newsfirstkannada.com

ಆನ್​ಲೈನ್​ಲ್ಲಿ ಆರ್ಡರ್​ ಮಾಡಿದ್ದು ವೆಜ್​​​.. ಆದರೆ ಬಂದಿದ್ದು ನಾನ್​ ವೆಜ್​; ಯುವತಿಗೆ ₹50 ಲಕ್ಷ ಪರಿಹಾರ?

Share :

Published May 8, 2024 at 8:06pm

    ಆನ್‌ಲೈನ್‌ನಲ್ಲಿ ಫುಡ್ ಆರ್ಡರ್​ ಮಾಡಿದ್ದ ಯುವತಿಗೆ ಕಾದಿತ್ತು ಬಿಗ್​ ಶಾಕ್​!

    ನೀವು ಆನ್​ಲೈನ್​​ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಹಾಗಿದ್ರೆ ಬಿ ಅಲರ್ಟ್

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಯುವತಿ ಹೇಳಿಕೆ

ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಮಂದಿ ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮೇಲೆ ಡಿಪೆಂಡ್ ಆಗಿದ್ದಾರೆ. ಬೆಳ್ಳಗೆ, ಮಧ್ಯಾಹ್ನ ಅಷ್ಟೇ ಯಾಕೆ ರಾತ್ರಿ ಕೂಡ ಆನ್​ಲೈನ್​ನಲ್ಲಿಯೇ ಫುಡ್ ಆರ್ಡರ್ ಮಾಡಿ ತಮ್ಮ ಇಡಿ ದಿನವನ್ನು ಕಳೆಯುತ್ತಾರೆ. ಆದರೆ ಆನ್​ಲೈನ್​ನಲ್ಲಿ​​ ಫುಡ್ ಆರ್ಡರ್ ಮಾಡಿದ ಈ ಯುವತಿಗೆ ಬಿಗ್‌ ಶಾಕ್​ವೊಂದು ಕಾದಿತ್ತು.

ಹೌದು, ಅಹಮದಾಬಾದ್‌ನ ಸೋಲಾ ಪ್ರದೇಶದ ಚಾಮುಂಡನಗರದ ನೆರೆಹೊರೆಯಲ್ಲಿ ವಾಸವಾಗಿದ್ದ ಯುವತಿ ನಿರಾಲಿ ಆನ್​ಲೈನ್​ನಲ್ಲಿ ಫುಡ್ ಡೆಲಿವರಿ ಆ್ಯಪ್ ಮೂಲಕ ರೆಸ್ಟೋರೆಂಟ್‌ನಿಂದ ಪನೀರ್ ಟಿಕ್ಕಾ ಸ್ಯಾಂಡ್‌ವಿಚ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಪನೀರ್ ಟಿಕ್ಕಾ ಸ್ಯಾಂಡ್‌ವಿಚ್ ಬದಲಿಗೆ ಚಿಕನ್ ಟಿಕ್ಕಾ ಸ್ಯಾಂಡ್‌ವಿಚ್ ಬಂದಿದೆ. ಇದನ್ನು ಗಮನಿಸದೆ ಯುವತಿ ಸ್ಯಾಂಡ್ ವಿಚ್ ತಿಂದಾಗ ಪನೀರ್ ಟಿಕ್ಕಾ ಬದಲು ಚಿಕನ್ ಟಿಕ್ಕಾ ಸ್ಯಾಂಡ್‌ವಿಚ್​ ಇರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವಾರ್ಡ್..​ ವಾರ್ಡ್​ಗೆ ಸ್ಕೂಟಿಯಲ್ಲಿ ಹೋಗಿ ಚಿಕಿತ್ಸೆ ಕೊಡ್ತಾರೆ ಈ ನರ್ಸ್​; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

ಕೂಡಲೇ ಯುವತಿಯೂ ನಾನು ಆರ್ಡರ್​ ಮಾಡಿದ್ದು ಪನೀರ್ ಟಿಕ್ಕಾ ಸ್ಯಾಂಡ್‌ವಿಚ್. ಆದರೆ ನನಗೆ ಬಂದಿದ್ದ ಚಿಕನ್ ಟಿಕ್ಕಾ ಸ್ಯಾಂಡ್‌ವಿಚ್ ಎಂದು ಯುವತಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾಳೆ. ಇದಾದ ಬಳಿಕ ವೆಜ್-ಸ್ಯಾಂಡ್‌ವಿಚ್ ಬದಲಿಗೆ ನಾನ್ ವೆಜ್ ಸ್ಯಾಂಡ್‌ವಿಚ್ ಪಡೆದ ನಂತರ ಪರಿಹಾರವಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾಳೆ.

ಇನ್ನು, ಈ ಬಗ್ಗೆ ಮಾತಾಡಿದ ಯುವತಿ ಮೊದ, ಮೊದಲು ನಾನು ಗಮನಿಸದೇ ಸ್ಯಾಂಡ್​ವಿಚ್​ ತಿಂದೆ. ಆದರೆ ಎರಡು ಬೈಟ್​ ತಿಂದ ಬಳಿಕ ಇದು ಏಕೆ ಇಷ್ಟು ಗಟ್ಟಿಯಾಗಿದೆ ಅಂತ ಅನುಮಾನದಲ್ಲಿ ನಾನು ಮತ್ತೆ ಪರಿಶೀಲನೆ ನಡೆಸಿದೆ. ಆ ಬಳಿಕ ನನಗೆ ಗೊತ್ತಾಯಿತು ಚಿಕನ್ ಸ್ಯಾಂಡ್‌ವಿಚ್ ಎಂದು. ನಾನು ನನ್ನ ಜೀವನದಲ್ಲೇ ನಾನ್ ವೆಜ್ ತಿಂದಿಲ್ಲ. ಇದೇ ಮೊದಲ ಬಾರಿಗೆ ಚಿಕನ್​ ಇಂದು ನನಗೆ ಬೇಸರ ಆಯ್ತು. ಹೀಗಾಗಿ ನಾನು ಆರೋಗ್ಯ ಇಲಾಖೆಗೆ ಹಾಗೂ ಪೊಲೀಸ್​ ಠಾಣೆಗೆ ದೂರು ನೀಡಿದ್ದೇನೆ. ಜೊತೆಗೆ 50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದೇನೆ ಅಂತಾ ಹೇಳಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ಲ್ಲಿ ಆರ್ಡರ್​ ಮಾಡಿದ್ದು ವೆಜ್​​​.. ಆದರೆ ಬಂದಿದ್ದು ನಾನ್​ ವೆಜ್​; ಯುವತಿಗೆ ₹50 ಲಕ್ಷ ಪರಿಹಾರ?

https://newsfirstlive.com/wp-content/uploads/2024/05/zomato.jpg

Load More