newsfirstkannada.com

ಒಂದು ಇಲಿ ಹಿಡಿಯಲು ₹41 ಸಾವಿರ, 168 ಇಲಿಗಳಿಗೆ ₹69.5 ಲಕ್ಷ; ಲಕ್ನೋ ರೈಲ್ವೇ ಲೆಕ್ಕಾಚಾರ ಕೇಳಿದ್ರೆ ಶಾಕ್ ಆಗ್ತೀರಾ

Share :

Published September 16, 2023 at 12:21pm

Update September 16, 2023 at 12:28pm

    ಲಕ್ನೋ ರೈಲ್ವೇ ವಿಭಾಗಕ್ಕೆ ದೊಡ್ಡ ಕಳಂಕ ತಂದ ಇಲಿಗಳ ಕಾಟ

    ಇಲಿ ಹಿಡಿಯುವ ವೆಚ್ಚದ ಬಗ್ಗೆ ವಿವರಣೆ ಕೇಳಿದ RTI ಕಾರ್ಯಕರ್ತ

    ಮೂರು ವರ್ಷ ರೈಲು ಬೋಗಿಗಳಲ್ಲಿ ಹಿಡಿದಿದ್ದು ಎಷ್ಟು ಇಲಿಗಳು?

ಲಕ್ನೋ: ಪಿಳಿ, ಪಿಳಿಯಂತ ಕಣ್ಣು ಬಿಡುವ ಇಲಿಗಳು ನೋಡೋಕೆ ಇವು ಏನ್ ಮಹಾ. ಅಬ್ಬಬ್ಬಾ ಅಂದ್ರೆ ಏನ್ ಮಾಡಿ ಬಿಡುತ್ತವೆ ಅಂತ ಅನ್ನಿಸುತ್ತೆ. ಆದರೆ ಇಲಿಗಳು ಕಾಟ ಕೊಡೋಕೆ ಶುರು ಮಾಡಿದ್ರೆ ನಿಜಕ್ಕೂ ದೊಡ್ಡ ತಲೆನೋವಾಗಿ ಬಿಡುತ್ತೆ. ಭಾರತೀಯ ರೈಲ್ವೆ ಇಲಾಖೆಗೆ ಈ ಇಲಿಗಳು ಕೊಡಬಾರದ ಕಾಟ ಕೊಟ್ಟಿದ್ದು, ಇದನ್ನ ಹಿಡಿಯಲು ಖರ್ಚು ಮಾಡಿರೋ ಹಣದ ಪ್ರಮಾಣ ಎಷ್ಟು ಅಂತ ನೀವು ಕೇಳಿದ್ರೆ ಶಾಕ್ ಆಗ್ತೀರಾ. ಸಖತ್ ಇಂಟ್ರೆಸ್ಟಿಂಗ್ ಆಗಿದೆ ಈ ಸ್ಟೋರಿ.

ಉತ್ತರ ಪ್ರದೇಶದ ಲಕ್ನೋ ರೈಲ್ವೇ ವಿಭಾಗಕ್ಕೆ ಇಲಿಗಳೇ ತಲೆ ನೋವಾಗಿದೆ. ಇಲಿ ಹಿಡಿಯಲು ರೈಲ್ವೆ ಅಧಿಕಾರಿಗಳು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಚಂದ್ರಶೇಖರ್ ಗೌರ್ ಎಂಬುವವರ ಈ ಬಗ್ಗೆ ಕುತೂಹಲಕಾರಿ ಮಾಹಿತಿ ಕಲೆಹಾಕಿದ್ದಾರೆ. ಚಂದ್ರಖೇಖರ್‌ ಗೌರ್‌ ಆರ್‌ಟಿಐ ಸಲ್ಲಿಸಿದ್ದು ಲಕ್ನೋ ರೈಲ್ವೇ ವಿಭಾಗ ಈ ಅರ್ಜಿಗೆ ಉತ್ತರವನ್ನು ನೀಡಿದೆ.

ಇದನ್ನೂ ಓದಿ: ಮುಂಬೈನಲ್ಲಿ ಸೇವೆ ನಿಲ್ಲಿಸಿದ ಐತಿಹಾಸಿಕ ಡಬಲ್​ ಡೆಕ್ಕರ್ ಬಸ್​ಗಳು.. ನೆನಪು ಮೆಲುಕು ಹಾಕಿದ ನೆಟ್ಟಿಗರು

ಮೂರು ವರ್ಷ ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ಖರ್ಚು

ಲಕ್ನೋ ರೈಲ್ವೇ ವಿಭಾಗದಲ್ಲಿ ಹಿಲಿ ಹಿಡಿಯಲು ಲಕ್ಷ, ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ಇದು ಆಶ್ಚರ್ಯ ಅನ್ನಿಸಿದರೂ ಸತ್ಯವಾದ ಸಂಗತಿ. ಮೂರು ವರ್ಷದಲ್ಲಿ ಬರೀ ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ಯಂತೆ. ಅಂದ್ರೆ ಒಂದು ವರ್ಷಕ್ಕೆ 23.2 ಲಕ್ಷ ರೂಪಾಯಿಯಂತೆ 2020ರಿಂದ 2022ರವರೆಗೆ ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ಖರ್ಚಾಗಿದೆ.

ಲಕ್ನೋ ರೈಲ್ವೇ ವಿಭಾಗದಲ್ಲಿ ಮೂರು ವರ್ಷ ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರೋ ರೈಲ್ವೆ ಇಲಾಖೆ ಹಾಗಿದ್ರೆ ಎಷ್ಟು ಇಲಿಗಳನ್ನು ಹಿಡಿದಿರಬಹುದು ಗೊತ್ತಾ. ಮೂರು ವರ್ಷ ರೈಲು ಬೋಗಿಗಳಲ್ಲಿ ಬರೀ 168 ಇಲಿಗಳನ್ನು ಹಿಡಿಯಲಾಗಿದ್ಯಂತೆ. ಒಂದು ಇಲಿ ಹಿಡಿಯಲು ಸರಾಸರಿ 41 ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಅಬ್ಬಬ್ಬಾ ಇಲಿ ಹಿಡಿಯೋಕೆ ಇಷ್ಟೊಂದು ಖರ್ಚಾಗುತ್ತೆ ಅಂದ್ರೆ ಯಾರಾದ್ರೂ ನಂಬುತ್ತಾರಾ. ಇಲಿ ಹಿಡಿಯೋ ಕಾಂಟ್ರ್ಯಾಕ್ಟ್‌ ತೆಗೆದುಕೊಂಡವರು ಲಕ್ಷಾಂತರ ರೂಪಾಯಿಯನ್ನು ಗುಳುಂ ಮಾಡಿದ್ದಾರೆ. ಆರ್‌ಟಿಐ ಅರ್ಜಿಗೆ ಕೇವಲ ಲಕ್ನೋ ರೈಲ್ವೇ ವಿಭಾಗ ಮಾತ್ರ ಈ ಉತ್ತರ ನೀಡಿದೆ. ದೆಹಲಿ, ಅಂಬಾಲ, ಫಿರೋಜ್ ಪುರ, ಮೊರದಾಬಾದ್‌ ರೈಲ್ವೇ ವಿಭಾಗಗಳು ಇನ್ನೂ ಇಲಿ ಹಿಡಿಯುವ ವೆಚ್ಚದ ಬಗ್ಗೆ ಉತ್ತರ ನೀಡಿಲ್ಲ. ಉಳಿದ ರೈಲ್ವೆ ವಿಭಾಗಗಳು ಇಲಿ ಹಿಡಿದ ಖರ್ಚಿನ ಲೆಕ್ಕ ಹೇಳಿದ್ರೆ ಇನ್ನೆಷ್ಟು ಲಕ್ಷದ ಅಕ್ರಮ ಹೊರ ಬರುತ್ತೋ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಇಲಿ ಹಿಡಿಯಲು ₹41 ಸಾವಿರ, 168 ಇಲಿಗಳಿಗೆ ₹69.5 ಲಕ್ಷ; ಲಕ್ನೋ ರೈಲ್ವೇ ಲೆಕ್ಕಾಚಾರ ಕೇಳಿದ್ರೆ ಶಾಕ್ ಆಗ್ತೀರಾ

https://newsfirstlive.com/wp-content/uploads/2023/09/Railway-Rat.jpg

Load More