newsfirstkannada.com

×

ವರ್ಷದ ಹಿಂದೆ ಕಾಣೆಯಾಗಿದ್ದ ವೃದ್ಧೆ.. ತನ್ನ ಕುಟುಂಬ ಸೇರಿದ್ದು ಮಾತ್ರ ದೊಡ್ಡ ಪವಾಡ

Share :

Published April 5, 2024 at 2:07pm

    ವರ್ಷದ ಹಿಂದೆ ಮದನಪಲ್ಲಿಯಲ್ಲಿ ಪ್ರಕರಣವನ್ನ ದಾಖಲು ಮಾಡಲಾಗಿತ್ತು

    ಮಾಹಿತಿ ಸಿಗುತ್ತಿದ್ದಂತೆ ನಗರಕ್ಕೆ ಅಗಮಿಸಿರುವ ವೃದ್ಧೆಯ ಸಂಬಂಧಿಗಳು

    ತಹಶೀಲ್ದಾರ್ ಮನವಿಯಿಂದ ಟ್ರಸ್ಟ್​​ನಲ್ಲಿ ಆಶ್ರಯ ಪಡೆದುಕೊಂಡಿದ್ದ ವೃದ್ಧೆ

ಚಿಕ್ಕಮಗಳೂರು: ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದ ಅಂಧ್ರ ಪ್ರದೇಶದ ಮದನಪಲ್ಲಿ ತಾಲೂಕಿನ ವೃದ್ಧೆಯೊಬ್ಬರು ಮರಳಿ ತನ್ನ ಕುಟುಂಬ ಸೇರಿಕೊಂಡಿದ್ದಾರೆ.

ವೃದ್ಧೆ ಅಚ್ಚಮ್ಮ (72) ಅಂಧ್ರದ ಮದನಪಲ್ಲಿಯ ನಿವಾಸಿ. ಈ ವೃದ್ಧೆಯು ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ನಿರ್ಗತಿಕಳಾಗಿ ತಿರುಗಾಡುತ್ತಿದ್ದಳು. ಯಾವಾಗಲೂ ನಗರದಲ್ಲಿರುವ ತಾಲೂಕು ಕಚೇರಿ ಬಳಿ ಇರುತ್ತಿದ್ದರು. ಅಲ್ಲಿ ಯಾವುದೇ ಕಸ ಕಂಡರೆ ಅದನ್ನು ಗೂಡಿಸಿ, ಒಟ್ಟು ಮಾಡಿ ಸ್ವಚ್ಛ ಮಾಡುತ್ತಿದ್ದರು. ಹೀಗಾಗಿ ತಹಶೀಲ್ದಾರ್ ಮನವಿ ಮೇರೆಗೆ ಸಹಾನಾ ಜೆ ರೂಬಿನ್ ಸಮಾಜ ಸೇವಾ ಟ್ರಸ್ಟ್​​ನಲ್ಲಿ ವೃದ್ಧೆಗೆ ಆಶ್ರಯ ನೀಡಲಾಗಿತ್ತು.

ಇದನ್ನೂ ಓದಿ: ಸೆಂಟ್ರಲ್​ ಜೈಲಿನಲ್ಲೂ ಲಂಚ.. ಲಂಚ; ದುಡ್ಡು ಪೀಕುವ ಭ್ರಷ್ಟ ಕಾನ್​ಸ್ಟೇಬಲ್

ಸದ್ಯ ಟ್ರಸ್ಟ್​ ಹಾಗೂ ಮಹಿಳಾ ಪೊಲೀಸ್ ಠಾಣೆ ನೇತೃತ್ವದ ಕಾರ್ಯಪ್ರವೃತ್ತಿಯಿಂದ ಅಚ್ಚಮ್ಮ ತನ್ನ ಬಳಗವನ್ನು ಸೇರಿಕೊಂಡಿದ್ದಾರೆ. ವೃದ್ಧೆ ಕಾಣೆಯಾಗಿದ್ದಾರೆ ಎಂದು ಒಂದು ವರ್ಷದ ಹಿಂದೆ ಮದನಪಲ್ಲಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಹೀಗಾಗಿ ಎರಡು ರಾಜ್ಯದ ಪೊಲೀಸರ ಸಂವಹನದಿಂದ ವೃದ್ಧೆ ಕುಟುಂಬಕ್ಕೆ ಮರಳಿದ್ದಾರೆ. ಸದ್ಯ ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಮಕ್ಕಳು ಚಿಕ್ಕಮಗಳೂರಿಗೆ ಅಗಮಿಸಿ ತಾಯಿಯನ್ನ ಕಂಡು ಫುಲ್ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ಷದ ಹಿಂದೆ ಕಾಣೆಯಾಗಿದ್ದ ವೃದ್ಧೆ.. ತನ್ನ ಕುಟುಂಬ ಸೇರಿದ್ದು ಮಾತ್ರ ದೊಡ್ಡ ಪವಾಡ

https://newsfirstlive.com/wp-content/uploads/2024/04/CKM_OLD_WMEN.jpg

Load More