ಚಂದ್ರಯಾನ-3ಕ್ಕಿಂತ ಮುನ್ನವೇ ಲ್ಯಾಂಡಿಂಗ್
ಆ.23ರಂದು ಚಂದ್ರನ ತಲುಪುವ ಚಂದ್ರಯಾನ-3
ಜು.14ರಂದು ಉಡಾವಣೆಯಾಗಿದ್ದ ಚಂದ್ರಯಾನ-3
ಇಸ್ರೋ ಚಂದ್ರಯಾನ-3 ಉಡಾವಣೆ ಮಾಡಿದ್ದು, ಆಗಸ್ಟ್ 23 ರಂದು ಚಂದ್ರನ ಅಂಗಳ ತಲುಪಲಿದೆ. ಆ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದು ಕೂತಿರುವ ಹೊತ್ತಿನಲ್ಲಿ ರಷ್ಯಾ ಕೂಡ ಚಂದ್ರನಿದ್ದಲ್ಲಿಗೆ ಹೊರಟಿದೆ.
ಇವತ್ತು ಬೆಳಗ್ಗೆ ಲೂನಾ-25 ಉಡಾವಣೆ ಮಾಡುವ ಮೂಲ ರಷ್ಯಾದ ಚಂದ್ರಯಾನ ಶುರುಮಾಡಿದೆ. ವೋಸ್ಟೋನಿ ಕಾಸ್ಮೋಡ್ರೋಮ್ನಿಂದ ಸೋಯುಜ್ 2.1 ರಾಕೆಟ್ ಲೂನಾ-25 ಅನ್ನು ಹೊತ್ತೊಯ್ದಿದೆ.
ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಭಾರತ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಏಕೈಕ ದೇಶ ಭಾರತವೆಂಬ ಹೆಗ್ಗಳಿಕೆ ಪಡೆಯುವ ಗುರಿ ಇಸ್ರೋದಾಗಿತ್ತು. ಆದರೆ, ರಷ್ಯಾ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಪ್ಲಾನ್ ಮಾಡಿದೆ. ರಷ್ಯಾದ ಲೂನಾ-25 ಆಗಸ್ಟ್ 21 ರಂದೇ ಲ್ಯಾಂಡ್ ಆಗಲಿದೆ.
ಇಸ್ರೋದಿಂದ ಶುಭಾಶಯ
ಬರೋಬ್ಬರಿ 47 ವರ್ಷಗಳ ಬಳಿಕ ರಷ್ಯಾ ಚಂದ್ರನ ಕಾರ್ಯಾಚರಣೆ ಶುರು ಮಾಡಿದೆ. ಇನ್ನು ಲೂನಾ-25 ಚಂದ್ರನಿದ್ದಲ್ಲಿಗೆ ಕಳುಹಿಸಿರುವ ರಷ್ಯಾದ ವಿಜ್ಞಾನಿಗಳಿಗೆ ನಮ್ಮ ಇಸ್ರೋ ಶುಭಾಶಯ ತಿಳಿಸಿದೆ. ಜುಲೈ 14 ರಂದು ಇಸ್ರೋ ಚಂದ್ರಯಾನ-3 ನೌಕೆಯನ್ನು ಕಳುಹಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ 23 ರಂದು ಚಂದ್ರನ ಅಂಗಳವನ್ನು ತಲುಪಲಿದೆ.
Congratulations, Roscosmos on the successful launch of Luna-25 💐
Wonderful to have another meeting point in our space journeys
Wishes for
🇮🇳Chandrayaan-3 &
🇷🇺Luna-25
missions to achieve their goals.— ISRO (@isro) August 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ