newsfirstkannada.com

VIDEO: ಜೈಲಿನಿಂದ ಬಿಡುಗಡೆ ಆಗ್ತಿದ್ದಂತೆ ಹೆಚ್‌.ಡಿ ರೇವಣ್ಣ ಟೆಂಪಲ್‌ ರನ್‌; ಹೇಳಿದ್ದೇನು?

Share :

Published May 14, 2024 at 6:08pm

  ಹೆಚ್‌.ಡಿ ದೇವೇಗೌಡರ ನಿವಾಸದಲ್ಲಿ ಕುಟುಂಬಸ್ಥರ ಜೊತೆ ರೇವಣ್ಣ ಚರ್ಚೆ

  ಜೈಲಿನಿಂದ ರಿಲೀಸ್‌ ಬಳಿಕ ಮೊದಲ ಬಾರಿಗೆ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ

  ಇಂದು ಬೆಂಗಳೂರು, ನಾಳೆ ಹಾಸನದ ವಿವಿಧ ದೇವಸ್ಥಾನಕ್ಕೆ ಭೇಟಿ ಸಾಧ್ಯತೆ

ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಇಂದು ಬಿಡುಗಡೆ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದ ರೇವಣ್ಣ ಅವರು ಮೊದಲಿಗೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ದೇವೇಗೌಡರ ನಿವಾಸದಲ್ಲಿ ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ತಮ್ಮ ಟೆಂಪಲ್ ರನ್ ಶುರು ಮಾಡಿದ್ದಾರೆ.

ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿಗೆ ಭೇಟಿ ನೀಡಿರುವ ಹೆಚ್‌.ಡಿ ರೇವಣ್ಣ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಹೆಚ್‌.ಡಿ ರೇವಣ್ಣ ಅವರು ನಾನು ಹೆಚ್ಚಿಗೆ ಏನು ಹೇಳಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯಾಂಗವನ್ನ ನಾನು ಗೌರವಿಸುತ್ತೇನೆ. ನನಗೆ ದೇವರ ಮೇಲೆಯೂ ನಂಬಿಕೆ ಇದೆ. ಈ ಆಪಾದನೆಯಿಂದ ಹೊರ ಬರುತ್ತೇನೆ. 11 ದಿನದ ನ್ಯಾಯಾಂಗದ ಆದೇಶ ಪಾಲಿಸಿದ್ದೇನೆ. ಉಳಿದ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.

ಇದನ್ನೂ ಓದಿ: BREAKING: ರಾಹುಕಾಲಕ್ಕೆ ಮುನ್ನ ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್‌.ಡಿ ರೇವಣ್ಣ ಬಿಡುಗಡೆ 

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಕಳೆದ ಮೇ 4ರಂದು ಹೆಚ್‌.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಬಂಧಿಸಿದ್ದರು. ಕಳೆದ 6 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ರೇವಣ್ಣ ಅವರಿಗೆ ನಿನ್ನೆ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಮೀನಿನ ಷರತ್ತುಗಳನ್ನು ಪೂರೈಸಿದ ಬಳಿಕ ರೇವಣ್ಣ ಅವರು ಇಂದು ಬಿಡುಗಡೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲೇ ಇರುವ ಹೆಚ್‌.ಡಿ ರೇವಣ್ಣ ನಾಳೆ ಹಾಸನ ಜಿಲ್ಲೆಗೆ ಭೇಟಿ ನೀಡಿ ವಿವಿಧ ದೇವಸ್ಥಾನಗಳಿಗೆ ಪ್ರಾರ್ಥನೆ ಸಲ್ಲಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಜೈಲಿನಿಂದ ಬಿಡುಗಡೆ ಆಗ್ತಿದ್ದಂತೆ ಹೆಚ್‌.ಡಿ ರೇವಣ್ಣ ಟೆಂಪಲ್‌ ರನ್‌; ಹೇಳಿದ್ದೇನು?

https://newsfirstlive.com/wp-content/uploads/2024/05/HD-Revanna-4.jpg

Load More