ಮ್ಯಾಚಿಂಗ್ ಬ್ಯಾಗ್, ಮೇಕಪ್‌, ಬಾಯ್ ಫ್ರೆಂಡ್.. ಸೌದಿ ಮಿಲಿಯನೇರ್ ಗಂಡನಿಂದ ಹೆಂಡತಿಗೆ 5 ಕಠಿಣ ರೂಲ್ಸ್!

author-image
admin
Updated On
ಮ್ಯಾಚಿಂಗ್ ಬ್ಯಾಗ್, ಮೇಕಪ್‌, ಬಾಯ್ ಫ್ರೆಂಡ್.. ಸೌದಿ ಮಿಲಿಯನೇರ್ ಗಂಡನಿಂದ ಹೆಂಡತಿಗೆ 5 ಕಠಿಣ ರೂಲ್ಸ್!
Advertisment
  • ಹೆಂಡತಿಯ ಬಿಕನಿ ಆಸೆಗಾಗಿ 418 ಕೋಟಿಯ ದ್ವೀಪ ಖರೀದಿಸಿದ್ದ
  • ಗಂಡನ 5 ಕಠಿಣ ರೂಲ್ಸ್ ಬಗ್ಗೆ ವಿಡಿಯೋ ಮಾಡಿದ ಸೌದಿ ಬ್ಯೂಟಿ
  • ಮನೆಯಲ್ಲಿ ಅಡುಗೆ ಮಾಡಬಾರದು, ಪ್ರತಿದಿನ ಹೋಟೆಲ್​ನಲ್ಲೇ ಊಟ, ತಿಂಡಿ

ಸೌದಿ ಅರೇಬಿಯಾ ಅಂದ್ರೆ ಕಣ್ಮುಂದೆ ಬರೋದು ಗಗನ ಚುಂಬಿ ಕಟ್ಟಡಗಳು. ದೊಡ್ಡ, ದೊಡ್ಡ ಹೋಟೆಲ್‌ಗಳು. ಶ್ರೀಮಂತ ಉದ್ಯಮಿಗಳು. ಇವರ ಜೀವನ ಶೈಲಿ ಎಷ್ಟು ಐಷಾರಾಮಿ ಆಗಿದೆ ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಸೌದಿ ಶ್ರೀಮಂತನ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಮಿಸ್​​ ಯೂನಿವರ್ಸ್​ನಲ್ಲಿ ಫಸ್ಟ್​ ಟೈಮ್​​​ ಸೌದಿ ಅರೇಬಿಯಾ ಸ್ಪರ್ಧೆ; ಆ ಸುಂದರಿ ಯಾರು..? 

publive-image

ಸೌದಿ ಅಲ್ ನದಾಕ್ ಅವರ ಶ್ರೀಮಂತ ಪತಿ ಇತ್ತೀಚೆಗೆ ದೊಡ್ಡ ಸುದ್ದಿಯಾಗಿದ್ದರು. ತನ್ನ ಹೆಂಡತಿ ಬಿಕನಿಯಲ್ಲಿ ಓಡಾಡಲು 50 ಮಿಲಿಯನ್ ಡಾಲರ್ ಖರ್ಚು ಮಾಡಿ ಐಸ್‌ಲ್ಯಾಂಡ್ ಅನ್ನೇ ಖರೀದಿ ಮಾಡಿದ್ದರು. ಇದಾದ ಬಳಿಕ ಸೌದಿ ಅಲ್ ನದಾಕ್ ತನ್ನ ಗಂಡನ 5 ಕಠಿಣ ರೂಲ್ಸ್ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

26 ವರ್ಷದ ಸೌದಿ ಅಲ್ ನದಾಕ್ ಅವರು ಹೇಳುವ ಪ್ರಕಾರ ಸೌದಿಯ ಶ್ರೀಮಂತರಿಗೆ ಹೆಂಡತಿಯಾದರೆ ಹಣ, ಸಂಪತ್ತು ಎಲ್ಲವೂ ಇರುತ್ತೆ. ಆದರೆ ಹೆಂಡತಿಯರು ಮಾತ್ರ ಗಂಡ ಹೇಳಿದಂತೆ ಕೇಳಿಕೊಂಡು ಇರಬೇಕು. ಇದು ನನ್ನ ಮಿಲಿಯನೇರ್ ಗಂಡನ ಕಠಿಣ ರೂಲ್ಸ್ ಎಂದು ಬರೆದುಕೊಂಡಿದ್ದಾರೆ.

publive-image

ಏನದು 5 ಕಠಿಣ ರೂಲ್ಸ್?
ಕಾಲಿಗೆ ಧರಿಸುವ ಶೂ ಬಣ್ಣಕ್ಕೆ ಮ್ಯಾಚ್ ಆಗುವಂಥ ಬ್ಯಾಗ್ ಬಳಸಬೇಕು
ಹೆಂಡತಿ ಕೆಲಸಕ್ಕೆ ಹೋಗಬಾರದು, ಹಣದ ಖರ್ಚು ಎಲ್ಲವನ್ನೂ ಗಂಡನೇ ಮಾಡುತ್ತಾನೆ
ಮನೆಯಲ್ಲಿ ಅಡುಗೆ ಮಾಡಬಾರದು, ಪ್ರತಿದಿನ ಹೋಟೆಲ್​ನಲ್ಲೇ ಊಟ, ತಿಂಡಿ
ಪ್ರತಿ ದಿನವೂ ಹೇರ್, ಮೇಕಪ್ ಚೆನ್ನಾಗಿ ಮಾಡಿಕೊಳ್ಳಬೇಕು
ಹೆಂಡತಿಗೆ ಬೇರೆ ಯಾರು ಬಾಯ್ ಫ್ರೆಂಡ್ ಇರಬಾರದು

ಇದನ್ನೂ ಓದಿ: ಹೆಂಡತಿ ಬಿಕನಿಯಲ್ಲಿ ಓಡಾಡಲಿ ಅಂತ ಈ ದುಬೈ ಗಂಡ ಮಾಡಿದ್ದೇನು ಅಂತ ಕೇಳಿದ್ರೆ ಶಾಕ್ ಆಗ್ತಿರಾ! 

ಸೌದಿ ಅರೇಬಿಯಾ ಶ್ರೀಮಂತ ಗಂಡನ ಈ 5 ಕಂಡೀಷನ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಈ ವಿಡಿಯೋವನ್ನು ಬರೋಬ್ಬರಿ 35 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. 52 ಸಾವಿರಕ್ಕೆ ಅಧಿಕ ಜನ ಲೈಕ್ ಮಾಡಿ ಕಮೆಂಟ್‌ಗಳನ್ನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment