newsfirstkannada.com

BREAKING: ರಾಹುಕಾಲಕ್ಕೆ ಮುನ್ನ ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್‌.ಡಿ ರೇವಣ್ಣ ಬಿಡುಗಡೆ

Share :

Published May 14, 2024 at 2:16pm

Update May 14, 2024 at 2:20pm

    ರಾಹುಕಾಲಕ್ಕೂ ಮುನ್ನ ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿಸಿದ ವಕೀಲರು

    ಕಳೆದ 6 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೆಚ್‌.ಡಿ ರೇವಣ್ಣ ಸೆರೆವಾಸ

    ಜೈಲಿನಿಂದ ನೇರವಾಗಿ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಭೇಟಿ

ಬೆಂಗಳೂರು: ಮಹಿಳೆ ಕಿಡ್ನಾಪ್‌ ಕೇಸ್‌ನಲ್ಲಿ ಬಂಧನದಲ್ಲಿದ್ದ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ನಿನ್ನೆ ಸಂಜೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ರಿಲೀಸ್ ಮಾಡಲಾಗಿದೆ.

ಹೆಚ್.ಡಿ ರೇವಣ್ಣ ಅವರು ಕಳೆದ 6 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಮಹಿಳೆ ಕಿಡ್ನಾಪ್‌ ಕೇಸ್‌ನಲ್ಲಿ ಬಂಧನವಾಗಿದ್ದ ರೇವಣ್ಣ ಅವರಿಗೆ ನಿನ್ನೆ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಮೀನಿನ ಷರತ್ತುಗಳನ್ನು ಪೂರೈಸಿದ ರೇವಣ್ಣ ಪರ ವಕೀಲರು ಬಿಡುಗಡೆಯ ಪ್ರಕ್ರಿಯೆ ಮುಗಿಸಿದ್ದಾರೆ.

ಇದನ್ನೂ ಓದಿ: BREAKING: ಸಿದ್ದು ಸರ್ಕಾರ ಕೆಡವಲು BJP ಮುಹೂರ್ತ ಇಟ್ಟಿದ್ಯಾ? ಏನಿದು ‘ನಾಥ’ ಆಪರೇಷನ್‌? 

ಇಂದು ಮಧ್ಯಾಹ್ನ 3 ಗಂಟೆಯಿಂದ ರಾಹುಕಾಲ ಇರುವ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ಮಧ್ಯಾಹ್ನ 12 ಗಂಟೆಯ ಒಳಗೆ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ. ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ನಂತರ ಸುಮಾರು 1 ಗಂಟೆಗಳ ಕಾಲ ಬಿಡುಗಡೆಯ ಪ್ರಕ್ರಿಯೆ ನಡೆದಿದೆ.

6 ದಿನಗಳ ಜೈಲುವಾಸಕ್ಕೆ ಬ್ರೇಕ್ ಕೊಟ್ಟಿರುವ ಹೆಚ್​.ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದಾರೆ. ರೇವಣ್ಣ ರಿಲೀಸ್ ಹಿನ್ನೆಲೆ ಕಾರ್ಯಕರ್ತರು ಜೈಲಿನ ಬಳಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿರುವ ಹೆಚ್.ಡಿ ರೇವಣ್ಣ ಅವರು ಅಲ್ಲಿಂದ ನೇರವಾಗಿ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕಳೆದ ಮೇ 4ರಂದು ಹೆಚ್‌.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಬಂಧಿಸಿದ್ದರು. ಇದೀಗ ದೇವೇಗೌಡರ ನಿವಾಸಕ್ಕೆ ತೆರಳಿರುವ ಹೆಚ್‌.ಡಿ ರೇವಣ್ಣ ತಂದೆ, ತಾಯಿ ಆಶೀರ್ವಾದ ಪಡೆದು ತೆರಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ರಾಹುಕಾಲಕ್ಕೆ ಮುನ್ನ ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್‌.ಡಿ ರೇವಣ್ಣ ಬಿಡುಗಡೆ

https://newsfirstlive.com/wp-content/uploads/2024/05/HD-Revanna-2.jpg

Load More