newsfirstkannada.com

ಅರೇ ಏನಪ್ಪಾ ಇದು! ಕೇವಲ 9 ನಿಂಬೆಹಣ್ಣು 2.3 ಲಕ್ಷಕ್ಕೆ ಹರಾಜು; ಜನ ಮುಗಿ ಬೀಳೋದೇಕೆ ಗೊತ್ತಾ?

Share :

Published March 28, 2024 at 5:07pm

    ಈ ಉತ್ಸವದ ಕೊನೆಯ ದಿನದಂದು ನಡೆಯುತ್ತದೆ ಮಹಾನ್ ಪವಾಡ

    ಸಖತ್​ ಸುದ್ದಿಯಲ್ಲಿದೆ ತಮಿಳುನಾಡಿನ ಪ್ರಸಿದ್ಧ ವಿಲ್ಲುಪುರಂ ದೇವಾಲಯ

    ಕೇವಲ ಒಂಬತ್ತು ನಿಂಬೆಹಣ್ಣಿಗಳನ್ನು ಖರೀದಿಸಲು ಮುಗಿ ಬೀಳುವುದೇಕೆ?

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ವಿಲ್ಲುಪುರಂನಲ್ಲಿರೋ ಮುರುಗನ್​ ದೇವಾಲಯ ಸಖತ್​ ಸುದ್ದಿಯಾಗಿದೆ. ಸೌಂದರ್ಯಕ್ಕೆ ಹೆಸರುವಾಸಿಯಾಗಿರೋ ಪ್ರಸಿದ್ಧ ದೇವಾಲಯ ಇದಾಗಿದೆ. ಈ ಮುರುಗನ್​ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಾರೆ. ವಿಲ್ಲುಪುರಂನಲ್ಲಿರೋ ಮುರುಗನ್​ ದೇವಸ್ಥಾನದಲ್ಲಿ ಪ್ರತಿ ವರ್ಷ ಪಂಗುನಿ ಉತಿರಂ ಎಂಬ ಜಾತ್ರೆ ನಡೆಯುತ್ತದೆ. ಅದೇ ರೀತಿ ಈ ವರ್ಷ ಕೂಡ ಪ್ರಸಿದ್ಧ ದೇವಾಲಯದಲ್ಲಿ ಜಾತ್ರೆ ನಡೆದಿತ್ತು.

ಇದನ್ನೂ ಓದಿ: ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು.. ಕೊನೆಗೂ ಎಲ್ಲರ ಕೈಗೆ ಸಿಕ್ಕಿ ಬಿದ್ದ; ಯಾರಿವರು ಗೊತ್ತಾ?

9 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಕೊನೆಯ ದಿನದಂದು ಪೂಜೆಗೆ ಬಳಸುವ ನಿಂಬೆ ಹಣ್ಣುಗಳನ್ನು ಹರಾಜು ಹಾಕಲಾಗುತ್ತದೆ. ಅದರಂತೆಯೇ ಈ ಬಾರಿ ಕೂಡ ದೇವಸ್ಥಾನದ 9 ನಿಂಬೆಹಣ್ಣುಗಳನ್ನೂ ಹರಾಜಿಗೆ ಇಡಲಾಯಿತು. ಈ ವೇಳೆ 9 ನಿಂಬೆಹಣ್ಣು ಬರೋಬ್ಬರಿ 2.3 ಲಕ್ಷ ರೂಪಾಯಿಗೆ ಹರಾಜಾಗಿದೆ.

ಹೌದು, ನಮಗೆ ಮಾರುಕಟ್ಟೆಯಲ್ಲಿ ಕೇವಲ 10ರಿಂದ 30 ರೂಪಾಯಿಗೆ ನಿಂಬೆ ಹಣ್ಣುಗಳು ಸಿಗುತ್ತವೆ. ಆದರೆ ಇಲ್ಲಿ ಕೇವಲ 9 ನಿಂಬೆಹಣ್ಣು 2.3 ಲಕ್ಷ ರೂಪಾಯಿಗೆ ಹರಾಜಾಗಿರುವುದು ನಿಜಕ್ಕೂ ಅಚ್ಚರಿ. ಅಷ್ಟಕ್ಕೂ ಈ ನಿಂಬೆಹಣ್ಣನ್ನು ಇಷ್ಟು ಹೆಚ್ಚು ಮೊತ್ತಕ್ಕೆ ಹರಾಜು ಹಾಕುವುದಕ್ಕೆ ಒಂದು ಮುಖ್ಯವಾದ ಕಾರಣ ಇದೆ.

ಹೌದು, ಈ ಪವಿತ್ರ ದೇವಸ್ಥಾನದಲ್ಲಿ ಹರಾಜಾದ ನಿಂಬೆಹಣ್ಣುಗಳು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಈ ನಿಂಬೆಹಣ್ಣಿನಿಂದ ತಯಾರಿಸಿದ ಪಾನಕವನ್ನು ಸೇವಿಸುವುದರಿಂದ ಬಂಜೆತನ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೇ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗುತ್ತದೆಯಂತೆ. ಹಾಗಾಗಿ ಮಕ್ಕಳಿಲ್ಲದ ದಂಪತಿಗಳು ಹರಾಜಿನಲ್ಲಿ ಈ ನಿಂಬೆಹಣ್ಣುಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ.

ಮುರುಗ ಸ್ವಾಮಿಯ ಈಟಿಗೆ ಅಂಟಿಕೊಂಡಿರುವ ಈ ನಿಂಬೆಹಣ್ಣುಗಳು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತವೆ ಎನ್ನುವುದು ಇಲ್ಲಿನ ಜನರ ಬಲವಾದ ನಂಬಿಕೆಯಾಗಿದೆ. ಸಾಮಾನ್ಯವಾಗಿ ನಿಂಬೆಹಣ್ಣುಗಳು ವಿವಿಧ ಸಂಸ್ಕೃತಿಗಳಲ್ಲಿ ಆಧ್ಯಾತ್ಮಿಕತೆಯಲ್ಲಿ ಗೌರವಾನ್ವಿತ ಸ್ಥಾನಮಾನವನ್ನು ಹೊಂದಿವೆ. ಆಗಾಗ ಶುದ್ಧತೆಯನ್ನು ಸಂಕೇತಿಸುತ್ತದೆ. ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಹೀಗಾಗಿ ಎಲ್ಲಾ ದೇವಾಲಯಗಳಲ್ಲಿ ಈ ನಿಂಬೆಹಣ್ಣು ಮಹತ್ವದ ಪಾತ್ರವನ್ನು ವಹಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೇ ಏನಪ್ಪಾ ಇದು! ಕೇವಲ 9 ನಿಂಬೆಹಣ್ಣು 2.3 ಲಕ್ಷಕ್ಕೆ ಹರಾಜು; ಜನ ಮುಗಿ ಬೀಳೋದೇಕೆ ಗೊತ್ತಾ?

https://newsfirstlive.com/wp-content/uploads/2024/03/lemon-1-1.jpg

Load More