ಬೀಬಿ ಸಿನಿಮಾವನ್ನೇ ಮೀರಿಸುತ್ತೆ ಈ ಲವ್ ಸ್ಟೋರಿ
ಲವರ್ಗೆ ಕೈ ಕೊಟ್ಟು ಮತ್ತೋರ್ವನೊಂದಿಗೆ ಮದುವೆ
ದಿಢೀರ್ ಕೈಕೊಟ್ಟ ಯುವತಿ, ಬೀದಿಗೆ ಬಂದ ಯುವಕ!
ಬೆಂಗಳೂರು: ಇತ್ತೀಚೆಗೆ ರಿಲೀಸ್ ಆದ ‘ಬೇಬಿ’ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಕಮಾಲ್ ಮಾಡಿದ ಬ್ಯೂಟಿಫುಲ್ ಲವ್ ಸ್ಟೋರಿ. ಈಗಿನ ಕಾಲದ ಲವ್ ಹೇಗಿರುತ್ತೆ? ಎಂದು ತೋರಿಸಿದ ಹಿಟ್ ಫಿಲ್ಮ್. ಬೇಬಿ ಸಿನಿಮಾ ಕ್ಲೈಮ್ಯಾಕ್ಸ್ ನೀವು ನೋಡಿದ್ದೀರಾ! ಇಂಥದ್ದೇ ಒಂದು ರಿಯಲ್ ಸೀನ್ವೊಂದು ನಿಜ ಜೀವನದಲ್ಲೂ ನಡೆದಿದೆ.
ಹೌದು, ಇದು ಆನಂದ್, ವೈಷ್ಣವಿ ಸ್ಟೋರಿಯಲ್ಲ. ಬದಲಾಗಿ ಬೆಂಗಳೂರು ಹೊರ ವಲಯದ ಆವಲಹಳ್ಳಿಯ ಜೋಸೆಫ್, ಕ್ಯಾತ್ರಿನಾಳ ಲವ್ ಸ್ಟೋರಿ. ಬೇಬಿ ಸಿನಿಮಾದಲ್ಲಿ ಹೇಳಿದಂತೆ ಸ್ಕೂಲ್ನಲ್ಲಿ ಚಿಗುರಿದ ಪ್ರೀತಿ ಮುಂದಕ್ಕೆ ಹಾಗೇ ಸಾಗುತ್ತೆ. ವರ್ಷಗಳು ಉರುಳುತ್ತೆ. ಚಿಗುರಿದ ಪ್ರೀತಿ ಹೆಮ್ಮರವಾಗಿ ಬೆಳೆದು ಹಸೆಮಣೆವರೆಗೂ ಕಾಲಿಡುತ್ತೆ. ಕ್ಯಾತ್ರಿನಾಳ ಮೇಲೆ ಪ್ರಾಣವನ್ನೇ ಇಟ್ಟಿರೋ ಜೋಸೆಫ್ ಆಕೆಗಾಗಿ ಏನ್ ಮಾಡೋದಕ್ಕೂ ತಯಾರಾಗಿರ್ತಾನೆ. ಅದರಂತೆ ಕೊಂಚ ಧೈರ್ಯ ಮಾಡಿದ ಹುಡುಗ ಜೋಸೆಫ್, ಪ್ರೀತಿಸಿದ ಹುಡುಗಿಯ ತಾಯಿ ಸೆಲೆನಾ ಮೇರಿ ಬಳಿ ತಮ್ಮ ಪ್ರೀತಿ ವಿಷಯವನ್ನ ಬಿಚ್ಚಿಡ್ತಾನೆ. ಮಗಳ ಖುಷಿ ಬಯಸಿದ ತಾಯಿ ಇಬ್ಬರ ಪ್ರೇಮಕ್ಕೂ ಗ್ರೀನ್ ಸಿಗ್ನಲ್ ಕೊಡ್ತಾರೆ. ಮದುವೆ ಮಾಡಿಕೊಡೋದಾಗಿ ಹೇಳಿ ಒಂದು ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್ಮೆಂಟ್ ಮಾಡಿಸ್ತಾರೆ. ಈಗಷ್ಟೇ ಸ್ಕೂಲ್ ಮುಗಿಸಿದ್ದ ಕ್ಯಾತ್ರಿನಾ ಕಾಲೇಜ್ ಮೆಟ್ಟಿಲೇರ್ತಾಳೆ. ದಿನ ಉರುಳಿದಂತೆ ಬದಲಾದ ಕ್ಯಾತ್ರಿನಾಳ ಲೈಫ್ನಲ್ಲಿ ಮತ್ತೊಬ್ಬನ ಎಂಟ್ರಿಯಾಗಿದೆ. ಅದು ಸ್ನೇಹಕ್ಕೆ ತಿರುಗಿ ಬಳಿಕ ಪ್ರೇಮಾಂಕುರವಾಗಿ ಎಂಗೇಜ್ ಆದ ಹುಡುಗನಿಗೆ ಕೈ ಕೊಟ್ಟು ಎಸ್ಕೇಪ್ ಆಗ್ತಾಳೆ.
ಇತ್ತ ಅವಳೇ ಪ್ರಪಂಚ. ಅವಳಿಂದಲೇ ಎಲ್ಲ. ಅವಳಿಲ್ಲದೇ ಬದುಕಿಲ್ಲ ಅನ್ನೋದನ್ನ ನಂಬಿದ್ದ ಜೋಸೆಫ್ಗೆ ಕ್ಯಾತ್ರಿನಾಳ ಕಾಲೇಜ್ ಲವ್ ಸ್ಟೋರಿ ಗೊತ್ತೇ ಇರ್ಲಿಲ್ಲ. ಪ್ರೀತಿಯಲ್ಲಿ ಕುರುಡಾಗಿದ್ದ ಜೋಸೆಫ್ ಅತ್ತ ಕ್ಯಾತ್ರಿನಾಳ ಜೊತೆ ಮದುವೆಗೆ ಸಿದ್ಧತೆ ನಡೆಸ್ತಿದ್ದ. ಕ್ಯಾತ್ರಿನಾಳ ತಾಯಿ ಕೇಳಿದಾಗಲೆಲ್ಲ ಹಣ ಕೊಡ್ತಿದ್ದ. ಆ ಖರ್ಚು, ಈ ಖರ್ಚು ಅಂತ ತನ್ನಲ್ಲಿ ಇಲ್ಲದಿದ್ರೂ ಸಾಲಸೋಲ ಮಾಡಿ ಬರೋಬ್ಬರಿ 5 ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚು ಮಾಡಿದ್ದ.
ಜೋಸೆಫ್ ಹೇಳಿದ್ದೇನು?
ಹುಡುಗಿಗೆ ಒಂದು ಹುಡುಗನ ಜೊತೆ ಲವ್ ಆಯ್ತು, ಆ ಹುಡುಗ ಕಿವಿನ್ ಅಂತ. ಆ ಮೇಲೆ ಅವರ ಅಮ್ಮ ಅಪ್ಪ ನಮಗೆ ಏನೂ ತಿಳಿಸಿಲ್ಲ. ಚೆನ್ನಾಗಿ ನಡೆಯುತ್ತಿತ್ತು. ಹುಡ್ಗ ಏನ್ ಮಾಡ್ದ ಅಂದ್ರೆ, ಹುಡುಗಿಯನ್ನ ಮನೆಯಿಂದ ಕರೆದುಕೊಂಡು ಹೋಗಿ, ಎರಡು ದಿನ ಅವರ ಮನೆಯಲ್ಲಿ ಇರಿಸಿಕೊಂಡ್ರು. ಆ ಮೇಲೆ ನ್ಯೂಸ್ ಬಂತು ಆ ಹುಡುಗಿ ಪ್ರಗ್ನೆಂಟ್ ಆಗಿದ್ದಾಳೆ, 6 ತಿಂಗಳು ಅಂತ. ಆಮೇಲೆ ನಾನು ಅವರತ್ರ ಹೋಗಿ ಕೇಳ್ದೆ, ನಾನು ಖರ್ಚು ಮಾಡಿರೋ 5 ಲಕ್ಷ ಕೊಡಿ ಅಂತ. ಆದ್ರೆ ಅವರ ಅಪ್ಪ, ಅಮ್ಮ ಹುಡುಗರನ್ನೆಲ್ಲ ಕರೆದುಕೊಂಡು ಬಂದು ನನಗೆ ಹೊಡೆಯೋದಕ್ಕೆ ಬರ್ತಾರೆ ಎಂದು ನೊಂದ ಯುವಕ ಜೋಸೆಫ್ ತನ್ನ ಅಳಲು ತೋಡಿಕೊಂಡಿದ್ದಾರೆ.
ಇನ್ನೇನು ಮದುವೆಗೆ ಡೇಟ್ ಹತ್ತಿರ ಬರುತ್ತಿದ್ದಂತೆ ಕ್ಯಾತ್ರಿನಾ ಪ್ರೀತಿ ಕೊಂದು ಮಾಯವಾಗಿದ್ದಾಳೆ. ಕೊಟ್ಟ ಹಣ ಕೇಳಿದ್ರೆ ಕ್ಯಾತ್ರಿನಾ ತಾಯಿ ಕೊಡೋಕೆ ಸಿದ್ಧರಿಲ್ಲ. ಇತ್ತ ಪ್ರೀತಿಸಿದ ಹುಡುಗಿನೂ ಇಲ್ದೇ, ಕೂಡಿಟ್ಟ ಹಣನೂ ಇಲ್ದೇ, ಜೋಸೆಫ್ ಅವಲಹಳ್ಳಿ ಠಾಣೆ ಮೆಟ್ಟಿಲೇರಿ ಸದ್ಯ ಕ್ಯಾತ್ರಿನಾ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ