newsfirstkannada.com

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್​ಗೆ ವಿರೋಧ; ಕಾಂಗ್ರೆಸ್​ಗೆ ಕಗ್ಗಂಟಾಗಿದೆ ಅಭ್ಯರ್ಥಿ ಆಯ್ಕೆ

Share :

Published March 27, 2024 at 6:42am

  ದೊಡ್ಡಬಳ್ಳಾಪುರದ ಪ್ರಚಾರ ಸಭೆಯಲ್ಲಿ ಗದ್ದಲ, ಗಲಾಟೆ!

  ಸಿಡಬ್ಲ್ಯೂಸಿ ಮೀಟಿಂಗ್​ನಲ್ಲಿ ಟಿಕೆಟ್​​​ ಫೈನಲ್ ಸಾಧ್ಯತೆ!

  3 ಘಟಾನುಘಟಿಗಳ ನಡುವೆ ಯಾರಿಗೆ ಟಿಕೆಟ್ ಸಿಗಲಿದೆ

ಒಂದ್ಕಾಲದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ನಡುವೆ ನಡೆಯುತ್ತಿದ್ದ ನೇರಾನೇರ ಹಣಾಹಣಿ ಕ್ಷೇತ್ರ. ಆದ್ರೆ, ಕಳೆದ ಬಾರಿ ಗೆದ್ದು ಗೆಲುವಿನ ರೋಚಿ ತೋರಿಸಿದ್ದೆ ತಡ, ಚಿಕ್ಕಬಳ್ಳಾಪುರದಲ್ಲಿ ದೊಡ್ಡ ದಂಗಲ್​ ಸೃಷ್ಟಿಸಿದೆ. ಬಿಜೆಪಿಯಿಂದ ಟಿಕೆಟ್​​ ಫೈನಲ್​ ಆದ್ರು, ಬಂಡಾಯ ಮಾತ್ರ ಸ್ಫೋಟಿಸುತ್ತಲೇ ಇದೆ. ಇತ್ತ, ಕಾಂಗ್ರೆಸ್​​ ಟಿಕೆಟ್​ ಅಂತಿಮಗೊಳಿಸಲು ಹೆಣಗುತ್ತಿದೆ.

ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಲೋಕಸಭೆಗೆ ನೀ ಲಾಯಕ್ಕಿಲ್ಲ. ಬಿಜೆಪಿ ಕಾರ್ಯಕರ್ತರು ಕೂಗಿ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು. ಅಂದ್ಹಾಗೆ ಹೀಗೆ ರೀಲ್ಸ್ ದಾಟಿಯಲ್ಲಿ‌ ಹಾಡು ಹಾಡಿದ್ದು ಸ್ವತಃ ಬಿಜೆಪಿ ಅಭ್ಯರ್ಥಿ ವಿರುದ್ಧ. ಈ ದೃಶ್ಯಗಳು ಸದ್ಯ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿವೆ.

ಕಳೆದ ಎಲೆಕ್ಷನ್​​​ನಲ್ಲಿ ಮತದಾರರಿಂದ ಟ್ರೀಟ್​ಮೆಂಟ್​​ ಪಡೆದ ಡಾಕ್ಟರ್​, ಈ ಬಾರಿ ಮತ್ತೊಮ್ಮೆ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆ ಆಗಿದ್ದೆಲ್ಲಾ ಒಂದು, ಮುಂದಾಗೋದು ಇನ್ನೊಂದು ಅಂತ ಸೆಡ್ಡು ಹೊಡೆದಿದ್ದಾರೆ. ಹೀಗೆ ಜಿದ್ದಿಗೆ ಬಿದ್ದು ಟಿಕೆಟ್​​ ಗಿಟ್ಟಿಸಿದ ಸುಧಾಕರ್​​ಗೆ ಬಿಜೆಪಿ ಕಾರ್ಯಕರ್ತರೇ ಶಾಕ್​ ನೀಡ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಗೋಬ್ಯಾಕ್​​ ಬೋರ್ಡ್​​ಗಳೇ ಸುಧಾಕರ್​​ರನ್ನ ಸ್ವಾಗತಿಸ್ತಿವೆ.

ಇದನ್ನೂ ಓದಿ: ಪತಿಯ IPL ಬೆಟ್ಟಿಂಗ್​ನಿಂದ 1.5 ಕೋಟಿ ರೂಪಾಯಿ ಸಾಲ: ಮನನೊಂದು ಪತ್ನಿ ಆತ್ಮಹತ್ಯೆ; ಮೂವರು ಅರೆಸ್ಟ್​

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​ಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಇಂದಿನಿಂದ ಪ್ರಚಾರ ಆರಂಭಿಸಿರುವ ಸುಧಾಕರ್​ಗೆ ಬಿಜೆಪಿಗರೇ ಬಿಸಿ ತುಪ್ಪವಾಗಿದ್ದಾರೆ. ದೊಡ್ಡ ಬಳ್ಳಾಪುರದಿಂದ ಪ್ರಚಾರ ಆರಂಭಿಸಿದ್ದ ಸುಧಾಕರ್​ ವಿರುದ್ಧ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸುಧಾಕರ್, ಎಂಟಿಬಿ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಗಲಾಟೆ ಸಹ ನಡೆದಿದೆ. ಕಾರ್ಯಕರ್ತರ ಸಿಟ್ಟು ಶಮನಕ್ಕೆ ಶಾಸಕ ಧೀರಜ್​​ ಮುನಿರಾಜು ಯತ್ನಿಸಿದ್ರು..

ಕಾಂಗ್ರೆಸ್​ಗೆ ಕಗ್ಗಂಟಾದ ಚಿಕ್ಕಬಳ್ಳಾಪುರ ಅಭ್ಯರ್ಥಿ ಆಯ್ಕೆ!

ಇತ್ತ, ಕಾಂಗ್ರೆಸ್​ಗೆ ಅಭ್ಯರ್ಥಿ ಆಯ್ಕೇ ಕಗ್ಗಂಟಾಗಿದೆ.. ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸೋನಿಯಾ ಗಾಂಧಿ ಅಂಗಳವೂ ತಲುಪಿದೆ. ಇವತ್ತು ಸಿಡಬ್ಲ್ಯೂಸಿ ಮೀಟಿಂಗ್​ ನಡೆಯಲಿದ್ದು, ಟಿಕೆಟ್​​​ ಫೈನಲ್ ಆಗುವ ಸಾಧ್ಯತೆ ಇದೆ.. ವೀರಪ್ಪ ಮೊಯ್ಲಿ , ರಕ್ಷಾರಾಮಯ್ಯ ಹಾಗೂ ಶಿವಶಂಕರರೆಡ್ಡಿ ನಡುವೆ ತೀವ್ರ ಪೈಪೋಟಿ ಇದೆ.. ರಕ್ಷಾರಾಮಯ್ಯ ಪರ ಸಿಎಂ, ಜಮೀರ್ ಅಹ್ಮದ್ ಬೆಂಬಲ ಇದೆ.. ಆದ್ರೆ, ಮೊಯ್ಲಿ ಪರ ಕ್ಷೇತ್ರದ ಶಾಸಕರಿದ್ದಾರೆ.. ಶಿವಶಂಕರರೆಡ್ಡಿ ಪರ ಡಿಸಿಎಂ ಡಿಕೆಶಿ ವಕಾಲತ್ ವಹಿಸಿದ್ದಾರೆ ಅಂತ ಗೊತ್ತಾಗಿದೆ..

ಒಟ್ಟಾರೆ, ಮೂವರು ಘಟಾನುಘಟಿಗಳ ನಡುವೆ ಯಾರಿಗೆ ಟಿಕೆಟ್ ಸಿಗಲಿದೆ ಅನ್ನೋದು ಇವತ್ತಿನ ಸಭೆಯಲ್ಲಿ ಗೊತ್ತಾಗಲಿದೆ.. ಈಗಾಗಲೇ ಬಿಜೆಪಿ ಒಕ್ಕಲಿಗ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದು, ಕಾಂಗ್ರೆಸ್​​ ಯಾವ ಜಾತಿ ಅಸ್ತ್ರ ಹೂಡುತ್ತೆ ಅನ್ನೋದು ಕುತೂಹಲಕ್ಕೆ ಕಾರಣ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್​ಗೆ ವಿರೋಧ; ಕಾಂಗ್ರೆಸ್​ಗೆ ಕಗ್ಗಂಟಾಗಿದೆ ಅಭ್ಯರ್ಥಿ ಆಯ್ಕೆ

https://newsfirstlive.com/wp-content/uploads/2024/03/Sudhakar.jpg

Load More