ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತುಕೊಂಡು ಹುಡುಗಿ ರೀಲ್ಸ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಹುಡುಗಿಯ ಈ ವಿಡಿಯೋ
ವೈರಲ್ ವಿಡಿಯೋ ನೋಡಿದ ನೆಟ್ಟಿಗರಿಂದ ಭಾರೀ ಆಕ್ರೋಶ
ಈಗಂತೂ ಕೆಲವರು ಸೋಷಿಯಲ್ ಮೀಡಿಯಾದ ಮೂಲಕ ಖ್ಯಾತಿ ಗಳಿಸಬೇಕು. ವಿಡಿಯೋಗೆ ವೀವ್ಸ್ ಹಾಗೂ ಲೈಕ್ಸ್ ಬರಬೇಕು ಅಂತ ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ಬಂದು ಹುಚ್ಚಾಟ ಮೆರೆದಿದ್ದಾಳೆ.
ಇದನ್ನೂ ಓದಿ: DeepikaPadukone: ಫ್ಯಾನ್ಸ್ಗೆ ಖುಷಿ ಸುದ್ದಿ.. ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ!
ಹೌದು, ಸೋಷಿಯಲ್ ಮೀಡಿಯಾದಲ್ಲಿ ಈಗಂತೂ ಯುವಕ, ಯುವತಿಯರು ರೀಲ್ಸ್ ಗೀಳಿಗೆ ಬಿದ್ದಿದ್ದಾರೆ. ತಾವು ಮಾಡಿದ ವೀವ್ಸ್ ಹೆಚ್ಚಿನ ಮಟ್ಟದಲ್ಲಿ ವೀವ್ಸ್ಗಾಗಿ ರಿಸ್ಕಿ ಸ್ಟಂಟ್ಗಳು, ವ್ಹೀಲಿಂಗ್ ಮಾಡುವುದರ ಮೊರೆ ಹೋಗುತ್ತಿದ್ದಾರೆ. ಪ್ರಾಣವನ್ನು ಲೆಕ್ಕಿಸದೆ ಹುಚ್ಚು ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಕೆಲವರು ರಸ್ತೆಗಳಲ್ಲಿ ಮತ್ತು ಜನಸಂದಣಿಯಲ್ಲಿ ವಿಡಿಯೋ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುತ್ತಾರೆ.
वायरल होने का बहुत जुनून सवार हो गया है आजकल इनलोगों को 😐
🎥: Suleta_Cute_girl_500k pic.twitter.com/wWXuESMrCr
— छपरा जिला 🇮🇳 (@ChapraZila) September 5, 2024
ಆದರೆ ಹುಡುಗಿಯೊಬ್ಬಳು ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ. ವೈರಲ್ ಆಗಿರೋ ವಿಡಿಯೋದಲ್ಲಿ ಹುಡುಗಿಯೊಬ್ಬಳು ಪ್ರಾಣದ ಹಂಗನ್ನು ತೊರೆದು ರೈಲಿನ ಬಾಗಿಲಿಗೆ ನೇತಾಡುತ್ತಾ ರೀಲ್ಸ್ ಮಾಡುತ್ತಿದ್ದಾಳೆ. ಅಕಸ್ಮಾತ್ ಅವಳ ಕೈ ಜಾರಿದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತದೆ. ವಿಡಿಯೋದ ಕೊನೆಯಲ್ಲಿ ಹುಡುಗಿ ಸುರಕ್ಷಿತವಾಗಿ ಮತ್ತೆ ರೈಲಿಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಯಾರೇ ಆಗಲಿ ಇಂತಹ ಸ್ಟಂಟ್‌ಗಳನ್ನು ಮಾಡಿ ಅನಾಹುತಕ್ಕೆ ಆಹ್ವಾನ ನೀಡುವುದು ಸರಿಯಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ