newsfirstkannada.com

ಜೋರು ಮಳೆ.. ತುಂಬಿದ ನದಿ ನೀರಲ್ಲಿ ಬೋಟ್​ ಮುಳುಗಿ 4 ಸಾವು.. ಮೂವರ ರಕ್ಷಣೆ, ಹಲವರು ನಾಪತ್ತೆ

Share :

Published April 16, 2024 at 11:35am

Update April 16, 2024 at 11:36am

    ಘಟನೆಯಲ್ಲಿ ಮೂವರನ್ನು ರಕ್ಷಣೆ ಮಾಡಿರುವ SDRF ಟೀಮ್

    ತುಂಬಿ ಹರಿಯುತ್ತಿದ್ದ ನದಿ ನೀರಲ್ಲಿ ಬೋಟ್ ಮುಳುಗಿದ್ದಕ್ಕೆ ಸಾವು

    4 ಸಾವು, ಮೂವರ ರಕ್ಷಣೆ, ನಾಪತ್ತೆ ಆದವರಿಗಾಗಿ ಹುಡುಕಾಟ

ಶ್ರೀನಗರ: ಜಮ್ಮುಕಾಶ್ಮೀರದ ಗಂಡ್ಬಾಲ್ ನೌಗಾಮ್ ಪ್ರದೇಶ ಬಳಿಯ ಝೀಲಂ ನದಿ ನೀರಿನಲ್ಲಿ ಬೋಟ್​ವೊಂದು ಮುಳುಗಿ ನಾಲ್ವರು ಸಾವನ್ನಪ್ಪಿದ್ದು ಇನ್ನು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಬೋಟ್​ ಮುಳುಗಿ ಮೃತಪಟ್ಟವರನ್ನು ಫಿರ್ದೌಸಾ (30), ರಜಿಯಾ (18), ಶಬೀರ್ (23) ಮತ್ತು ಗುಲ್ಜಾರ್ (30) ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯಲ್ಲಿ ಮೂವರು ರಕ್ಷಿಸಲ್ಪಟ್ಟಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲಾ-ಕಾಲೇಜು ಹಾಗೂ ಕೆಲಸದ ನಿಮಿತ್ತ ಬೋಟ್ ಮೂಲಕ ನದಿ ದಾಟಬೇಕಾದರೆ ಈ ಅವಘಡ ಸಂಭವಿಸಿದೆ. ನೀರಿನಲ್ಲಿ ಬಿದ್ದವರಿಗಾಗಿ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ

ಇನ್ನು ಮಾಹಿತಿ ತಿಳಿದು ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಎಸ್​​ಡಿಆರ್​ಎಫ್​ ನದಿ ನೀರಿನಲ್ಲಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸಿದೆ. ಬೋಟ್​ನಲ್ಲಿ ನೀರಿಗೆ ಇಳಿದಿರುವ ಸಿಬ್ಬಂದಿ ಒಂದು ಕಡೆಯಿಂದ ಹುಡುಕುತ್ತಿದ್ದಾರೆ. ಕಾಣೆಯಾದವರ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು ತೀವ್ರ ಆತಂಕ ವ್ಯಕ್ತಪಡಿಸಿ ಕಣ್ಣೀರು ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಧೋನಿ ಬ್ಯಾಟಿಂಗ್​ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್​.. ಮಹಿ ಸಿಕ್ಸ್​ಗೆ ಕರೀನಾ, ನೇಹಾ ಫುಲ್ ಶಾಕ್

ಇದನ್ನೂ ಓದಿ: ಪ್ರೇಯಸಿ ಸಿಕ್ಕಿಲ್ಲವೆಂದು ಹೆಣ್ಮಕ್ಕಳೇ ಟಾರ್ಗೆಟ್; ಚೂರಿ ಚುಚ್ಚಿ ​5 ಮಹಿಳೆಯರ ಬಲಿ ಪಡೆದ ಸೈಕೋ!

ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಝೀಲಂ ನದಿಗೆ ಹಲವು ಕಡೆಯಿಂದ ಭಾರೀ ಮಟ್ಟದಲ್ಲಿ ನೀರು ಹರಿದು ಬಂದು ತುಂಬಿದ್ದರಿಂದ ನೀರಿನ ಮಟ್ಟ ಹೆಚ್ಚಳವಾಗಿದೆ. ಭಾರೀ ಮಳೆಯಿಂದಾಗಿ ಖನ್ಯಾರ್, ಬಾಬಾಡೆಂಬ್, ನೌಹಟ್ಟಾ ಸೇರಿದಂತೆ ಡೌನ್‌ಟೌನ್ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತವಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೋರು ಮಳೆ.. ತುಂಬಿದ ನದಿ ನೀರಲ್ಲಿ ಬೋಟ್​ ಮುಳುಗಿ 4 ಸಾವು.. ಮೂವರ ರಕ್ಷಣೆ, ಹಲವರು ನಾಪತ್ತೆ

https://newsfirstlive.com/wp-content/uploads/2024/04/Jhelum_River.jpg

Load More