ಭಾರೀ ಮಳೆಯಿಂದ ಅನಾಹುತ.. ಸಂಕಷ್ಟಕ್ಕೆ ಮಿಡಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಂದ ಸಹಾಯ

author-image
admin
Updated On
ಭಾರೀ ಮಳೆಯಿಂದ ಅನಾಹುತ.. ಸಂಕಷ್ಟಕ್ಕೆ ಮಿಡಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಂದ ಸಹಾಯ
Advertisment
  • ಚಿತ್ರದುರ್ಗ ತಾಲ್ಲೂಕಿನ ಓಬಣ್ಣನ ಹಳ್ಳಿಯಲ್ಲಿ ಮನೆಗಳಿಗೆ ಹಾನಿ
  • ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಂದ ಸಹಾಯ
  • ಜನತೆಯ ಸಂಕಷ್ಟಕ್ಕೆ ಮಿಡಿದು ಸಾಂತ್ವನ ಹೇಳಿದ ಇಮ್ಮಡಿ ಶ್ರೀಗಳು

ಚಿತ್ರದುರ್ಗ ತಾಲ್ಲೂಕಿನ ಓಬಣ್ಣನ ಹಳ್ಳಿಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಿನ ಹಲವು ಮನೆಗಳು ಜಲಾವೃತವಾಗಿದ್ದವು. ಇದರಿಂದ ಮನೆಯಲ್ಲಿ ನಿಲ್ಲಲು ಜಾಗವಿಲ್ಲದೆ ಜನತೆ ಪರದಾಡಿದರು. ಮನೆಯಲ್ಲಿ ಇದ್ದ ಸಾಮಾನುಗಳು ಸಹ ನೀರಿನಲ್ಲಿ ಹೋಗಿದೆ ಇದನ್ನು ಮನಗಂಡ ಭೋವಿ ಗುರುಪೀಠ ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಜನತೆಯ ಸಂಕಷ್ಟಕ್ಕೆ ಮಿಡಿದು ಸಾಂತ್ವನ ಹೇಳುವುದರ ಮೂಲಕ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡುವುದರ ಮೂಲಕ ಸಹಾಯವನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾಡಿದ್ದಾರೆ.

publive-image

ಓಬಣ್ಣನಹಳ್ಳಿ ಸುತ್ತ-ಮುತ್ತ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಇದರಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಳೆಯಿಂದಾಗಿ ಗ್ರಾಮದಲ್ಲಿನ ಮನೆಗಳು ಹಾನಿಯಾಗಿದ್ದು ಹಲವು ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ. ಮಳೆಯ ದಿನದಂದು ಮನೆಯವರು ಪೂರ್ಣವಾಗಿ ನೀರಿನಿಂದ ಜಾಗರಣೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಮ್ಮಡಿ ಶ್ರೀಗಳು ಮನೆಗಳನ್ನು ಪರಿಶೀಲಿಸಿದರು, ಮಳೆಯಿಂದ ಆದ ಅನಾಹುತವನ್ನು ಖುದ್ದಾಗಿ ವೀಕ್ಷಣೆ ಮಾಡಿದರು.

publive-image

ತದ ನಂತರ ಮಾತನಾಡಿದ ಶ್ರೀಗಳು, ನಮ್ಮ ಜನತೆ ಸಂಕಟ ಬಂದಾಗ ಮಾತ್ರ ವೆಂಕಟರಮಣನನ್ನು ನೆನೆಯುತ್ತಾರೆ. ದೇವರೆ ಯಾಕೆ ನನಗೆ ಕಷ್ಟವನ್ನು ಕೊಟ್ಟೆ ನನ್ನ ಸಂಸಾರವನ್ನು ಯಾಕೆ ಬೀದಿಗೆ ತಂದೆ ಎಂದು ಪ್ರಶ್ನಿಸುತ್ತಿದ್ದಾರೆ. ಮಳೆ ಬಂದರು ಸಹಾ ನೀವುಗಳು ಧೃತಿಗೆಟ್ಟಿಲ್ಲ ಯಾಕೆಂದರೆ ನಿಮ್ಮ ಶಕ್ತಿಯನ್ನು ನೀವುಗಳು ನಂಬಿದ್ದೀರಿ. ಇದರ ಮೇಲೆ ನಿಮಗೆ ನಂಬಿಕೆ ಇದೆ ಇದರಿಂದ ಇಂತಹ ತೊಂದರೆಗಳು ಬಂದರೂ ಸಹ ಧೃತಿಗೆಡದೆ ಧೈರ್ಯದಿಂದ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ನಿಮ್ಮದು ಶ್ರಮಿಕ ವರ್ಗವಾಗಿದೆ ದಿನ ಕಾಯಕವನ್ನು ಮಾಡುವುದರ ಮೂಲಕ ಬದುಕನ್ನು ಸಾಗಿಸಲಾಗುತ್ತಿದೆ. ಸರ್ಕಾರ ನಿಮ್ಮ ಸಹಾಯಕ್ಕೆ ಬರುತ್ತದೆ ಆದರೆ ಸ್ವಲ್ಪ ತಡವಾಗಬಹುದು ಅಲ್ಲಿಯವರೆಗೂ ಕಾಯದೆ ಮಳೆಯಿಂದ ಬಿದ್ದಿರುವ ನಿಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಶ್ರೀಗಳು ಕರೆ ನೀಡಿದರು.

publive-image

ನಿಮ್ಮ ಗ್ರಾಮ ಸುತ್ತಾ-ಮುತ್ತಾ ಗುಡ್ಡಗಾಡಿನ ಪ್ರದೇಶವಾಗಿದೆ. ಮಳೆಯಿಂದ ಬಿದ್ದ ನೀರು ಪೂರ್ಣವಾಗಿ ಹರಿದು ಕೆಳಗಡೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ನಿಮ್ಮ ಮನೆಗಳು ಭದ್ರವಾಗಿ ಇರಬೇಕಾದರೆ ಎಲ್ಲಿ ನೀರು ಹರಿದು ಬರುತ್ತದೆ ಅಂತಹ ಸ್ಥಳದಲ್ಲಿ ಸುಭದ್ರವಾದ ತಡೆ ಗೋಡೆಯನ್ನು ನಿರ್ಮಾಣ ಮಾಡುವುದರ ಮೂಲಕ ನೀರು ಬಾರದಂತೆ ತಡೆಯಬೇಕಿದೆ ಎಂದ ಶ್ರೀಗಳು, ಮುಂದಿನ ದಿನದಲ್ಲಿ ಗ್ರಾಮವನ್ನು ನಿರ್ಮಾಣ ಮಾಡುವಾಗ ಸರಿಯಾದ ರೀತಿಯಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಮಾಡುವಂತಾಗಬೇಕಿದೆ. ಇದರಿಂದ ಮಳೆಯ ನೀರನ್ನು ತಡೆಯಬಹುದಾಗಿದೆ. ನಮ್ಮ ಮಠವು ಮಾನವೀಯತೆಯನ್ನು ಮಿಡಿಯುವ ಮಠವಾಗಿದೆ ಕಷ್ಠದಲ್ಲಿರುವವರೆಗೆ ಸಹಾಯ, ಸಹಕಾರವನ್ನು ನೀಡಲಾಗುವುದು ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: 3 ಅಡಿ ಉದ್ದದ ಹಾವನ್ನೇ ಕಚ್ಚಿ ಬಿಸಾಕಿದ 1 ವರ್ಷದ ಪೋರ.. ಬಾಲಕನಿಗೆ ಆಮೇಲೆ ಏನಾಯ್ತು?

ನೀವುಗಳು ದುಡಿಮೆಯಿಂದ ಗಳಿಸಿದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡದೇ ಸ್ವಲ್ಪ ಉಳಿಸಬೇಕು. ಹಾಗೆ ಉಳಿಸಿದ ಹಣವನ್ನು ಈ ರೀತಿಯಾದ ಆಪತ್ಕಾಲದಲ್ಲಿ ಬಳಕೆಯನ್ನು ಮಾಡಕೊಳ್ಳಬೇಕಿದೆ. ಆದರೆ, ನಮ್ಮ ಜನಗಳಿಸುವುದಕ್ಕಿಂತ ಖರ್ಚು ಮಾಡುವುದು ಹೆಚ್ಚಾಗಿದೆ. ಈ ರೀತಿಯ ಸಮಯದಲ್ಲಿ ಹಣ ಇಲ್ಲದೆ ಧೃತಿಗೆಡುತ್ತಾರೆ. ಮುಂದಿನ ದಿನದಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುವಂತೆ ಕಿವಿ ಮಾತು ಹೇಳಿದ ಶ್ರೀಗಳು, ಮುಂದಿನ ದಿನದಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಬರಬಹುದು ನಾನು ಸಹ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಈ ಸಂದರ್ಭದಲ್ಲಿ ಅಕ್ಕಿ, ಬೇಳೆ, ರಾಗಿ, ಜೋಳ, ಖಾರದ ಪುಡಿ, ಉಪ್ಪು, ಸಕ್ಕರೆ, ಗೋಧಿ ಸೇರಿದಂತೆ ಸುಮಾರು 20 ವಿವಿಧ ರೀತಿಯ ದವಸ ಧಾನ್ಯಗಳನ್ನು ಒಳಗೊಂಡ ಕಿಟ್ ಗಳನ್ನು ಅಲ್ಲಿನ 120 ಜನರಿಗೆ ಹಂಚಿಕೆ ಮಾಡಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment