Advertisment

ಟೀಚರ್ ಬೈದಿದ್ದಕ್ಕೆ ಶಾಲೆ ಬಿಟ್ಟು 40 ಕಿ.ಮೀ ಓಡಿ ಹೋದ ವಿದ್ಯಾರ್ಥಿಗಳು; ಆಮೇಲೇನಾಯ್ತು? ವಿಡಿಯೋ ನೋಡಿ!

author-image
Gopal Kulkarni
Updated On
ಟೀಚರ್ ಬೈದಿದ್ದಕ್ಕೆ ಶಾಲೆ ಬಿಟ್ಟು 40 ಕಿ.ಮೀ ಓಡಿ ಹೋದ ವಿದ್ಯಾರ್ಥಿಗಳು; ಆಮೇಲೇನಾಯ್ತು? ವಿಡಿಯೋ ನೋಡಿ!
Advertisment
  • ಕಡಿಮೆ ಮಾರ್ಕ್ಸ್​ ಬಂದಿದ್ದಕ್ಕೆ ಅವಮಾನಗೊಂಡ ವಿದ್ಯಾರ್ಥಿಗಳು ಹೋಗಿದ್ದೆಲ್ಲಿ?
  • ವಿದ್ಯಾರ್ಥಿಗಳ ಪತ್ತೆ ಮಾಡಲು ಪೊಲೀಸ್ ಅಧಿಕಾರಿಗಳ ಶ್ರಮ ಹೇಗಿತ್ತು ಗೊತ್ತಾ?
  • ಶಾಲೆಯನ್ನು ತೊರೆದು 40ಕಿಮೀ ದೂರದಲ್ಲಿ ಪತ್ತೆಯಾಗಿದ್ದು ಹೇಗೆ? ಆಗಿದ್ದೇನು?

ನವದೆಹಲಿ: ಇದು ಸ್ಪರ್ಧಾತ್ಮಕ ಯುಗ. ಎಲ್ಲರೂ ಒಂದೇ ರೇಖೆಯಲ್ಲಿಯೇ ಓಡಬೇಕು. ಹೆಗಲಿಗಿರುವ ಶಕ್ತಿ ಮೀರಿ ಭಾರ ಹೊರಬೇಕು. ಫೇಲ್​, ಕಡಿಮೆ ಅಂಕ ಇವೆಲ್ಲವೂ ಬದುಕಿನ ದೊಡ್ಡ ಅವಮಾನದ ಸಂಗತಿ. ಈ ಒಂದು ಮಾನಸಿಕತೆ ಸದ್ಯ ಈಗ ಶೈಕ್ಷಣಿಕ ಬದುಕಿನಲ್ಲಿ ಅನಿವಾರ್ಯವಾಗಿ ಅಳವಡಿಕೆಯಾಗಿದೆ. ಓದಲಾಗದ, ಕಡಿಮೆ ಅಂಕ ತೆಗೆದುಕೊಳ್ಳುವ, ಫೇಲ್ ಆಗುವ ವಿದ್ಯಾರ್ಥಿಗಳು ಈ ಜಗತ್ತಿನಲ್ಲಿ ನಿರುಪಯೋಗಿಗಳು ಅನ್ನೋ ಮಟ್ಟದಲ್ಲಿ ಅವರನ್ನು ನೋಡಲಾಗುತ್ತದೆ. ಇದೇ ಮಾನಸಿಕತೆ ಈಗ ನೋಯ್ಡಾದಲ್ಲಿ ಇಬ್ಬರು ಮಕ್ಕಳು ಶಾಲೆಯನ್ನು ತೊರೆದು ಯಾರಿಗೂ ಸಿಗದಂತೆ ಓಡಿ ಹೋಗುವಂತ ಅನಿವಾರ್ಯತೆಗೆ ನೂಕಿದೆ.

Advertisment

ಇದನ್ನೂ ಓದಿ:VIDEO: ಇರೋದು ಒಂದೇ ಬದುಕು.. ಈ ಹುಡುಗಿಗೆ ಅದೇನು ಕ್ರೇಜೋ; ರೊಚ್ಚಿಗೆದ್ದ ಜನ ಏನ್ ಮಾಡಿದ್ರು?

ಅರುಣ್ ಚೌರಾಸಿ ಹಾಗೂ ನಿತಿನ್ ಧ್ಯಾನ್ ಅನ್ನುವ ವಿದ್ಯಾರ್ಥಿಗಳು ಉತ್ತರಾಖಂಡ್​ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ಇಂಟರ್​ನಲ್ ಟೆಸ್ಟ್​ನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅವರ ಕ್ಲಾಸ್​ ಟೀಚರ್ ಬೈದು, ಮಾರ್ಕ್ಸ್​ ಕಾರ್ಡ್​ಗೆ ಪೋಷಕರ ಸಹಿ ಮಾಡಿಸಿಕೊಂಡು ಬರಬೇಕು ಮತ್ತು ಪೋಷಕರನ್ನು ಶಾಲೆಗೆ ಕರೆದುಕೊಂಡು ಬಂದು ನಮಗೆ ಭೇಟಿ ಮಾಡಿಸಬೇಕು ಎಂದು ಆಗ್ರಹಿಸಿದ್ದರು. ಇಂಟರ್​ನಲ್ ಪರೀಕ್ಷೆಯಲ್ಲಿ ಫೇಲಾದ ಮಕ್ಕಳು ಈ ಮಾತನ್ನು ಕೇಳಿ ಕನಲಿ ಹೋಗಿದ್ದರು. ಪಾಲಕರಿಗೆ ಕಡಿಮೆ ಅಂಕ ಬಂದಿದ್ದು ಗೊತ್ತಾದರೆ ಏನು ಮಾಡುತ್ತಾರೋ ಅನ್ನೋ ಭಯ ಶುರುವಾಗಿದೆ. ಏನೆಲ್ಲಾ ಅವಮಾನ ಆಗಲಿದೆಯೋ ಎಂದುಕೊಂಡು ಶಾಲೆಯನ್ನೇ ಬಿಟ್ಟು ಓಡಿ ಹೋಗೊಣ ಎಂದು ನಿರ್ಧರಿಸಿ ಅದೇ ದಿನ ಸಂಜೆಯಿಂದ ಇಬ್ಬರೂ ನಾಪತ್ತೆಯಾಗಿದ್ದರು. ಯಾವಾಗ ರಾತ್ರಿಯಾದರೂ ಮಕ್ಕಳು ಬರಲಿಲ್ಲವೋ ಆತಂಕಗೊಂಡ ಪಾಲಕರು ಪೊಲೀಸ್​ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ:ಮೋದಿ ಬಳಿಕ ಮಾಸ್ಕೋದತ್ತ ಭಾರತದ ಜೇಮ್ಸ್ ಬಾಂಡ್ ಧೋವಲ್ ಪಯಣ; ಏನಿದರ ಮಾಸ್ಟರ್ ಪ್ಲಾನ್?

Advertisment

ಪೊಲೀಸ್ ಟೀಮ್ ಮಕ್ಕಳನ್ನು ಪತ್ತೆ ಮಾಡಿದ್ದೆ ರೋಚಕ ಕಹಾನಿ
ಯಾವಾಗ ಮಕ್ಕಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಯಿತೋ ತತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ 7 ಟೀಂಗಳನ್ನು ರಚನೆ ಮಾಡಿ ಮಕ್ಕಳನ್ನು ಪತ್ತೆ ಮಾಡಲು ಅಖಾಡಕ್ಕೆ ಇಳಿಯಿತು. ಶಾಲೆಯ ಸಿಸಿಟಿವಿ ಕ್ಯಾಮರಾ ಸೇರಿದಂತೆ ಒಟ್ಟು 500 ಸಿಸಿಕ್ಯಾಮರಾಗಳನ್ನು ಈ ಪೊಲೀಸ್ ಪಡೆ ಜಾಲಾಡಿತ್ತು. ಸ್ಕೂಲ್ ಗೇಟ್​ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹುಡುಗರ ದೃಶ್ಯಗಳು ಕಾಣಿಸಿದ್ದವು. ಕೊನೆಗೆ ಮಫ್ತಿಯಲ್ಲಿ ಹೊರಟ ಪೊಲೀಸರು ಮಕ್ಕಳ ಪತ್ತೆ ಕಾರ್ಯಕ್ಕೆ ಮುಂದಾದರು. ಸರ್ವಪ್ರಯತ್ನಗಳ ಬಳಿಕ ಇಬ್ಬರು ಮಕ್ಕಳು ದೆಹಲಿಯ ಆನಂದ ವಿಹಾರದಲ್ಲಿ ಪತ್ತೆಯಾಗಿದ್ದಾರೆ.


">September 7, 2024

ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ

Advertisment

ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ನೋಯ್ಡಾಗೆ ಕರೆದುಕೊಂಡ ಬಂದ ಪೊಲೀಸರು ಅವರ ಪಾಲಕರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಕಮಿಷನರ್ ಲಕ್ಷ್ಮೀ ಸಿಂಗ್ ಇಬ್ಬರು ಮಕ್ಕಳು ಹಾಗೂ ಅವರ ಪಾಲಕರೊಂದಿಗೆ ಆಪ್ತಸಮಾಲೋಚನೆ ನಡೆಸಿ, ಅವನ್ನು ಕಳುಹಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment