ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು

author-image
AS Harshith
Updated On
ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು
Advertisment
  • ಹೋಳಿ ಸಂಭ್ರಮದಲ್ಲಿ ಭಾಗವಹಿಸಿದ್ದ ಆರು ವರ್ಷದ ಬಾಲಕ
  • ಡ್ಯಾನ್ಸ್​ ಮಾಡುವ ವೇಳೆ ಆತನ ಮೇಲೆ ಬಿದ್ದ ಸ್ಪೀಕರ್​ ಬಾಕ್ಸ್​
  • ಸ್ಪೀಕರ್​ ಬಾಕ್ಸ್​ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ

ಹೋಳಿ ಆಚರಣೆ ವೇಳೆ ಸ್ಪೀಕರ್​​ ಬಾಕ್ಸ್​ ಬಿದ್ದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್​ ಜಿಲ್ಲೆಯಲ್ಲಿ ನಡೆದಿದೆ. ಸಾವನ್ನಪ್ಪಿದ ಬಾಲಕನನ್ನು ವಿಷ್ಣ ಲೋಹರ್​ ಎಂದು ಗುರುತಿಸಲಾಗಿದೆ.

ಚಕ್ರಧರಪುರದ ಸುರೇಶ್​ ಲೋಹರ್​ ಮಗ ವಿಷ್ಣು ಎಲ್ಲರಂತೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. ಕಾರ್ಯಕ್ರಮದಲ್ಲಿ ಡ್ಯಾನ್ಸ್​ ಮಾಡುವ ವೇಳೆ ಪಕ್ಕದಲ್ಲಿ ಇರಿಸಲಾಗಿದ್ದ ಸ್ಪೀಕರ್​ ಬಾಕ್ಸ್​ ಆತನ ಮೇಲೆ ಬಿದ್ದಿದೆ. ಪರಿಣಾಮ ಆತನ ತಲೆ ಗಾಯವಾಗಿತ್ತು.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್​ಗೆ ವಿರೋಧ; ಕಾಂಗ್ರೆಸ್​ಗೆ ಕಗ್ಗಂಟಾಗಿದೆ ಅಭ್ಯರ್ಥಿ ಆಯ್ಕೆ

ಗಾಯಗೊಂಡ ವಿಷ್ಣುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವಿಷ್ಣು ಸಾವನ್ನಪ್ಪಿದ್ದಾನೆ. ಚಕ್ರಧರ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment