Advertisment

ಜಸ್ಟ್ 50 ಸಾವಿರ ರೂಪಾಯಿಗೆ ನಡೆದು ಹೋಯ್ತು ಭೀಕರ ಕೊ*ಲೆ; ಬಿಷ್ಣೋಯಿ ಗ್ಯಾಂಗ್ ಮಾಡಿದ್ದ ಪ್ಲಾನ್ ಎಂತಹದ್ದು?

author-image
Gopal Kulkarni
Updated On
ಎನ್​ಸಿಪಿ ಹಿರಿಯ ನಾಯಕ ಬಾಬಾ ಸಿದ್ಧಕಿ ಮೇಲೆ ಗುಂಡಿನ ದಾಳಿ; ಲೀಲಾವತಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಬಾ
Advertisment
  • ಬಾಲಿವುಡ್​ ಸ್ನೇಹಿ, ಬಾಂದ್ರಾಬಾಯ್​ ಭೀಕರವಾಗಿ ಹ*ತ್ಯೆಯಾಗಿದ್ದು ಹೇಗೆ?
  • 50 ಸಾವಿರ ರೂಪಾಯಿಗೆ ಸಿದ್ಧಕಿ ಹೆಣ ಉರುಳಿಸಿತಾ ಬಿಷ್ಣೋಯಿ ಗ್ಯಾಂಗ್?
  • ಇಫ್ತಾರ್ ಕೂಟ, ಬಾಲಿವುಡ್ ನಂಟು ಹೇಗಿತ್ತು ಸಿದ್ಧಕಿ ಐಷಾರಾಮಿ ಬದುಕು?​

ಕೊಲೆ, ಕಗ್ಗೊಲೆ.. ರಣ ರಣ ರಾಜಕೀಯದ ರಾಜ್ಯವಾದ ಮಹಾರಾಷ್ಟ್ರದ ನೆಲದಲ್ಲಿ ಭಯಾನನ ಕಗ್ಗೊಲೆಯಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ಪಾಲಿನ ಪಾರ್ಟಿ ಗುರು. ಮಹಾರಾಷ್ಟ್ರ ರಾಜಕಾರಣಿಗಳ ಪಾಲಿನ ಬಾಬಾ. ಮುಂಬೈ ಜನರ ಕಣ್ಣಲ್ಲಿ ಬಾಂದ್ರಾ ಭಾಯ್ ಆಗಿದ್ದ ಈ ಪವರ್ ಫುಲ್ ನಾಯಕನನ್ನೇ ಗುಂಡಿನ ಸರಿಮಳೆಗೈದು ಕೊಲ್ಲಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್‌ರಿಗೂ ಇವರು ಆತ್ಮೀಯರಾಗಿದ್ದರು. ಹೆಸರು ಸಿದ್ದಿಕಿ, ಬಾಬಾ ಸಿದ್ದಿಕಿ. ಶನಿವಾರ ರಾತ್ರಿ ಪಟಾಕಿ ಸದ್ದಿನ ಮಧ್ಯವೇ ಗುಂಡಿನ ಸದ್ದು ಮೊಳಗಿದೆ. ಪವರ್ ಫುಲ್ ಲೀಡರ್ ಬಾಬಾ ಸಿದ್ದಿಕಿಯ ದೇಹ ಸೀಳಿರೋ ಗುಂಡುಗಳು ನೆತ್ತರ ಕೋಡಿ ಹರಿಸಿವೆ!

Advertisment

ಇದನ್ನೂ ಓದಿ: ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್​ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ

ಕಾಂಗ್ರೆಸ್‌ನಲ್ಲಿ 48 ವರ್ಷಗಳ ಕಾಲ ಇದ್ದು ಶಾಸಕರಾಗಿ, ಸಚಿವರಾಗಿ, ಹಿರಿಯ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದ ಈ ಬಾಬಾ ಸಿದ್ಧಿಕಿ ಬಾಲಿವುಡ್‌ ಸೆಲೆಬ್ರಿಟಿಗಳ ಪಾಲಿನ ಪಾರ್ಟಿ ಬಾಸ್. ಇಂಥಾ ಬಾಬಾ ಸಿದ್ದಿಕಿಗೆ ಶನಿವಾರವೇ ತಮ್ಮ ಜೀವನದ ಕಟ್ಟ ಕಡೇ ದಿನವಾಗುತ್ತೆ ಅನ್ನೋ ಸಣ್ಣ ಕಲ್ಪನೆ ಕೂಡ ಇರಲಿಲ್ಲ. ಕಳೆದ ಫ್ರೆಬ್ರವರಿ ತಿಂಗಳಲ್ಲಿನ್ನು ಕಾಂಗ್ರೆಸ್ ಪಕ್ಷ ತೊರೆದು ಅಜಿತ್ ಪವಾರ್‌ ಬಣದ ಎನ್‌ಸಿಪಿ ಪಕ್ಷಕ್ಕೆ ಸೇರಿದ್ದ ಬಾಬಾ ಸಿದ್ದಿಕಿ ದಸರಾ ಸೆಲೆಬ್ರೇಷನ್ ಮೂಡ್‌ನಲ್ಲಿದ್ರು. ತಮ್ಮ ಆಫೀಸ್‌ ಪಕ್ದಲ್ಲೇ ಇದ್ದ ಮಗ ಜೀಶನ್ ಸಿದ್ದಿಕಿಯ ಮನೆಯತ್ತ ಹೆಜ್ಜೆ ಹಾಕಿದ್ರು. ಮನೆ ಮುಂದೆ ಪಟಾಕಿ ಹೊಡೆದು ಸಂಭ್ರಮಿಸ್ತಿದ್ರು. ಎಲ್ಲಾ ಟೆನ್ಷನ್ ಮರೆತು ಎಲ್ಲರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದ ಹೊತ್ತಲ್ಲೇ ಎಂಟ್ರಿಯಾಗಿತ್ತು ಹಂತಕರ ಬೈಕು!

ಮಗನ ಮನೆ ಮುಂದೆ ಪಟಾಕಿ ಹೊಡೀತ್ತಿದ್ರು, ಬಂದ್ರು ಹಂತಕರು!

ದಸರಾ ಸಂಭ್ರಮದಲ್ಲಿದ್ದ ಬಾಬಾ ಸಿದ್ದಿಕಿ ತಮ್ಮ ಮಗ ಮತ್ತು ಶಾಸಕನೂ ಆಗಿರೋ ಜಿಶಾನ್ ಸಿದ್ದಿಕಿ ಮನೆಗೆ ಹೋಗಿದ್ರು. ಬಾಬಾ ಸಿದ್ದಿಕಿ ಎನ್‌ಸಿಪಿ ಕಚೇರಿಯ ಪಕ್ಕದಲ್ಲೇ ಇದ್ದ ಮಗನ ಮನೆಗೆ ತೆರಳಿ ವಾಪಸ್ ಬರೋ ವೇಳೆ ಪಠಾಕಿ ಹೊಡೆದು ಸಂಭ್ರಮಿಸುತ್ತಿದ್ರು. ಆಗ ರಾತ್ರಿ 9 ಗಂಟೆ 15 ನಿಮಿಷವಾಗಿತ್ತು. ಅದೇ ವೇಳೆ ಮುಖಕ್ಕೆ ಮಾಸ್ಕ್ ಹೊಕ್ಕೊಂಡು, ಕೈಗೆ ಕರ್ಚೀಫ್ ಕಟ್ಕೊಂಡಿದ್ದ ಮೂವರು ಹಂತಕರು ಬೈಕ್‌ನಲ್ಲಿ ಎಂಟ್ರಿಯಾಗಿದ್ರು. ಯಾವುದೇ ವಾರ್ನಿಂಗ್ ಕೊಡದೆ 9.9 ಎಂಎಂ ಪಿಸ್ತೂಲ್‌ನಿಂದ ಬಾಬಾ ಸಿದ್ದಿಕಿಯತ್ತ 6 ರೌಂಡ್ ಗುಂಡಿನ ಸುರಿಮಳೆಗೈದು ಎಸ್ಕೇಪ್ ಆಗ್ಬಿಟ್ರು!
ಪಟಾಕಿ ಸದ್ದಿನ ಮಧ್ಯ ಸದ್ದು ಮಾಡುತ್ತಲೇ ನುಗ್ಗಿ ಬಂದ 6 ಗುಂಡುಗಳ ಪೈಕಿ ನಾಲ್ಕು ಬುಲೆಟ್ ಬಾಬಾ ಸಿದ್ದಿಕಿಯ ದೇಹ ಹೊಕ್ಕುಬಿಟ್ಟಿದ್ದವು. ಸಿದ್ದಿಕಿ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡುಗಳು ತಗುಲಿ ಸ್ಥಳದಲ್ಲೇ ಕುಸಿದು ಬಿದ್ರು. ಸಿದ್ದಿಕಿ ಕಡೆ ಫೈರ್ ಆದ 6 ಗುಂಡುಗಳಲ್ಲಿ 4 ಗುಂಡು ದೇಹ ಸೀಳಿದ್ದವು. ಗುಂಡು ಹೊಕ್ಕಿದಷ್ಟೇ ವೇಗವಾಗಿ ಪ್ರಜ್ಞೆ ತಪ್ಪಿ ಬಿದ್ದ ಬಾಬಾ ಸಿದ್ಧಿಕಿಯನ್ನ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಯ್ತು. ಆದರೆ, ನಾಲ್ಕು ಗುಂಡು ಎದೆ, ಹೊಟ್ಟೆಯನ್ನ ಅಕ್ಷರಶಃ ಸೀಳಿ ಹಾಕಿದ್ದವು. ಮಾಡೋ ಪ್ರಯತ್ನವನ್ನೆಲ್ಲಾ ಮಾಡಿದ್ದ ವೈದ್ಯರು ತಲೆತಗ್ಗಿಸಿಕೊಂಡೇ ಆಪರೇಷನ್‌ ಥಿಯೇಟರ್‌ನಿಂದ ಹೆಜ್ಜೆಹಾಕಿದ್ರು. ಮಹಾರಾಷ್ಟ್ರದ ಪವರ್ ಫುಲ್ ನಾಯಕ , ಬಾಲಿವುಡ್ ಪಾಲಿನ ಬಾಂದ್ರಾ ಭಾಯ್ ಬಾಬಾ ಸಿದ್ಧಿಕಿ ಉಸಿರು ನಿಂತುಹೋಗಿತ್ತು. ಸುದ್ದಿ ಕಿವಿಗಪ್ಪಳಿಸುತ್ತಲೇ ಎಲ್ಲರಿಗೂ ಆಗಿದ್ದು ಆಘಾತವಲ್ಲ. ಬರಸಿಡಿಲಿನಂತಾ ಅನುಭವ!

Advertisment

publive-image

ಜಸ್ಟ್​​ ₹50,000ಕ್ಕೆ ಡೀಲ್​! ಪವರ್​​ಫುಲ್​ ಬಾಬಾ ಸಿದ್ದಿಕಿ ಹತ್ಯೆ!
ಯಾರು? ಮಹಾರಾಷ್ಟ್ರದ ಪವರ್ ಫುಲ್ ರಾಜಕಾರಣಿ, ಬಾಲಿವುಡ್ ಪಾಲಿನ ಪಾರ್ಟಿ ದೊರೆ, ಮುಂಬೈ ಪಾಲಿನ ಅಣ್ಣ ಆಗಿದ್ದ ಈ ಬಾಬಾ ಸಿದ್ಧಿಕಿಯನ್ನ ಕೊಂದವರು ಯಾರು? ದಸರಾ ಸೆಲೆಬ್ರೇಷನ್‌ ಟೈಮಲ್ಲಿ ಬೈಕ್‌ನಲ್ಲಿ ಬಂದ ಆ ಮೂವರು ಹಂತಕರ ಹಿನ್ನೆಲೆಯೇನು? ಏನದು ಡೆಡ್ಲಿ ಕೊಲೆಯ ಡೆಡ್ಲಿ ರಹಸ್ಯ ಎಂಬುದನ್ನ ತಿಳ್ಕೋಬೇಕು ಅಂದ್ರೆ ಈ ಬಾಬಾ ಸಿದ್ಧಿಕಿಯ ಸಂಪೂರ್ಣ ಜಾತಕವನ್ನೊಮ್ಮೆ ತಿರುವಿ ಹಾಕಲೇಬೇಕು. ಕಗ್ಗೊಲೆಯಾಗಿರೋ ಸಿದ್ಧಿಕಿಯ ಜಾತಕದ ಮೊದಲ ಪುಟ ತೆರೆದುಕೊಳ್ಳೋದು ಶಾರುಖ್ ಮತ್ತು ಸಲ್ಮಾನ್‌ ಖಾನ್‌ ಪರಸ್ಪರ ತಬ್ಬಿಕೊಂಡು ದೋಸ್ತಿಯ ಸಂದೇಶ ಸಾರಿದ ಈ ವಿಡಿಯೋದಿಂದ!

publive-image

ಕುಚ್ಚಿಕುಗಳಂತೆ ಪರಸ್ಪರ ತಬ್ಬಿಕೊಂಡು ವಿಶ್ ಮಾಡಿದ ಸಲ್ಮಾನ್ ಮತ್ತು ಶಾರುಖ್. ಇಬ್ಬರೂ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು. ಕೇವಲ ಬಾಲಿವುಡ್ ಅಷ್ಟೇ ಅಲ್ಲ ಇಂಡಿಯಾದಲ್ಲಿ ಈ ಇಬ್ಬರ ಹವಾ, ಅಲೆ, ಪಾಪ್ಯುಲಾರಿಟಿ ಬಗ್ಗೆ ಹೇಳೋ ಅಗತ್ಯವೇ ಇಲ್ಲ. ಇಂಡಿಯನ್ ಸಿನಿಮಾ ಲೋಕವನ್ನೇ ತಮ್ಮದೇ ರೀತಿಯಲ್ಲಿ ಆಳಿದ ಸ್ಟಾರ್ ನಟರಿವರು. ಈ ವಿಡಿಯೋ ಶೂಟ್ ಆಗಿದ್ದು 2013 ರಲ್ಲಿ. ಆ ವೇಳೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಡುವೆ ಕೋಲ್ಡ್ ವಾರ್ ಶುರುವಾಗಿತ್ತು. ಈ ಸ್ಟಾರ್‌ಗಳಿಬ್ರು ದುಷ್ಮನ್‌ಗಳಂತಾಗಿದ್ದರು. ಒಬ್ಬರ ಮುಖವನ್ನ ಮತ್ತೊಬ್ರು ನೋಡುತ್ತಿರಲಿಲ್ಲ. ಅಂಥಾ ಟೈಮಲ್ಲಿ ದಿಢೀರಂತ ಕಾರ್ಯಕ್ರಮವೊಂದರಲ್ಲಿ ಹಾಜರಾಗಿದ್ದ ಇವರಿಬ್ರೂ ತಬ್ಬಿಕೊಂಡು ಜಗತ್ತಿಗೆ ಸಿಗ್ನಲ್ ನೀಡಿ ಶಾಕ್ ಕೊಟ್ಟುಬಿಟ್ಟರು. ಇವರಿಬ್ಬರ ದುಷ್ಮನಿಗೆ ಅಂತ್ಯ ಹಾಡೋಕೆ ಸಾಧ್ಯವೇ ಇಲ್ಲಾ ಎಂದುಕೊಂಡಿದ್ದ ಟೈಮಲ್ಲಿ.. ಇಬ್ಬರನ್ನೂ ಒಂದುಮಾಡಿದ್ದ ಗಟ್ಟಿಗ ಬೇರಾರೂ ಅಲ್ಲ. ಇಂದು ಮುಂಬೈನಲ್ಲಿ ಕಗ್ಗೊಲೆಯಾಗಿರೋ ಪವರ್ ಫುಲ್ ಲೀಡರ್ ಬಾಬಾ ಸಿದ್ಧಿಕಿ!

publive-image
ಬಾಬಾ ಸಿದ್ಧಿಕಿ ಕೇವಲ ರಾಜಕೀಯ ನಾಯಕ ಆಗಿರಲಿಲ್ಲ. ಬದಲಾಗಿ, ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಆಹ್ವಾನಿಸಿ ಐಷಾರಾಮಿ ಪಾರ್ಟಿಗಳನ್ನು ಕೊಡುತ್ತಿದ್ದರು. ಬಾಲಿವುಡ್ ಬೆಡಗಿಯರನ್ನು ಕರೆಸಿ ಕುಣಿಸುತ್ತಿದ್ರು. ಅದೇ ರೀತಿ ಇಫ್ತಾರ್ ಕೂಟವನ್ನು ನಡೆಸೋದ್ರಲ್ಲಿ ಮುಂಬೈನಲ್ಲೇ ಫೇಮಸ್ ಆಗಿದ್ದರು. ವಿಶೇಷ ಅಂದ್ರೆ, ಬಾಬಾ ಸಿದ್ಧಿಕಿಯ ಹೆಸರು ದೇಶದೆಲ್ಲೆಡೆ ಹೆಸರಾಗುವಂತೆ ಮಾಡಿದ್ದು 2013 ರ ಇಫ್ತಾರ್ ಕೂಟ. ಆ ಸಂದರ್ಭದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಡುವೆ ಕೋಲ್ಡ್ ವಾರ್ ನಡೀತಿತ್ತು. ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ತಿರಲಿಲ್ಲ. ಇಬ್ಬರು ಮಾತನಾಡುತ್ತಿರಲಿಲ್ಲ. ಯಾವುದೇ ಕಾರ್ಯಕ್ರಮಗಳಿಗೂ ಅವರು ಬಂದ್ರೆ ಇವರು.. ಇವರು ಬಂದ್ರೆ ಅವು ಹೋಗ್ತಾ ಇರ್ಲಿಲ್ಲ. ಆದ್ರೆ, ಇಬ್ಬರ ನಡುವಿನ ಮನಸ್ತಾಪವನ್ನು ಸರಿಪಡಿಸೋ ಧೈರ್ಯ ಯಾರಿಗೂ ಇರಲಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರೇ ಅದೊಂದು ದುಸ್ಸಾಹಸ ಅಂತಾ ಕೈಚೆಲ್ಲಿ ಕೂತಿದ್ರು. ಅಂಥಾ ಟೈಮಲ್ಲಿ ಇಬ್ಬರು ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನು ಒಂದುಗೂಡಿಸಿದ್ದು ಇದೇ ಬಾಬಾ ಸಿದ್ಧಿಕಿ.

Advertisment

publive-image

2013 ರ ಇಫ್ತಾರ್ ಕೂಟಕ್ಕೆ ಬಾಬಾ ಸಿದ್ಧಿಕಿ ಶಾರುಖ್ ಮತ್ತು ಸಲ್ಮಾನ್ ಖಾನ್. ಇಬ್ಬರಿಗೂ ಆಹ್ವಾನ ಕೊಟ್ಟಿದ್ದರು. ಆದರೆ, ಎಲ್ಲರಿಗೂ ಭಯ ಇತ್ತು. ದುಷ್ಮನ್‌ಗಳಂತಾಗಿದ್ದ ಶಾರುಖ್ ಮತ್ತು ಸಲ್ಮಾನ್‌ ಖಾನ್‌ರನ್ನು ಒಟ್ಟಿಗೆ ಕರೆಸುತ್ತಿರೋದು ಅದೇನು ಪ್ರಾಬ್ಲಂ ಆಗುತ್ತೋ ಅಂತಾ ಎಲ್ರೂ ಟೆನ್ಷನ್‌ನಲ್ಲಿದ್ದರು. ಆದ್ರೆ, ಇಬ್ಬರನ್ನೂ ಕರೆಸಿದ್ದ ಬಾಬಾ ಸಿದ್ಧಿಕಿ ಇಫ್ತಾರ್ ಕೂಟದಲ್ಲೇ ಒಂದು ಮಾಡಿದ್ದರು. ಶಾರುಖ್ ಮತ್ತು ಸಲ್ಮಾನ್ ದ್ವೇಷ ಮರೆತು ಇದೇ ಬಾಬಾ ಸಿದ್ಧಿಕಿ ಸಮ್ಮುಖದಲ್ಲೇ ತಬ್ಬಿಕೊಂಡು ಒಂದಾಗಿದ್ದರು. ಅಂದಿನಿಂದ ಬಾಬಾ ಸಿದ್ಧಿಕಿಯ ವರ್ಚಸ್ಸು ಮತ್ತಷ್ಟು ಹೆಚ್ಚಾಗಿತ್ತು. ಶಾರುಖ್, ಸಲ್ಮಾನ್, ಸಂಜಯ್ ದತ್ ಸೇರಿದಂತೆ ಬಾಲಿವುಡ್‌ನ ದಿಗ್ಗಜರು ಇವರು ಆಯೋಜಿಸ್ತಿದ್ದ ಇಫ್ತಾರ್ ಕೂಟಕ್ಕೆ ಮಿಸ್ ಮಾಡದೆ ಹಾಜರಾಗ್ತಿದ್ರು.

ಇದನ್ನೂ ಓದಿ:ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್​ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ

ಬಾಲಿವುಡ್‌ ಮಂದಿಗೆ ಬಾಬಾ ಸಿದ್ಧಿಕಿ ಸಮಸ್ಯೆಗಳನ್ನು ಸರಿಪಡಿಸೋ ಮಧ್ಯವರ್ತಿ. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಮಧ್ಯೆ ಏನೇ ಸಮಸ್ಯೆಗಳಾದರೂ ಅದನ್ನು ನಯವಾಗಿ ಬಗೆ ಹರಿಸುತ್ತಿದ್ದಿದ್ದು ಇದೇ ಬಾಬಾ ಸಿದ್ಧಿಕಿ. ಇಂಥಾ ಪ್ರಬಲ ರಾಜಕಾರಣಿ, ಬಾಲಿವುಡ್ ಪಾಲಿನ ಬಾಬಾ ಇಂದು ಹಂತಕ ಗುಂಡೇಟಿಗೆ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಾಗಾದ್ರೆ, ಇವ್ರನ್ನ ಕೊಂದವಱರು? ಹಂತಕರಿಗೆ ಸುಪಾರಿ ಕೊಟ್ಟವಱರು? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಅಂದ್ರೆ ಬಾಬಾ ಸಿದ್ಧಿಕಿಯ ರಾಜಕೀಯ ಜರ್ನಿಯ ಪುಟಗಳನ್ನೂ ತೆರೆದು ನೋಡ್ಲೇಬೇಕು.

Advertisment

48 ವರ್ಷ ಕಾಂಗ್ರೆಸ್‌ ಲೀಡರ್, 9 ತಿಂಗಳ ಹಿಂದೆ ಪಕ್ಷಾಂತರ!

ಜಿಯಾವುದ್ದೀನ್ ಸಿದ್ಧಿಕಿ, ಬಾಬಾ ಸಿದ್ಧಿಕಿ, ಬಾಂದ್ರಾ ಭಾಯ್ ಸಿದ್ಧಿಕಿ ಹೀಗೆ, ನಾನಾ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಈ ಬಾಬಾ ಸಿದ್ಧಿಕಿ ಕಟ್ಟರ್ ಕಾಂಗ್ರೆಸಿಗರಾಗಿದ್ದರು. ಬರೊಬ್ಬರಿ 48 ವರ್ಷ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ರು. ಮುಂಬೈನ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ಆಯ್ಕೆಯಾಗಿ ಮೂರು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಸಚಿವ ಸ್ಥಾನ ನಿಭಾಯಿಸಿದ್ದರು. ಡಿಸಿಎಂ ಡಿಕೆಶಿ ಜೊತೆಯಲೂ ಉತ್ತಮ ನಂಟು ಹೊಂದಿದ್ದರು. ಆದ್ರೆ, ಕಳೆದ ವರ್ಷ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ. ಫೆಬ್ರವರಿ ತಿಂಗಳಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಕಾಲಿಟ್ಟಿದ್ರು.

publive-image

ಇದನ್ನೂ ಓದಿ: ಗೆಳೆಯನ ಭೀಕರ ಹ*ತ್ಯೆಯಿಂದ ವಿಚಲಿತನಾದ ಸಲ್ಮಾನ್ ಖಾನ್! ನಿದ್ದೆ ಮಾಡಲು ಪರದಾಡುತ್ತಿರುವ ಸಲ್ಲು!

ಶನಿವಾರ ರಾತ್ರಿ ಬಾಬಾ ಸಿದ್ಧಿಕಿಯ ಬರ್ಬರ ಹತ್ತೆಯಾಗಿದೆ. ಬೈಕ್‌ನಲ್ಲಿ ಬಂದ ಹಂತಕರ ಬಳಿಯಿದ್ದ ಪಿಸ್ತೂಲ್‌ನಿಂದ ಚಿಮ್ಮಿದ 6 ಗುಂಡುಗಳಲ್ಲಿ 3 ಬುಲೆಟ್ ಸಿದ್ದಿಕಿಯ ಎದೆಸೀಳಿವೆ. ಆಸ್ಪತ್ರೆಯಲ್ಲಿ ಬಾಬಾ ಸಿದ್ಧಿಕಿ ಅಸುನೀಗಿದ್ದಾರೆ. ಮಾಹಿತಿ ತಿಳಿಯುತ್ತಲೇ ಅಖಾಡಕ್ಕೆ ಇಳಿದಿದ್ದ ಮುಂಬೈ ಕ್ರೈಂ ಬ್ಯಾಂಚ್ ಪೊಲೀಸರು ಬಾಬಾ ಸಿದ್ಧಿಕಿ ಮೇಲೆ ಶೂಟೌಟ್ ನಡೆಸಿದ ಮೂವರು ಶಂಕಿತರಲ್ಲಿ ಇಬ್ಬರ ಹೆಡೆಮುರಿ ಕಟ್ಟಿದ್ದಾರೆ. ಫೋಟೋದಲ್ಲಿ ನೋಡ್ತಿರೋ ಈ ಮೂವರು ತಲಾ 50 ಸಾವಿರ ಪಡ್ಕೊಂಡು ಈ ಕೊಲೆಗೈದಿದ್ದಾರೆ. ಬಾಬಾ ಸಿದ್ಧಿಕಿ ಹತ್ಯೆಗೆ ಸುಪಾರಿ ತಗೊಂಡ ಮರುಕ್ಷಣದಿಂದಲೇ ಸಿದ್ಧಿಕಿ ಸುತ್ತ ಸಾವಿನ ಬಲೆ ಹೆಣೆಯೋಕೆ ಈ ಹಂತಕರು ಭರ್ತಿ ಎರಡು ತಿಂಗಳು ಪ್ಲಾನ್ ಮಾಡಿದ್ರಂತೆ. ಕೆಲ ದಿನಗಳ ಹಿಂದಷ್ಟೇ ಇವ್ರ ಅಡ್ರೆಸ್‌ಗೆ ಅನಾಮಿಕ ಅಡ್ರೆಸ್‌ನಿಂದ ಬಂದೂಕು, ಪಿಸ್ತೂಲು ಸೇರಿದಂತೆ ವಿವಿಧ ವೆಪನ್‌ಗಳು ಬಂದಿದ್ದವಂತೆ.

Advertisment

ಇದನ್ನೂ ಓದಿ:ಗೆಳೆಯನ ಭೀಕರ ಹ*ತ್ಯೆಯಿಂದ ವಿಚಲಿತನಾದ ಸಲ್ಮಾನ್ ಖಾನ್! ನಿದ್ದೆ ಮಾಡಲು ಪರದಾಡುತ್ತಿರುವ ಸಲ್ಲು!

ವರದಿಗಳ ಪ್ರಕಾರ ಬಾಬಾ ಸಿದ್ಧಿಕಿಗೆ 15 ದಿನಗಳ ಹಿಂದಷ್ಟೇ ವಾರ್ನಿಂಗ್ ಕೊಡಲಾಗಿತ್ತಂತೆ. ನಿನ್ನನ್ನು ಹೊಡೆದು ಹಾಕ್ತೀವಿ ಅಂತಾ ಅನಾಮಿಕ ಕರೆ ಬರಲು ಶುರುವಾಗಿದ್ದವಂತೆ. ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೂ. ಪೊಲೀಸ್ ವ್ಯವಸ್ಥೆಗೆ ಮನವಿ ಮಾಡ್ಕೊಂಡು ವೈ ಕೆಟಾಗರಿ ಸೆಕ್ಯೂರಿಟಿ ಪಡೆದುಕೊಂಡಿದ್ದರು. ಆದ್ರೆ, ಹಂತಕರು ಸಿದ್ದಿಕಿ ಹತ್ಯೆಗೆ ಸರಿಯಾದ ಟೈಮಲ್ಲೇ ಬಲೆ ಬೀಸಿದ್ದಾರೆ. ಇದೊಂದು ಪ್ರೀಪ್ಲಾನ್ಡ್ ಮರ್ಡರ್ ಅಂತಾ ಮುಂಬೈ ಪೊಲೀಸರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment