newsfirstkannada.com

ಕರಾಳ ಗುರುವಾರ.. ಶಾಲಾ ಬಸ್​ ಹತ್ತಿ ಹೋದ 8 ಮಕ್ಕಳ ದುರಂತ ಅಂತ್ಯ; ಅಸಲಿಗೆ ಆಗಿದ್ದೇನು?

Share :

Published April 11, 2024 at 9:56pm

Update April 11, 2024 at 10:00pm

    ಹರಿಯಾಣದ ನರ್ನಾಲ್​ನ ಉನ್ಹಾನಿ ಗ್ರಾಮದ ಬಳಿ ನಡೆದ ಭೀಕರ ಅಪಘಾತ

    1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಹೊತ್ತು ಹೋಗುತ್ತಿದ್ದ ಬಸ್​​ ಌಕ್ಸಿಡೆಂಟ್

    ಒಂದಲ್ಲ ಎರಡಲ್ಲ ಬರೋಬ್ಬರಿ 30ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಂಭೀರ ಗಾಯ

ಚಂಡೀಗಢ: ಪಾನಮತ್ತ ಚಾಲಕನ ಎಡವಟ್ಟಿನಿಂದಾಗಿ ಸ್ಕೂಲ್​ ಬಸ್​​​ ಪಲ್ಟಿಯಾಗಿ 8 ಮಕ್ಕಳು ಸಾವನ್ನಪ್ಪಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಸ್ಕೂಲ್​ ಬಸ್​​​ ಡ್ರೈವರ್​ನ ​ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು. ಸುಮಾರು 30 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಹರಿಯಾಣದ ಮಹೇಂದ್ರಗಢದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಪಾನಮತ್ತ ಚಾಲಕನ ನಿರ್ಲಕ್ಷ್ಯದಿಂದಾಗಿ ಶಾಲಾ ಬಸ್​​ವೊಂದು ಮರಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ನಡೆದು ಹೋಗಿದೆ. ಕನಿನಾದ ಜಿಎಲ್​​ ಪಬ್ಲಿಕ್​ ಸ್ಕೂಲ್​ಗೆ ಸೇರಿದ ಬಸ್​​ ಇದಾಗಿದ್ದು, ಬಸ್​​ನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 8 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 30ಕ್ಕೂ ಹೆಚ್ಚು ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಭೀಕರ ದುರಂತ.. ಶಾಲಾ ಬಸ್​ ಮರಕ್ಕೆ ಡಿಕ್ಕಿಯಾಗಿ 6 ಮಕ್ಕಳು ಸಾವು; 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಮಕ್ಕಳ ಸಹಾಯಕ್ಕೆ ಬಂದಿದ್ದರಿಂದ ಕೆಲವು ಮಕ್ಕಳ ಜೀವವನ್ನು ಕಾಪಾಡಲಾಗಿದೆ. ಸ್ಥಳೀಯರ ಪ್ರಕಾರ ಸ್ಕೂಲ್​ ಬಸ್​​ ಡ್ರೈವರ್​​ನ ಅತಿವೇಗದ ಚಾಲನೆಯೇ ಈ ಭೀಕರ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ಚಾಲಕ ಕುಡಿದು ಬಸ್​​​ಓಡಿಸುತ್ತಿದ್ದ ಎಂದು ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಮಗು ಕೂಡ ಆರೋಪಿಸಿದೆ. ಅಲ್ಲದೇ ರಂಜಾನ್​​ ಹಬ್ಬಕ್ಕೆ ಶಾಲೆಗೆ ರಜೆ ಕೊಡದೇ ತರಗತಿಗಳನ್ನು ನಡೆಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇನ್ನು, ಹರಿಯಾಣದಲ್ಲಿ ನಡೆದ ಭೀಕರ ಅಪಘಾತದ ಸುದ್ದಿ ತಿಳಿದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಡಳಿತ ಸಹಾಯ ನೀಡುತ್ತದೆ. ಮೃತ ಮಕ್ಕಳ ಕುಟುಂಬಕ್ಕೆ ನನ್ನ ಸಂತಾಪವಿದೆ, ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಒಟ್ಟಾರೆ, ಶಾಲಾ ಬಸ್​​ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದು, ಅವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಕುಡಿದು ಚಾಲಕ ವಾಹನ ಚಲಾಯಿಸಿದ್ದರಿಂದ ಪೋಷಕರಿಗೆ ಮುಂದಿನ ಭವಿಷ್ಯವಾಗಿದ್ದ ಮಕ್ಕಳು ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಾಳ ಗುರುವಾರ.. ಶಾಲಾ ಬಸ್​ ಹತ್ತಿ ಹೋದ 8 ಮಕ್ಕಳ ದುರಂತ ಅಂತ್ಯ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/bus-accident1.jpg

Load More