ಯುವಕರ ವ್ಹೀಲಿಂಗ್ ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು
ಯುವಕರ ಬೈಕ್ ವೀಲಿಂಗ್ ಹುಚ್ಚಾಟಕ್ಕೆ ಬೀಳುತ್ತಾ ಬ್ರೇಕ್?
ಸೋಷಿಯಲ್ ಮೀಡಿಯಾಗೆ ಅಲೋಕ್ ಕುಮಾರ್ ಧನ್ಯವಾದ
ಮೈಸೂರು: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವಕರಲ್ಲಿ ವೀಲ್ಹಿಂಗ್ ಹುಚ್ಚಾಟ ಹೆಚ್ಚಾಗುತ್ತಿದೆ. ಯುವಕರ ವೀಲ್ಹಿಂಗ್ ಹುಚ್ಚಾಟಕ್ಕೆ ಇನ್ನುಳಿದ ವಾಹನ ಸವಾರರು ಭಯದಿಂದ ಓಡಾಡುವಂತಹ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರು ವೀಲ್ಹಿಂಗ್ ಮಾಡುವ ಯುವಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಶೇರ್ ಮಾಡಿ ಒತ್ತಾಯಿಸುತ್ತಿದ್ದಾರೆ. ಇದೀಗ ಇದೇ ವೀಲ್ಹಿಂಗ್ ವಿಚಾರಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅವರು ಸೋಷಿಯಲ್ ಮೀಡಿಯಾಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಹಿಂದೆಲ್ಲ ಪೊಲೀಸರನ್ನು ಮೂರನೇ ಕಣ್ಣು ಅನ್ನುತ್ತಿದ್ದರು. ಈಗ ಪೊಲೀಸರಿಗೆ ಸಾವಿರ ಕಣ್ಣುಗಳಿವೆ. ಹುಡುಗರು ವ್ಹೀಲಿಂಗ್ ಮಾಡಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತಾರೆ. ಪೊಲೀಸರು ಸೋಷಿಯಲ್ ಮೀಡಿಯಾ ನೋಡುತ್ತಿರುತ್ತಾರೆ. ಪೋಸ್ಟ್ ಮಾಡಿರೋ ವಿಡಿಯೋ ನೋಡಿ ಅವರ ಮೇಲೆ ಕೇಸ್ ಹಾಕುತ್ತಾರೆ. ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳ ಕ್ರೇಜ್ನಿಂದ ಪೊಲೀಸರಿಗೆ ಅನುಕೂಲ ಆಗಿದೆ. ಬಹುತೇಕರು ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಉದ್ದುದ್ದ ಪೋಸ್ಟ್ ಹಾಕುತ್ತಾರೆ ಜೊತೆಗೆ ಟ್ವೀಟ್ ಮಾಡುತ್ತಾರೆ. ಅಂಥವರೇ ಹೆಚ್ಚಾಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಮೊದಲೆಲ್ಲ ನಿಯಮ ಉಲ್ಲಂಘಿಸುವವರು ಪೊಲೀಸರ ವಾಹನ ನೋಡಿಕೊಳ್ಳುತ್ತಿದ್ದರು.
ಈಗ ಕಾರುಗಳಲ್ಲೇ ಬೋರ್ಡ್ ಕ್ಯಾಮೆರಾಗಳು ಇರುತ್ತವೆ. ಜನ ಕೂಡ ರೂಲ್ಸ್ ಉಲ್ಲಂಘಿಸುವವರನ್ನು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸುತ್ತಿದ್ದಾರೆ. ಅವುಗಳ ಆಧಾರದ ಮೇಲೆಯೂ ಕೇಸ್ ಹಾಕುತ್ತಿದ್ದೇವೆ. ಪೊಲೀಸರ ಕಣ್ತಪ್ಪಿಸುವುದು ಸವಾರರ ಸಾಧನೆ ಆಗಬಾರದು. ದಂಡ ಹಾಕುವುದಕ್ಕಿಂತ ಜೀವ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಮೈಸೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ