ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ
ಕಾರ್ಯಕ್ರಮದ ವೇಳೆ ಪಾಕಿಸ್ತಾನ ಪರ ಘೋಷಣೆ!
25 ವರ್ಷದ ಯುವಕನನ್ನು ಬಂಧಿಸಿ ಪೊಲೀಸರು
ನಾಸಿಕ್: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ 25 ವರ್ಷದ ಯುವಕನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಶಬದ್ ಶಫಕತ್ ಖುರೇಶಿ ಎಂಬ ಕಿಡಿಗೇಡಿ ಬಂಧಿತ ಆರೋಪಿ.
ಏನಿದು ಘಟನೆ?
ಆಗಸ್ಟ್ 15ನೇ ತಾರೀಕಿನಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಸಿಕ್ನಿಂದ 60 ಕಿಲೋ ಮೀಟರ್ ದೂರದ ಚಾಂದ್ವಾಡ್ ಟೋಲ್ ಪ್ಲಾಜಾ ಎಂಬಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕ ಪಾಕ್ ಪರ ಘೋಷಣೆ ಕೂಗಿದ್ದ. ಈ ಬಗ್ಗೆ ಟೋಲ್ ಪ್ಲಾಜಾದ ಮ್ಯಾನೇಜರ್ ದೂರು ನೀಡಿದ್ದು, ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು, ಬಂಧಿತ ಆರೋಪಿ ವಿರುದ್ಧ ಸೆಡಿಷನ್ ಕೇಸ್ ದಾಖಲಿಸಿ ಎಂದು ಪೊಲೀಸ್ ಠಾಣೆ ಎದುರೇ ಪ್ರತಿಭಟನೆ ಮಾಡಲಾಗುತ್ತಿದೆ. ಸದ್ಯ ಕೇಸ್ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ