newsfirstkannada.com

ಹಾಡಹಗಲೇ ನಡು ರಸ್ತೆಯಲ್ಲೇ ರೌಡಿಶೀಟರ್ ಮೇಲೆ ಡೆಡ್ಲಿ ಅಟ್ಯಾಕ್; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published June 5, 2024 at 3:15pm

Update June 5, 2024 at 3:46pm

  ಲಾಂಗ್‌ನಿಂದ, ಹಲವು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಕಿರಾತಕರು

  ಸ್ಯಾಂಟ್ರೋ ಕಾರಿನಲ್ಲಿ ಬಂದು ಆಕ್ಟಿವ್ ಹೋಂಡಾಗೆ ಡಿಕ್ಕಿ ಹೊಡೆದ ಹಂತಕರು

  3 ಕೊಲೆ, ಅತ್ಯಾಚಾರ, ದರೋಡೆ ಕೇಸ್​ನಲ್ಲಿ ಆರೋಪಿಯಾಗಿದ್ದ ಚೈಲ್ಡ್ ರವಿ

ಹಾಸನ: ಬೆಳ್ಳಂಬೆಳಗ್ಗೆ ಹಂತಕರು ರೌಡಿ ಶೀಟರ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರೋ ಘಟನೆ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೈಲ್ಡ್ ರವಿ (45) ಹತ್ಯೆಯಾದ ರೌಡಿಶೀಟರ್.

ಇದನ್ನು ಓದಿ: ಉತ್ತರಕಾಶಿಯಲ್ಲಿ ಭಾರೀ ದುರಂತ.. ಕರ್ನಾಟಕದ 8 ಪ್ರವಾಸಿಗರು ದಾರುಣ ಸಾವು

ಇಂದು ಬೆಳಿಗ್ಗೆ 7:55ಕ್ಕೆ ಬಿಳಿ ಬಣ್ಣ ಸ್ಯಾಂಟ್ರೋ ಕಾರಿನಲ್ಲಿ ಬಂದ ಹಂತಕರು ಏಕಾಏಕಿ ಆಕ್ಟಿವ್ ಹೋಂಡಾಗೆ ಡಿಕ್ಕಿ ಹೊಡೆದಿದ್ದಾರೆ. ಎದುರಿನಿಂದ ಬಲ ಭಾಗದಲ್ಲಿ ಆಕ್ಟಿವ್ ಹೋಂಡಾದಲ್ಲಿ ಬರುತ್ತಿದ್ದ ರೌಡಿಶೀಟರ್ ರವಿಗೆ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ. ಕಾರು ಗುದಿದ್ದ ರಭಸಕ್ಕೆ ಚೈಲ್ಡ್ ರವಿ ಕೆಳಗೆ ಬಿದ್ದಿದ್ದಾನೆ. ರವಿ ಕೆಳಗೆ ಬಿಳುತ್ತಿದ್ದಂತೆ ಕಾರಿನಿಂದ ಇಳಿದ ನಾಲ್ವರು ಹಂತಕರು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ಲಾಂಗ್‌ನಿಂದ ರವಿಗೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾದ ರೌಡಿಶೀಟರ್ ಮೂರು ಕೊಲೆ, ಅತ್ಯಾಚಾರ, ದರೋಡೆ ಕೇಸ್​​ನಲ್ಲಿ ಆರೋಪಿಯಾಗಿದ್ದ.

ಇನ್ನು, ರವಿಯನ್ನು ಬರ್ಬರವಾಗಿ ಕೊಲೆ ಮಾಡಿದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರವಿಯನ್ನು ಹಂತಕರು ಅಟ್ಯಾಕ್​ ಮಾಡುತ್ತಿರುವುದನ್ನು ನೋಡಿದ ಶಾಲಾ ಮಕ್ಕಳು ಹಾಗೂ ಸ್ಥಳೀಯರು ಜೀವ ಭಯದಿಂದ ಓಡಿ ಹೋಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ನಡು ರಸ್ತೆಯಲ್ಲೇ ರೌಡಿಶೀಟರ್ ಮೇಲೆ ಡೆಡ್ಲಿ ಅಟ್ಯಾಕ್; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2024/06/death.jpg

Load More