newsfirstkannada.com

ಒಂದಲ್ಲ, ಎರಡಲ್ಲ ಬರೋಬ್ಬರಿ 7 ಕೋಟಿ; ಮನೆಯಲ್ಲಿ ₹2000 ಮುಖಬೆಲೆಯ ನೋಟುಗಳು ಪತ್ತೆ!

Share :

Published March 22, 2024 at 8:45pm

Update March 22, 2024 at 9:12pm

    ಬಾಡಿಗೆ ಪಡೆದಿದ್ದ ಮನೆಯಲ್ಲಿ ಬಚ್ಚಿಟ್ಟಿದ್ದ 7 ಕೋಟಿ ರೂಪಾಯಿ ನೋಟು

    ಪಕ್ಕಾ ಮಾಹಿತಿ ಸಿಕ್ಕ ಕೂಡಲೇ ಪೊಲೀಸರಿಂದ ರಹಸ್ಯ ಕಾರ್ಯಾಚರಣೆ

    ಬೆಡ್‌ ರೂಮ್‌ ದೇವರ ಕೋಣೆಯಲ್ಲಿ ಬಾಕ್ಸ್‌ನಲ್ಲಿ ಮುಚ್ಚಿಟ್ಟದ ಗರಿ, ಗರಿ ನೋಟು

ಕಾಸರಗೋಡು: RBI ಹಿಂಪಡೆದುಕೊಂಡಿರುವ 2000 ಮುಖಬೆಲೆಯ 7 ಕೋಟಿ ರೂಪಾಯಿ ಮೌಲ್ಯದ ಪಿಂಕ್‌ ನೋಟುಗಳು ಕೇರಳದ ಮನೆಯೊಂದರಲ್ಲಿ ಪತ್ತೆಯಾಗಿದೆ. ಗರಿ, ಗರಿ ನೋಟುಗಳನ್ನ ನೋಡಿ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಈ ಪಿಂಕ್ ನೋಟು ಬಚ್ಚಿಟ್ಟಿದ್ದು ಯಾರು? ಈ ನೋಟುಗಳನ್ನ ಪತ್ತೆ ಹಚ್ಚಿದ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕಾಸರಗೋಡಿನ ಗುರುಪುರಂ ಬಳಿಯ ಅಂಬಲತ್ತರಾ ಪ್ರದೇಶದ ಮನೆಯಲ್ಲಿ ಅಕ್ರಮವಾಗಿ ಈ ನೋಟುಗಳನ್ನ ಬಚ್ಚಿಡಲಾಗಿತ್ತು. ಈ ಮಾಹಿತಿ ಸಿಕ್ಕ ಪೊಲೀಸರು ರಹಸ್ಯ ಕಾರ್ಯಾಚರಣೆ ಮಾಡಿ ದಾಳಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪಿ. ಬಿ ಜಾಯ್ ನೇತೃತ್ವದ ಟೀಮ್‌ ರಚಿಸಿಕೊಂಡ ಪೊಲೀಸರು ಈ ಮನೆ ಮೇಲೆ ರೇಡ್ ಮಾಡಿದ್ದಾರೆ.

ಅಂಬಲತ್ತರಾ ಪ್ರದೇಶದ ಈ ಮನೆಯು ಕೆ.ಪಿ ಬಾಬುರಾಜ್ ಎಂಬುವವರಿಗೆ ಸೇರಿದ್ದಾಗಿದೆ. ಕೆಲವೇ ತಿಂಗಳ ಹಿಂದೆ ಬಾಬುರಾಜ್ ಈ ಮನೆಯನ್ನು ಅಬ್ದುಲ್ ರಜಾಕ್ ಎನ್ನುವವರಿಗೆ 7,500 ರೂಪಾಯಿ ಬಾಡಿಗೆಗೆ ಕೊಟ್ಟಿದ್ದಾರೆ. ರಜಾಕ್ ಹೋಟೆಲ್ ಉದ್ಯಮ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ರಜಾಕ್ ಈ ಮನೆ ಬಿಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಬ್ದುಲ್ ರಜಾಕ್ ನೆಲೆಸಿದ್ದ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, ಬೆಡ್‌ ರೂಮ್‌ನ ಪೂಜಾ ಕೋಣೆಯಲ್ಲಿ ಒಂದು ರಹಸ್ಯವಾದ ಬಾಕ್ಸ್ ಇರೋದನ್ನ ಪತ್ತೆ ಹಚ್ಚಿದ್ದಾರೆ. ಈ ಬಾಕ್ಸ್‌ ಅನ್ನು ದೇವರ ಪಕ್ಕದಲ್ಲಿ ಬಚ್ಚಿಟಲಾಗಿತ್ತು. ತುಂಬಾ ಅಚ್ಚುಕಟ್ಟಾಗಿ ಬಾಕ್ಸ್‌ ಕವರ್ ಮಾಡಿದ್ದು ಪೊಲೀಸರಿಗೆ ಅನುಮಾನ ಮೂಡಿಸಿದೆ. ಇದನ್ನು ಓಪನ್ ಮಾಡಿ ನೋಡಿದಾಗ ದೇಶದಲ್ಲಿ ನಿಷೇಧ ಆಗಿರುವ 2000 ಮುಖಬೆಲೆಯ ಕಂತೆ, ಕಂತೆ ನೋಟುಗಳು ಸಿಕ್ಕಿದೆ. ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆಯ ನೋಟುಗಳನ್ನ ಪೊಲೀಸರು ಮೂಟೆಯಲ್ಲಿ ತುಂಬಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ನಿಮಗೂ ರಾಕಿಂಗ್​ ಸ್ಟಾರ್​​ ಯಶ್​ ಸಿನಿಮಾದಲ್ಲಿ ನಟಿಸಲು ಆಸೆ ಇದೆಯೇ? ಹಾಗಾದ್ರೆ ಈ ಸ್ಟೋರಿ ಓದಿ!

ಪೊಲೀಸರ ಮಾಹಿತಿ ಪ್ರಕಾರ ಕಾಸರಗೋಡಿನಲ್ಲಿ ಮನೆಯಲ್ಲಿ 7 ಕೋಟಿ ರೂಪಾಯಿ 2000 ಮುಖಬೆಲೆಯ ನೋಟುಗಳು ಪತ್ತೆಯಾಗಿದೆ. RBI ಹಿಂಪಡೆದ ನೋಟುಗಳನ್ನು ಸಂಗ್ರಹಿಸಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನೋಟುಗಳ ಮೇಲಿರುವ ನಂಬರ್‌ಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲ, ಎರಡಲ್ಲ ಬರೋಬ್ಬರಿ 7 ಕೋಟಿ; ಮನೆಯಲ್ಲಿ ₹2000 ಮುಖಬೆಲೆಯ ನೋಟುಗಳು ಪತ್ತೆ!

https://newsfirstlive.com/wp-content/uploads/2024/03/Kerala-Money-Seized.jpg

Load More