newsfirstkannada.com

VIDEO: ಭೀಕರ ಅಪಘಾತ.. ಒಂದೇ ಕುಟುಂಬದ 6 ಮಂದಿ ದಾರುಣ ಸಾವು

Share :

Published May 8, 2024 at 8:41pm

Update May 8, 2024 at 8:47pm

  ಹೆದ್ದಾರಿಯಲ್ಲಿ ದಿಢೀರ್‌ ಯೂ ಟರ್ನ್ ಟ್ರಕ್‌ ಚಾಲಕನ ಆಪತ್ತು!

  ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಸಾವು

  ಡಿಕ್ಕಿ ಹೊಡೆದ ಮೇಲೂ ಟ್ರಕ್ ಚಲಾಯಿಸಿಕೊಂಡು ಮುಂದೆ ಹೋದ ಚಾಲಕ

ಜೈಪುರ: ಅಬ್ಬಾ.. ಇದು ಭಯಾನಕ ಅಪಘಾತದ ದೃಶ್ಯ. ರಾಜಸ್ಥಾನದ ಹೆದ್ದಾರಿಯಲ್ಲಿ ಟ್ರಕ್‌ ಚಾಲಕ ದಿಢೀರ್‌ ಯೂ ಟರ್ನ್ ಹೊಡೆದಿದೆ. ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ದಿಢೀರ್ ಯೂ ಟರ್ನ್ ಹೊಡೆದ ಟ್ರಕ್‌ಗೆ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಸವಾಯಿ-ಮಾಧೋಪುರ ಜಿಲ್ಲೆಯ ಮುಂಬೈ-ದೆಹಲಿ ಎಕ್ಸ್ ಪ್ರೆಸ್ ವೇನಲ್ಲಿ ಈ ದಾರುಣ ಘಟನೆ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಆನ್​ಲೈನ್​ಲ್ಲಿ ಆರ್ಡರ್​ ಮಾಡಿದ್ದು ವೆಜ್​​​.. ಆದರೆ ಬಂದಿದ್ದು ನಾನ್​ ವೆಜ್​; ಯುವತಿಗೆ ₹50 ಲಕ್ಷ ಪರಿಹಾರ? 

ಹೆದ್ದಾರಿಯಲ್ಲಿ ದಿಢೀರ್ ಯೂ ಟರ್ನ್ ಹೊಡೆದ ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ಡಿಕ್ಕಿ ಹೊಡೆದ ಮೇಲೂ ಟ್ರಕ್ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾನೆ. ಹೆದ್ದಾರಿಯಲ್ಲಿ ಟ್ರಕ್ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಅಪಘಾತಕ್ಕೆ ಕಾರಣವಾದ ಟ್ರಕ್‌ ಅನ್ನು ಜಪ್ತಿ ಮಾಡಿದ್ದಾರೆ. ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆದ್ದಾರಿಯಲ್ಲಿ ಟ್ರಕ್ ಚಾಲಕ ಮಾಡಿದ ಮಹಾ ತಪ್ಪಿಗೆ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, ಡಿಸಿಎಂ ದಿಯಾಕುಮಾರಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಭಯಾನಕ ದೃಶ್ಯವನ್ನು ನೋಡಿದವರು ಆಶ್ಚರ್ಯ ವ್ಯಕ್ತಪಡಿಸಿದ್ದು, ಟ್ರಕ್ ಚಾಲಕನಿಗೆ ಶಿಕ್ಷೆಯಾಗಬಹುದು. ಆದರೆ ಹೋದ 6 ಮಂದಿಯ ಪ್ರಾಣ ಮರಳಿ ಬರುವುದಿಲ್ಲ ಎಂದು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಭೀಕರ ಅಪಘಾತ.. ಒಂದೇ ಕುಟುಂಬದ 6 ಮಂದಿ ದಾರುಣ ಸಾವು

https://newsfirstlive.com/wp-content/uploads/2024/05/Accident.jpg

Load More