KSRTC ಬಸ್ ಹರಿದು ದುರಂತ.. 6 ವರ್ಷದ ಬಾಲಕನ ಜೀವ ಉಳಿಸಲು ಹರಸಾಹಸ; ಕೊನೆಗೆ ಏನಾಯ್ತು?

author-image
admin
Updated On
KSRTC ಬಸ್ ಹರಿದು ದುರಂತ.. 6 ವರ್ಷದ ಬಾಲಕನ ಜೀವ ಉಳಿಸಲು ಹರಸಾಹಸ; ಕೊನೆಗೆ ಏನಾಯ್ತು?
Advertisment
  • ಮಹಾರಾಷ್ಟ್ರದಿಂದ ಅಜ್ಜಿಯ ಮನೆಗೆ ಬಂದಿದ್ದ 6 ವರ್ಷದ ಬಾಲಕ
  • ಸರ್ಕಾರಿ ಬಸ್ ಹರಿದು ಬಾಲಕ ಗಂಭೀರವಾಗಿ ಗಾಯಗೊಂಡಿದ್ದ
  • ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಿದ ಸಂಬಂಧಿಕರು

ಬೀದರ್: ಅಜ್ಜಿಯ ಮನೆಗೆ ಬಂದಿದ್ದ 6 ವರ್ಷದ ಬಾಲಕ ಸಾರಿಗೆ ಬಸ್ ದುರಂತದಲ್ಲಿ ಕಣ್ಣು ಮುಚ್ಚಿರುವ ದಾರುಣ ಘಟನೆ ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ನಡೆದಿದೆ. ಗಣೇಶ್ ಪೇಟಕಾರ್ (6) ಸಾವನ್ನಪ್ಪಿದ ಬಾಲಕ.

ಇದನ್ನೂ ಓದಿ: 10 ವರ್ಷದ ಲವ್​.. ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ವಿಚಾರ ಕೇಳಿ ಬಿಚ್ಚಿ ಬಿದ್ದ ಫ್ಯಾಮಿಲಿ! 

ಮಹಾರಾಷ್ಟ್ರ ಮೂಲದ ಗಣೇಶ್ ಪೇಟಕಾರ್ ತನ್ನ ಅಜ್ಜಿಯ ಮನೆಗೆಂದು ಬೀದರ್‌ ಜಿಲ್ಲೆಯ ಮಿರಖಲ್ ಗ್ರಾಮಕ್ಕೆ ಬಂದಿದ್ದ. ಈ ಮಧ್ಯೆ ಸರ್ಕಾರಿ ಬಸ್ ಹರಿದು ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸುವ ವೇಳೆ ಬಾಲಕ ಸಾವನ್ನಪ್ಪಿದ್ದಾನೆ.

publive-image

ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ ಬಸವಕಲ್ಯಾಣದಿಂದ ಮಿರಖಲ್ ಮಾರ್ಗವಾಗಿ ನಿಲಂಗಾಕ್ಕೆ ತೆರಳುತ್ತಿತ್ತು. ಮಿರಖಲ್‌ ಗ್ರಾಮದಲ್ಲಿ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಈ ದುರಂತ ನಡೆದಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹುಲಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment