ಪೋಷಕರೇ ಎಚ್ಚರ.. ಆಟವಾಡುತ್ತಿದ್ದ 6 ವರ್ಷದ ಮಗು ದಾರುಣ ಸಾವು

author-image
Veena Gangani
Updated On
ಪೋಷಕರೇ ಎಚ್ಚರ.. ಆಟವಾಡುತ್ತಿದ್ದ 6 ವರ್ಷದ ಮಗು ದಾರುಣ ಸಾವು
Advertisment
  • ಮೃತ ಖುಷಾಲ್ ಹಾಲ್ಯಾಳ ತಾಲೂಕಿನ ನರಸಲಗಿ ಗ್ರಾಮದ ನಿವಾಸಿ
  • ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ
  • ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರಂತ

ವಿಜಯಪುರ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕನೊಬ್ಬ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ನಡೆದಿದೆ. ಖುಷಾಲ್ ಹಾಲ್ಯಾಳ (6) ಮೃತ ಬಾಲಕ.

ಇದನ್ನೂ ಓದಿ: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ಇಶಿತಾ ವರ್ಷ; ಯಾವ ಸೀರಿಯಲ್​ ಗೊತ್ತಾ?

publive-image

ಮೃತ ಬಾಲಕ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಆದ್ರೆ, ಮೇಲೆ ಬರಲು ಆಗದೇ ಕೃಷಿ ಹೊಂಡದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment