newsfirstkannada.com

BREAKING: ಸಿದ್ದು ಸರ್ಕಾರ ಕೆಡವಲು BJP ಮುಹೂರ್ತ ಇಟ್ಟಿದ್ಯಾ? ಏನಿದು ‘ನಾಥ’ ಆಪರೇಷನ್‌?

Share :

Published May 13, 2024 at 1:56pm

Update May 13, 2024 at 1:57pm

  ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ - ಏಕನಾಥ ಶಿಂಧೆ

  ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕಕ್ಕೆ ಬರಬೇಕಾಗುತ್ತದೆ

  ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲೂ ಅದೇ ಆಗೋದಿದೆ

ಬೆಳಗಾವಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಅಲುಗಾಡಿಸೋ ಮಾತು ಕೇಳಿ ಬಂದಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.

ಮಹಾರಾಷ್ಟ್ರದ ಸಾತಾರಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಭಾಷಣ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಏಕನಾಥ ಶಿಂಧೆ, ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಅಲ್ಲಿ ‘ನಾಥ’ ಆಪರೇಷನ್ ಮಾಡೋದಿದೆ ಅಂದ್ರು. ನಾನು ನಾಥ ಆಪರೇಷನ್ ಅಂದ್ರೆ ಏನು ಅಂತ ಕೇಳಿದೆ. ಆಗ ಏಕನಾಥ ಶಿಂಧೆ ಮಾಡಿದ ಆಪರೇಷನ್​ ಅಂತ ಹೇಳಿದ್ರು ಎಂದಿದ್ದಾರೆ.

ಇದನ್ನೂ ಓದಿ: VIDEO: ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ; HDK ಖಡಕ್ ಸವಾಲು 

ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಕಾಂಗ್ರೆಸ್‌, NCP ನೇತೃತ್ವದ ಮಹಾಘಟಬಂಧನವನ್ನು ಬೀಳಿಸಿದ್ದರು. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲೂ ಇದೇ ಆಗೋದಿದೆ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯ. ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕಕ್ಕೆ ಬರಬೇಕಾಗುತ್ತದೆ. ನಿಮ್ಮ ಅನುಭವ ನಮಗೆ ಕೆಲಸಕ್ಕೆ ಬರುತ್ತದೆ ಎಂದಿದ್ದಾರಂತೆ. ಈ ಮಾತಿಗೆ ಏಕನಾಥ ಶಿಂಧೆ ಅವರು ಆಯ್ತು ನಾನು ಬರ್ತೇನೆ ಆ ಕಡೆಗೆ ಅಂತ ಹೇಳಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಸ್ಫೋಟಕ ಹೇಳಿಕೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಪತನಕ್ಕೆ ತೆರೆಮರೆ ಸರ್ಕಸ್ ನಡೆಯುತ್ತಿದೆ ಅನ್ನೋ ಅನುಮಾನ ಮೂಡಿದೆ. ಕಾಂಗ್ರೆಸ್ ಸರ್ಕಾರ ಕೆಡವಲು ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್​ಗೆ ಪ್ಲಾನ್ ಮಾಡಲಾಗಿದ್ಯಾ ಅನ್ನೋ ಪ್ರಶ್ನೆ ಕಾಡುತ್ತಿದೆ.

HDK ಹೇಳಿಕೆ ಬಳಿಕ ‘ನಾಥ’ ಆಪರೇಷನ್ ಸುಳಿವು?
ಇತ್ತೀಚೆಗೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ಮುಗಿದ ಮೇಲೆ ಏನಾಗುತ್ತೆ ನೋಡಿ. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದೆ. ಈ ಸರ್ಕಾರ ಉಳಿಯೋದೇ ಅನುಮಾನ ಎಂಬರ್ಥದಲ್ಲಿ ಮಾತನಾಡಿದ್ದರು. ಇದೀಗ ಹೆಚ್‌ಡಿಕೆ ಬಳಿಕ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗುರಿಯಾಗಿದೆ.

BREAKING: ಸಿದ್ದು ಸರ್ಕಾರ ಕೆಡವಲು BJP ಮುಹೂರ್ತ ಇಟ್ಟಿದ್ಯಾ? ಏನಿದು ‘ನಾಥ’ ಆಪರೇಷನ್‌?

https://newsfirstlive.com/wp-content/uploads/2024/05/Eknath-Sindhe-On-Karnataka-Cm.jpg

Load More