newsfirstkannada.com

ರಾಜ್​ಕುಮಾರ್​ ‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ 50 ವರ್ಷ! 90ರ ದಶಕದಲ್ಲೇ ಅಣ್ಣಾವ್ರ ಪ್ಯಾನ್​​ ಇಂಡಿಯಾ ಸಿನಿಮಾ!

Share :

Published June 2, 2024 at 8:52pm

Update June 2, 2024 at 8:54pm

  90ರ ಕಾಲದಲ್ಲಿ 3 ಭಾಷೆಗಳಲ್ಲಿ ರಿಲೀಸ್ ಆದ ಸಿನಿಮಾ

  ನಾಟಕದ ಕಥೆ ‘ಸಂಪತ್ತಿಗೆ ಸವಾಲ್’ ಆಗಿ ಸಿನಿಮಾವಾಯ್ತು!

  1974 ರಲ್ಲಿ ತೆರೆ ಕಂಡ ಸಿನಿಮಾಗೆ ಇಂದು 50 ವರ್ಷದ ಸಂಭ್ರಮ

‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಈ ಹಾಡು ಕೇಳಿದ್ರೆ ನೆನಪಾಗೋದು ಯಾವ ಸಿನಿಮಾ ಹೇಳಿ? ಅಣ್ಣಾವ್ರ ‘ಸಂಪತ್ತಿಗೆ ಸವಾಲ್’ ಚಿತ್ರ. ಸೂಪರ್​ ಡೂಪರ್ ಹಿಟ್ ಕಂಡ ಈ ಸಿನಿಮಾಗೆ ಈಗ 50 ವರ್ಷದ ಸಂಭ್ರಮ.

ಸಂಪತ್ತಿಗೆ ಸವಾಲ್​ 1974 ರಲ್ಲಿ ತೆರೆ ಕಂಡ ಸಿನಿಮಾ ಇವತ್ತಿಗೆ ಅದೇ ಘಮಲು ಉಳಿಸಿಕೊಂಡಿರುವ ಚಿತ್ರ. ಗಣೇಶ ಹಬ್ಬ ಇರಲಿ. ಅಣ್ಣಮ್ಮನ ಉತ್ಸವವೇ ಇರಲಿ ಅಣ್ಣವ್ರಾ ‘ಯಾರೇ ಕೂಗಾಡಲಿ’ ಹಾಡು ಇಲ್ಲದೇ ಆ ಕಾರ್ಯಕ್ರಮ ಮುಗಿಯೋದೆ ಇಲ್ಲ. ಎವಿ ಶೇಷಗಿರಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಂಜುಳಾ ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು. ರಾಜ್​ಕುಮಾರ್ ಮತ್ತು ಮಂಜುಳ ಜುಗಲಬಂಧ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇವತ್ತಿಗೂ ರಿಯಾಲಿಟಿ ಶೋಗಳಲ್ಲಿ ರೀಲ್ಸ್​ಗಳಲ್ಲಿ ಸಂಪತ್ತಿಗೆ ಸವಾಲ್​ ರಿಕ್ರಿಯೇಟ್ ಆಗ್ತಾನೆ ಇರುತ್ತೆ. ‘ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ’, ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ ಈ ಡೈಲಾಗ್​ಗಳಂತು ಇಂದಿಗೂ ಟ್ರೆಂಡಿಂಗ್​ನಲ್ಲಿರೋದು ಸಂಪತ್ತಿಗೆ ಸವಾಲ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ

ಇದನ್ನೂ ಓದಿ: ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡ ಅಪಾರ್ಟ್​ಮೆಂಟ್​ಗೆ ‘ರಣವಿಕ್ರಮ’ ನಟಿ ಶಿಫ್ಟ್! ಹೋಗ್ಬೇಡಿ ಎಂದ ಫ್ಯಾನ್ಸ್!

ನಾಟಕದ ಕಥೆ ಸಿನಿಮಾ ಆಗಿದ್ದೇ ರೋಚಕ

ಹೌದು. ನಿಮಗೂ ಇದು ಅಚ್ಚರಿ ಅನಿಸಿದ್ರೂ ಇದು ಸತ್ಯನೇ. ಯಾಕಂದ್ರೆ ಸಂಪತ್ತಿಗೆ ಸವಾಲ್ ಅನ್ನೋದು ಮೂಲತಃ ಒಂದು ನಾಟಕ. ಉತ್ತರ ಕರ್ನಾಟಕದ ಕಂಪನಿ ಒಂದು ಈ ನಾಟಕವನ್ನ ಬರೆದಿತ್ತು. 1973 ರಲ್ಲಿ ಈ ನಾಟಕವನ್ನು ಶಾರದಾ ಸಂಗೀತಾ ನಾಟಕ ಮಂಡಳಿ ಕನಕಪುರದಲ್ಲಿ ಪ್ರದರ್ಶನ ನೀಡ್ತಿತ್ತು. ಆ ಕಾಲದಲ್ಲಿ ಸಂಪತ್ತಿಗೆ ಸವಾಲ್ ನಾಟಕ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿತ್ತು. ವಿಚಾರ ಏನಂದ್ರೆ ಖುದ್ದು ಡಾ. ರಾಜ್​ಕುಮಾರ್ ಈ ನಾಟಕವನ್ನು ಹೋಗಿ ನೋಡಿ ಬಂದಿದ್ರಂತೆ. ಬಳಿಕ ಅದನ್ನ ಸಿನಿಮಾ ಮಾಡೋ ಆಸೆ ವ್ಯಕ್ತಪಡಿಸುತ್ತಾರೆ. ಅದ್ರಂತೆ ಶಾರದಾ ಸಂಗೀತಾ ನಾಟಕ ಮಂಡಳಿ ಮಾಲೀಕರಾದ ಬಸವರಾಜಪ್ಪ, ಮತ್ತು ನಾಟಕ ರಚನೆ ಮಾಡಿದಂತ ಪಿ ಬಿ ದುತ್ತರಿಗೆ ಒಪ್ಪಿಸಿ ನಾಟಕವನ್ನ ಸಿನಿಮಾವಾಗಿ ಮಾಡ್ತಾರೆ. ಸಿನಿಮಾ ಗಲ್ಲಾಪೆಟ್ಟಿಗಯಲ್ಲಿ ಸದ್ದು ಮಾಡಿ ಇತಿಹಾಸವನ್ನೇ ಸೃಷ್ಟಿ ಮಾಡಿಬಿಡುತ್ತೆ.

ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಿತ್ತು ಸಂಪತ್ತಿಗೆ ಸವಾಲ್

ನಾವೆಲ್ಲ ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನೋಡ್ತಿದ್ದೀವಿ. ಆದ್ರೆ ಅಣ್ಣಾವ್ರ ಸಂಪತ್ತಿಗೆ ಸವಾಲ್ ಸಿನಿಮಾ 90 ರ ದಶಕದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸಕ್ಸಸ್​ ಕಂಡಿತ್ತು. 50 ವರ್ಷ ಪೂರೈಸಿರುವ ಸಂಪತ್ತಿಗೆ ಸವಾಲ್ ಚಿತ್ರ 90 ರ ಕಾಲದಲ್ಲೇ ತೆಲುಗು, ತಮಿಳು, ಹಿಂದಿ ಸೇರಿ ಮೂರು ಭಾಷೆಗಳಲ್ಲಿ ರಿಲೀಸ್ ಆಗಿತ್ತು.

ವಿಶೇಷ ವರದಿ: ಮರಲಿಂಗ್ ಎಮ್ ಎಚ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್​ಕುಮಾರ್​ ‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ 50 ವರ್ಷ! 90ರ ದಶಕದಲ್ಲೇ ಅಣ್ಣಾವ್ರ ಪ್ಯಾನ್​​ ಇಂಡಿಯಾ ಸಿನಿಮಾ!

https://newsfirstlive.com/wp-content/uploads/2024/06/Sampattige-saval.jpg

Load More