Advertisment

25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು

author-image
AS Harshith
Updated On
25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು
Advertisment
  • ಅಮ್ಮ ಕಾಣೆಯಾಗಿದ್ದಾರೆಂದು ಠಾಣೆ ಮೆಟ್ಟಿಲೇರಿದ ಮಕ್ಕಳು
  • ಅಮ್ಮ ಬಾರಮ್ಮಾ ಎಂದ್ರು ಬರಲ್ಲಾ ಎಂದು ಪಟ್ಟು ಹಿಡಿದ ತಾಯಿ
  • ಬಾಡಿಗೆ ಕಟ್ಟಲಾಗದೆ ಮಕ್ಕಳನ್ನು ಹೊರ ಹಾಕಿದ ಮನೆ ಮಾಲೀಕ

ಬೆಳಗಾವಿ: ತಾಯಿಯೊಬ್ಬಳು ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ. ಸದ್ಯ ತಾಯಿಯಿಂದಾಗಿ ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.

Advertisment

ಯುವಕನ ಜೊತೆಗೆ ಎಸ್ಕೇಪ್​!

ವಿನಾಯಕ ಕೊಲ್ಕಾರ ಎಂಬ ಯುವಕನ ಜೊತೆಗೆ ಮಹಿಳೆ ಓಡಿ ಹೋಗಿದ್ದಾಳೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ನೆಲೆಸಿದ್ದಾಳೆ. ಸದ್ಯ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ.

3 ಮಕ್ಕಳು ಅನಾಥ

ಸರ್ಕಾರಿ ನೌಕರಿಯಲ್ಲಿದ್ದ ಗಂಡನ ಅಕಾಲಿಕ ನಿಧನದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಗಂಡ ತೀರಿ ಹೋದ ಬಳಿಕ 3 ಮಕ್ಕಳು ತಾಯಿ ಆಶ್ರಯದಲ್ಲಿದ್ದ ಬೆಳೆದರು. ಆದರೆ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.

publive-image

ತಾಯಿ ಕಾಣೆಯಾಗಿದ್ದಾಳೆ ಹುಡುಕಿಕೊಡಿ

ಏನು ತಿಳಿಯದ ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ತಾಯಿ ಬೇರೊಬ್ಬನ ಜೊತೆಗೆ ನೆಲೆಸಿರುವ ವಿಚಾರ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ನಿಮ್ಮೊಟ್ಟಿಗೆ ಬರಲ್ಲ ಎಂದು ನಲವತ್ತು ವರ್ಷದ ತಾಯಿ ಹೇಳಿದ್ದಾಳೆ.

Advertisment

ಇದನ್ನೂ ಓದಿ: ಆಂಟಿ ಜೊತೆಗೆ ಬಾಲಕನ ಲವ್​! 16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್!

ಬಾಡಿಗೆ ಕಟ್ಟದಕ್ಕೆ ಮನೆಯಿಂದ ಹೊರಕ್ಕೆ

ತಾಯಿಯ ವರ್ತನೆಗೆ ಬೇಸರಗೊಂಡ 3 ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದು, ತಾಯಿಯನ್ನ ತಮ್ಮೊಟ್ಟಿಗೆ ಕಳುಹಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅತ್ತ ಬಾಡಿಗೆ ಕಟ್ಟದ್ದಕ್ಕೆ ಮನೆ ಮಾಲೀಕರು‌ ಮಕ್ಕಳನ್ನ ಹೊರ ಹಾಕಿದ್ದು, ಸದ್ಯ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.. ಹಾಸನದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

Advertisment

ಇದು ನಮ್ಮ ವೈಯಕ್ತಿಕ ವಿಚಾರ

ತಾಯಿ ವಾಪಾಸ್​ ಬಂದರೆ ತಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆ ಅಂತ ಮಕ್ಕಳು ಹೇಳಿದ್ದಾರೆ. ಈ ಕುರಿತು ತಾಯಿಯನ್ನ ಮಾಧ್ಯದವರ ಪ್ರಶ್ನಿಸಿದ್ರೆ ರೋಷಾವೇಶ ತೋರಿಸುತ್ತಿದ್ದು, ಇದು ನಮ್ಮ ವೈಯಕ್ತಿಕ ವಿಚಾರ ನೀವ್ಯಾರು ಹೇಳುತ್ತಿದ್ದಾಳೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಚಿಕ್ಕಣ್ಣನ ಬೆನ್ನಲ್ಲೇ ‘ಗರಡಿ’ ನಟನಿಗೂ ಸಂಕಷ್ಟ! ಠಾಣೆಗೆ ಬನ್ನಿ ಎಂದ ಪೊಲೀಸರು

ಮಹಿಳೆಯಿಂದ ಚಪ್ಪಳಿ ಏಟು

ಇನ್ನು ಯುವಕ ವಿನಾಯಕ ಕೊಲ್ಕಾರ ಈ ಮೊದಲು ಮಹಿಳೆಯೋರ್ವಳಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದನು. ಫೋನ್ ಮಾಡಿ ಮಹಿಳೆಗೆ ಟಾರ್ಚರ್ ನೀಡಿದ್ದ ಎಂಬ ಕಾರಣಕ್ಕೆ ಏಟು ತಿಂದಿದ್ದನು. ಆತನ ಟಾರ್ಚರ್ ಸಹಿಸದೆ ಹುಡುಕಿಕೊಂಡು ಬಂದಿದ್ದ ಮಹಿಳೆ ಬಳಿಕ ಚಪ್ಪಲಿಯಿಂದ ವಿನಾಯಕ ಕೊಲ್ಕಾರಗೆ ಹೊಡೆದಿದ್ದಳು.

Advertisment

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ಗೆ ರೇಣುಕಾಸ್ವಾಮಿ ಸಿಕ್ಕಿಬಿದ್ದಿದ್ದು ಹೇಗೆ? ಪವಿತ್ರಾ ಗೌಡಗೆ ಏನ್​ ಮೆಸೇಜ್​ ಕಳಿಸಿದ್ರು?

ನಿನ್ ಮೇಲೆ ಮನಸಾಗಿದೆ..ಐಲವ್ ಯೂ

ವಿನಾಯಕ ಮಹಿಳೆಗೆ ಕಾಲ್ ಮಾಡಿ ನಿನ್ ಮೇಲೆ ಮನಸಾಗಿದೆ ಐಲವ್ ಯೂ ಎಂದಿದ್ದನಂತೆ. ವಿನಾಯಕನಿಗೆ ಮಹಿಳೆ ಚಪ್ಪಲಿ ಸೇವೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕೊಲೆ ಬಳಿಕ ದರ್ಶನ್​ ಹೋಗಿದ್ದು ಎಲ್ಲಿಗೆ? ವಿಜಯಲಕ್ಷ್ಮಿ ಫ್ಲಾಟ್​​ನಲ್ಲಿ ಪೊಲೀಸ್ರಿಗೆ ಸಿಕ್ಕಿದ್ದೇನು?

Advertisment

ಮಕ್ಕಳ ಕೂಗು ಆಲಿಸದ ತಾಯಿ

ಸದ್ಯ ಇದೇ ವಿನಾಯಕನ ಮೋಹದ ಬಲೆಗೆ ಮೂರು ಮಕ್ಕಳ ತಾಯಿ ಸಿಲುಕಿಕೊಂಡಿದ್ದಾಳೆ. ತಾಯಿಗಾಗಿ ಮೂವರು ಮಕ್ಕಳು ಹಾಗೂ ಅಜ್ಜಿ ಪರಿತಪಿಸುತ್ತಿದ್ದಾರೆ. ಆದರೆ ಹೆತ್ತ ತಾಯಿಗೆ ಮಕ್ಕಳ ಕೂಗು ಕೇಳಿಸುತ್ತಿಲ್ಲ ಅನ್ನೋದೇ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment