ಐರ್ಲೆಂಡ್ ವಿರುದ್ಧದ ಸರಣಿಗೆ ಸಂಜು ಮೆಗಾ ಪ್ಲಾನ್
KL ರಾಹುಲ್ಗೆ ಬ್ಯಾಕ್ ಅಪ್ ಆಗಿ ಇಶಾನ್ ಕಿಶನ್..!
ಆಲ್ರೌಂಡರ್ ಸ್ಲಾಟ್ನಲ್ಲಿ ಸೂರ್ಯಗೆ ಚಾನ್ಸ್ ಸಿಗಲ್ಲ
ಏಕದಿನ ವಿಶ್ವಕಪ್ ಟೂರ್ನಿಗೆ ಜಸ್ಟ್ ಎರಡೇ 2 ತಿಂಗಳು ಬಾಕಿಯಿದೆ. ಸದ್ಯ ಪ್ರಯೋಗಗಳನ್ನ ಮಾಡಿರೋ ಟೀಮ್ ಮ್ಯಾನೇಜ್ಮೆಂಟ್ ವಿಶ್ವಕಪ್ ತಂಡವನ್ನು ಡಿಸೈಡ್ ಮಾಡಿದ್ದಾಗಿದೆ. ಇದೀಗ ಡಿಸೈಡ್ ಆಗ್ಬೇಕಿರೋದು ಒಂದೇ ಒಂದು ಸ್ಲಾಟ್. ಈ ಸ್ಲಾಟ್ ಮೇಲೆ ಇಬ್ಬರ ಭವಿಷ್ಯ ನಿಂತಿದೆ.
ಐಸಿಸಿ ಏಕದಿನ ವಿಶ್ವಕಪ್ ಮೆಗಾ ಟೂರ್ನಿಯ ಕೌಂಡ್ಡೌನ್ ಸ್ಟಾರ್ಟ್ ಆಗಿದೆ. ವಿಶ್ವ ಕಿರೀಟ ಗೆಲ್ಲಬೇಕೆಂಬ ಉತ್ಸಾಹದಲ್ಲಿರೋ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಟೂರ್ನಲ್ಲಿ ಭಾರೀ ಪ್ರಯೋಗವನ್ನೇ ಮಾಡಿದೆ. ಅಷ್ಟೇ ಅಲ್ಲ, ಈಗಾಗಲೇ ಏಕದಿನ ವಿಶ್ವಕಪ್ ಕಾಂಬಿನೇಷನ್ ಕೂಡ ಸೆಟ್ ಮಾಡಿದ್ದಾಗಿದೆ. ಆದ್ರೆ, ಒಂದೇ ಒಂದು ಸ್ಲಾಟ್, ಮಾತ್ರವೇ ಅಂತಿಮವಾಗಬೇಕಿದೆ. ಈ ಸ್ಲಾಟ್ಗೆ ಇಬ್ಬರು ಪೈಪೋಟಿ ನಡೆಸ್ತಿದ್ದು, ಯಾರು ಜಾಕ್ಪಾಟ್ ಹೊಡೀತಾರೆ ಎಂಬ ಕುತೂಹಲ ಸಹಜವಾಗೇ ಮೂಡಿದೆ.
ವಿಶ್ವಕಪ್ ರೇಸ್ನಲ್ಲಿ ಸಂಜು ವರ್ಸಸ್ ಸೂರ್ಯ
ಸದ್ಯ ವಿಶ್ವಕಪ್ ಡಿಬೇಟ್ನಲ್ಲಿ ಸಂಜು ಸ್ಯಾಮ್ಸನ್ ವರ್ಸಸ್ ಸೂರ್ಯ ಡಿಬೇಡ್ಗೆ ಕಾರಣ.. ಮಿಡಲ್ ಆರ್ಡರ್ ಬ್ಯಾಟಿಂಗ್ ಡಿಪಾರ್ಟ್ಮೆಂಟ್. ಇದೀಗ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ, ಐರ್ಲೆಂಡ್ ವಿರುದ್ಧದ T20 ಸರಣಿಯಿಂದ ಸೂರ್ಯಕುಮಾರ್ಗೆ ರೆಸ್ಟ್ ನೀಡಿದೆ. ವರ್ಕ್ಲೋಡ್ ಮ್ಯಾನೇಜ್ಮೆಂಟ್ ಅಡಿ ವಿಶ್ರಾಂತಿ ನೀಡಿರುವ ಸೆಲೆಕ್ಷನ್ ಕಮಿಟಿ, ಮತ್ತೊಂದೆಡೆ ಬ್ಯಾಕ್ ಟು ಬ್ಯಾಕ್ ಸಂಜ್ಗೆ ಅವಕಾಶ ನೀಡ್ತಿದೆ. ಇದು ಒಂದು ಕಡೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ನಲ್ಲಿ ಸಂಜುಗೆ ಚಾನ್ಸ್ ನೀಡುವ ಮುನ್ಸೂಚನೆಯಾ ಎಂಬ ಅನುಮಾನ ಹುಟ್ಟುಹಾಕಿದೆ.
ವಿಶ್ವಕಪ್ ತಂಡ ಫಿಕ್ಸ್.. 15ರಲ್ಲಿ ಇರಲ್ವಾ ಸಂಜು-ಸೂರ್ಯ?
ಈಗಾಗಲೇ ಏಕದಿನ ವಿಶ್ವಕಪ್ ಕಾಂಬಿನೇಷನ್ ಹೇಗಿರಬೇಕೆಂದು ಡಿಸೈಡ್ ಮಾಡಿರೋ ಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್ನ 15ರ ಬಳಗದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ಗೆ ಸ್ಥಾನ ನೀಡುವುದು ಅನುಮಾನ. ಇವರಿಬ್ಬರ ಬದಲಾಗಿ ಮಿಡಲ್ ಆರ್ಡರ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಿಗೆ ಚಾನ್ಸ್ ನೀಡಲು ಡೈಸೆಡ್ ಮಾಡಿದೆ. ಈ ಕಾರಣಕ್ಕೆ ಕೆ.ಎಲ್.ರಾಹುಲ್ ಆ್ಯಂಡ್ ಇಶಾನ್ ಕಿಶನ್ ವಿಶ್ವಕಪ್ ತಂಡದಲ್ಲಿ ಖಾಯಂ. ಇದಕ್ಕೆ ಕಾರಣ ಇವರ ಅತ್ಯಧ್ಬುತ ಆಟವೇ ಆಗಿದೆ.
1 ವರ್ಷದಿಂದ ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್..!
ಕಳೆದ 12 ತಿಂಗಳಿಂದ ಇಶಾನ್ ಕಿಶನ್, ಮಿಡ್ಲ ಆರ್ಡರ್ನಲ್ಲಿ 48.09ರ ಸರಾಸರಿಯಲ್ಲಿ 529 ರನ್ ಗಳಿಸಿದ್ರೆ. ಶ್ರೇಯಸ್ ಅಯ್ಯರ್, 58.11 ಸರಾಸರಿಯಲ್ಲಿ 523 ರನ್ ಪೇರಿಸಿದ್ದಾರೆ. ಇನ್ನು ಕೆ.ಎಲ್.ರಾಹುಲ್ 39.11ರ ಸರಾಸರಿಯಲ್ಲಿ 352 ರನ್ ಕಲೆಹಾಕಿದ್ರೆ. ಸಂಜು 73.66 ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಇನ್ನು 134 ರನ್ ಸೂರ್ಯಕುಮಾರ್ ಯಾದವ್, 13.6 ಅವರೇಜ್ಲ್ಲಿ ರನ್ ಪೇರಿಸಿದ್ದಾರೆ. ಇದೇ ಈಗ ಸಂಜು ಸ್ಯಾಮ್ಸನ್ ವರ್ಸಸ್ ಸೂರ್ಯಕುಮಾರ್ ಫೈಟ್ಗೆ ಕಾರಣವಾಗ್ತಿರೋದು..
ವಿಶ್ವಕಪ್ನಲ್ಲಿ ರಾಹುಲ್ಗೆ ವಿಕೆಟ್ ಕೀಪಿಂಗ್ ಹೊಣೆ
ಸದ್ಯ ಸಂಪೂರ್ಣ ಚೇತರಿಸಿಕೊಂಡಿರುವ ರಾಹುಲ್, ಏಕದಿನ ವಿಶ್ವಕಪ್ ಟೂರ್ನಿಗೆ ಮೋಸ್ಟ್ ಇಂಪಾರ್ಟೆಂಟ್ ಪ್ಲೇಯರ್.. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಬ್ಯಾಟಿಂಗ್ ಸ್ಲಾಟ್ ಆ್ಯಂಡ್ ಪರ್ಫಾಮೆನ್ಸ್.
ಆರಂಭಿಕನಾಗಿ ಮಾತ್ರವಲ್ಲದೆ. 2ನೇ ಕ್ರಮಾಂಕ, 4ನೇ ಕ್ರಮಾಂಕ, 5ನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಿ ಸಕ್ಸಸ್ ಕಂಡಿರುವ ರಾಹುಲ್, ಮಿಡಲ್ ಆರ್ಡರ್ ಆ್ಯಂಡ್ ಲೋವರ್ ಆರ್ಡರ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮದ್ದು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾರೆ. ಹೀಗಾಗಿ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸೋದು ಗ್ಯಾರಂಟಿ. ಇನ್ನು ಕೆ.ಎಲ್.ರಾಹುಲ್ಗೆ ಬ್ಯಾಕ್ ಆಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆಯೋದು ಕನ್ಫರ್ಮ್.
ಸೂರ್ಯಕುಮಾರ್ ವೈಫಲ್ಯ ಅನುಭವಿಸಿದ್ರೂ, ಎಕ್ಸ್ಫ್ಯಾಕ್ಟರ್ ಪ್ಲೇಯರ್ ಆಗಿ ತಂಡಕ್ಕೆ ಕಾಣಿಕೆ ನೀಡಬಲ್ಲರು. ಯಾವುದೇ ಕ್ಷಣದಲ್ಲದರೂ ಪಂದ್ಯಕ್ಕೆ ತಿರುವು ನೀಡಬಲ್ಲ ತಾಕತ್ತಿದೆ. ಆದ್ರೆ, 5ನೇ ಕ್ರಮಾಂಕದ ತನಕ ಬ್ಯಾಟಿಂಗ್ ಸ್ಲಾಟ್ ಫಿಕ್ಸ್ ಆಗಿದೆ ಹೀಗಾಗಿ 6ನೇ ಕ್ರಮಾಂಕದ ಮೀಸಲಿಡುವ ಸಾಧ್ಯತೆ ಇದೆ. ಆದ್ರೆ, ಆಲ್ ರೌಂಡರ್ಗಳಾದ ಹಾರ್ದಿಕ್-ಜಡೇಜಾ ಸ್ಲಾಟ್ ನೀಡೋ ಚಾನ್ಸೇ ಇಲ್ಲ. ಮತ್ತೊಂದೆಡೆ ರಾಹುಲ್ ಉಪಸ್ಥಿತಿಯಲ್ಲಿ ಸಂಜುಗೆ ಸ್ಥಾನ ಇಲ್ಲ ಅನ್ನೋದು ಕನ್ಫರ್ಮ್. ಹೀಗಾಗಿ ರಿಸರ್ವ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯೋ ಸಾಧ್ಯತೆ ಮಾತ್ರ ಸಂಜು ಮುಂದಿದೆ.
ಅದೇನೇ ಆಗಲಿ, ಸದ್ಯ ವಿಶ್ವಕಪ್ ರೇಸ್ನಲ್ಲಿ ಸೂರ್ಯ ವರ್ಸಸ್ ಸಂಜು ಫೈಟ್ ನಡೀತಿದ್ದು, ಯಾರು ಅಂತಿಮ 15ರಲ್ಲಿ ಕಾಣಿಸಿಕೊಳ್ತಾರೆ. ಯಾರು ರಿಸರ್ವ್ ಸೀಟ್ನಲ್ಲಿ ಇರ್ತಾರೆ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ