newsfirstkannada.com

ಭೀಕರ ದುರಂತ.. ಶಾಲಾ ಬಸ್​ ಮರಕ್ಕೆ ಡಿಕ್ಕಿಯಾಗಿ 6 ಮಕ್ಕಳು ಸಾವು; 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

Share :

Published April 11, 2024 at 12:01pm

Update April 11, 2024 at 12:03pm

  ಬಸ್​ ದಾಖಲೆಗಳು ಪರಿಶೀಲನೆ ವೇಳೆ ಅಚ್ಚರಿ ಸಂಗತಿ ಬಯಲು

  ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್​ವೊಂದು ಮರಕ್ಕೆ ಡಿಕ್ಕಿ

  ರಭಸದಿಂದ ಮರಕ್ಕೆ ಡಿಕ್ಕಿಯಾದ ಬಸ್​, ರಕ್ತದ ಮಡುವಿನಲ್ಲಿ ಮಕ್ಕಳು

ನವದೆಹಲಿ: ಇಂದು ಬೆಳಗ್ಗೆ ಹರಿಯಾಣದ ನರ್ನಾಲ್​ನ ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್​ವೊಂದು ಮರಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ 6 ಮಕ್ಕಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಕ್ಕಳು ಗಂಭಿರವಾಗಿ ಗಾಯಗೊಂಡಿದ್ದಾರೆ. ರಂಜಾನ್​ಗೆ ಶಾಲೆ ರಜೆ ಕೊಡದೇ ಕೆಲಸ ಮಾಡುತ್ತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

ಜಿಎಲ್ ಪಬ್ಲಿಕ್ ಸ್ಕೂಲ್​ಗೆ ಸೇರಿದ ಬಸ್ ಡ್ರೈವರ್​ ಮದ್ಯಪಾನ ಮಾಡಿ ಬಸ್​ ಅನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬಸ್​ ನೆಲಕ್ಕೆ ಉರುಳಿ ಬಿದ್ದಿದೆ. ಹೀಗಾಗಿ 6 ಮಕ್ಕಳು ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಬೇಗ ರಕ್ಷಣೆಗೆ ಬಂದಿದ್ದರಿಂದ ಕೆಲವು ಮಕ್ಕಳ ಪ್ರಾಣ ಕಾಪಾಡಲಾಗಿದೆ. ಇನ್ನು ಮಾಹಿತಿ ತಿಳಿದು ಪಿಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

ಡ್ರೈವರ್ ಮದ್ಯಪಾನ ಮಾಡಿದ್ದರಿಂದ ಈ ದೊಡ್ಡ ಅವಘಡ ಸಂಭವಿಸಿದೆ. ಅತಿ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಕ್ಕಳು ಸಾವನ್ನಪ್ಪಿವೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬಸ್ಸಿನ ದಾಖಲೆಗಳು ಮುಗಿದು ಹೋಗಿ 6 ವರ್ಷಗಳಾಗಿದ್ದರು ಹಾಗೇ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ದುರಂತ.. ಶಾಲಾ ಬಸ್​ ಮರಕ್ಕೆ ಡಿಕ್ಕಿಯಾಗಿ 6 ಮಕ್ಕಳು ಸಾವು; 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

https://newsfirstlive.com/wp-content/uploads/2024/04/BUS_HARIYANA.jpg

Load More