಿಸ್ತಿತ್ತು. ಹಣ ಕಳ್ಳತನ ಮಾಡಬೇಕು ಅಂತ ಸ್ಕೆಚ್ ಹಾಕಿದವರು ಪಾರ್ಟಿ ಅಂತೆಲ್ಲ ಓಡಾಡ್ತಿದ್ದ ಸಾಬುದ್ದೀನ್ ಎರಡನೇ ಮಗಳನ್ನ ಲಾಕ್ ಮಾಡಿದ್ದಾರೆ. ಆಕೆ ತಂದೆ ತಾಯಿಯನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ 25 ಲಕ್ಷ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಬಾಡಿಗೆ ಮನೆಯಲ್ಲಿದ್ದ ಕಿಲಾಡಿ ಜೋಡಿ ಸಾಬುದ್ದೀನ್ ಮಗಳಿಗೆ ಬೆದರಿಸಿ ಹಣ ಪೀಕಿತ್ತು. ಮನೆಯಲ್ಲಿ ಇನ್ನಷ್ಟು ಹಣ ಇರೋ ವಿಚಾರ ಗೊತ್ತಾಗಿ ಅದನ್ನು ಎಗರಿಸಬೇಕು ಅಂತ ಹೊಂಚು ಹಾಕಿದೆ. ಅದಕ್ಕೆ ಅಂತ ರೌಡಿಶೀಟರ್ ಸಲ್ಮಾನ್​ ಖಾನ್ ಅನ್ನೋನ ಸಹಾಯ ಪಡೆದಿದೆ. ಈ ಸಲ್ಮಾನ್ ಖಾನ್ ಗ್ಯಾಂಗ್ ಸಂಪರ್ಕ ಮಾಡಿದ್ದ ಮೋಹಿದ್ ದಂಪತಿ ಅವರಿಂದಲೇ ಮನೆ ಕಳ್ಳತನಕ್ಕೆ ಪ್ಲಾನ್ ರೂಪಿಸಿದೆ. ಕಳೆದ ಒಂದು ವರ್ಷದಿಂದ ಸಾಬುದ್ದೀನ್ ಮಗಳಿಂದ 25 ಲಕ್ಷ ಹಣ ವಸೂಲಿ ಮಾಡಿದ್ದ ಮೋಹಿದ್ ದಂಪತಿ ಮೇ 7 ರಂದು ಸಾಬುದ್ದೀನ್ ಮನೆಗೆ ಕನ್ನ ಹಾಕೋದಕ್ಕೆ ಪ್ಲಾನ್ ಮಾಡಿತ್ತು. ಯಾಕಂದ್ರೆ ಬೇಸಿಗೆ ರಜೆ ಅಂತ ಸಾಬುದ್ದೀನ್ ಕುಟುಂಬ ಬೇರೆ ಊರಿಗೆ ಹೋಗಿತ್ತು. ಅತ್ತ ಸಾಬುದ್ದೀನ್ ಕೂಡ ಕೆಲಸಕ್ಕೆ ಹೋಗಿದ್ದ. ಇದೇ ಸಮಯಕ್ಕೆ ಕಾಯ್ತಿದ್ದ ಮೋಹಿದ್ ದಂಪತಿ ರೌಡಿಶೀಟರ್ ಸಲ್ಮಾನ್ ಖಾನ್ ಸಹಾಯ ಪಡೆದು ಓನರ್ ಮನೆ ಬಾಗಿಲು ಮುರಿದು ಗುಡಿಸಿ ಗುಂಡಾತರ ಮಾಡಿದೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಹೊಂಚು ಹಾಕಿದ್ದ ಮೋಹಿದ್ ಮತ್ತು ಫಾತಿಮಾ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ಕದ್ದು ಪರಾರಿಯಾಗಿತ್ತು.

ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ಕಳ್ಳ ಜೋಡಿ ಲಾಕ್

ಪ್ಲಾನ್​ ಮಾಡಿ ಹೊಂಚು ಹಾಕಿ ಮೇ 7ರಂದು ಹಿಂಬದಿ ಬಾಗಿಲು ಮುರಿದು ಚಿನ್ನ ಕದ್ದು ಎಸ್ಕೇಪ್​ ಆಗಿದ್ರು. ಕೆಲಸ ಮುಗಿಸಿ ಸಾಬುದ್ದೀನ್ ಮನೆಗೆ ಬಂದು ನೋಡ್ದಾಗ ಮನೆ ಡೋರ್ ಓಪನ್ ಆಗಿರುತ್ತೆ. ಮನೆಯಲ್ಲಿದ್ದ ಹಣ ಚಿನ್ನ ಮಂಗಮಾಯ. ತಕ್ಷಣವೇ ಸಾಬುದ್ದೀನ್ ಅಶೋಕ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲರ್ಟ್ ಆದ ಪೊಲೀಸರು ಆರೋಪಿಗಳ ಫೋನ್ ನಂಬರ್ ಟ್ರೇಸ್ ಮಾಡಿದ್ದಾರೆ. ಆಗ ಗಾಂಧಿನಗರ ಬಸ್ ನಿಲ್ದಾಣದಲ್ಲಿ ಕಳ್ಳ ಜೋಡಿಯ ಮೊಬೈಲ್ ಸ್ವೀಚ್ ಆಫ್ ಆಗಿರೋದು ಗೊತ್ತಾಗುತ್ತೆ. ಆಗ ಕಳ್ಳರನ್ನ ಹಿಡಿಯೋದಕ್ಕೆ ಸಹಾಯ ಮಾಡಿದ್ದು ಟ್ರಾವೆಲ್ ಏಜೆನ್ಸಿ.

ಗಾಂಧಿನಗರ ಬಸ್ ನಿಲ್ದಾಣ ಬಳಿ ಆರೋಪಿಗಳ ಮೊಬೈಲ್ ಲೊಕೇಶನ್​ ಆಫ್​ ಆಗಿರುತ್ತೆ. ಬಸ್​ನಲ್ಲಿಯೇ ಹೊರಟಿರಬಹುದು ಎಂದು ಅಂದಾಜಿಸಿದ್ದ ಪೊಲೀಸರು, ಆರೋಪಿಗಳ ಬಗ್ಗೆ ಗಾಂಧಿನಗರದ ಟ್ರಾವೆಲ್ ಏಜೆನ್ಸಿಗಳಿಗೆ ಮಾಹಿತಿ ನೀಡಿರ್ತಾರೆ. ಈ ವೇಳೆ ಚೆಕ್​ ಮಾಡಿದಾಗ ಮೋಹಿದ್ ಮತ್ತು ಫಾತಿಮಾ ಇಬ್ಬರ ಹೆಸರಲ್ಲಿ ಟಿಕೆಟ್​ ಬುಕ್​ ಆಗಿರೋದು ಗೊತ್ತಾಗಿದೆ. ತಕ್ಷಣವೇ ಕಳ್ಳ ಜೋಡಿ ಪ್ರಯಾಣಿಸುತ್ತಿದ್ದ ಬಸ್ ಚಾಲಕನಿಗೆ ಕರೆ ಮಾಡಿ ಬಸ್​ನಲ್ಲಿ ಆರೋಪಿಗಳಿರೊ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ಚಾಲಕ ಬಸ್​ ಅನ್ನು ಸೀದಾ ಚಿತ್ರದುರ್ಗದ ರೂರಲ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾನೆ. ತಕ್ಷಣವೇ ಚಿತ್ರದುರ್ಗ ಪೊಲೀಸರು ಕಳ್ಳ ಜೋಡಿಯನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಗಳಿಂದ 24 ಲಕ್ಷ ನಗದು, 150 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, ಅಶೋಕನಗರ ಪೊಲೀಸರಿಗೆ ಆರೋಪಿಗಳನ್ನ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಮನೆ ಮಾಲೀಕರೇ ಎಚ್ಚರ.. ಬಾಡಿಗೆ ಮನೆಗೆ ಕನ್ನ ಹಾಕಿ ದಂಪತಿ ಎಸ್ಕೇಪ್; ಸಿಕ್ಕಿದ್ದೇ ರೋಚಕ!

https://newsfirstlive.com/wp-content/uploads/2024/05/bng-thief.jpg

Load More