newsfirstkannada.com

×

ಸ್ವರ್ಗವೇ ನಾಚುವಂತಿದೆ ಈ ಭಾಗ್ಯಲಕ್ಷ್ಮೀ ಸಂಬಂಧ; ಅಕ್ಕ ತಂಗಿ ಅನುಬಂಧಕ್ಕೆ ಮನಸೋತ ಫ್ಯಾನ್ಸ್

Share :

Published August 28, 2023 at 10:14pm

    ಅಕ್ಕಮ್ಮನ ಪ್ರೀತಿ ರಿಯಲ್ ಲೈಫ್​ನಲ್ಲೂ ನನಗೆ ಕೊಡುತ್ತಿದ್ದಾರೆ

    ಭೂಮಿಕಾಗೆ ಸುಶ್ಮಾರನ್ನು ಕಂಡರೆ ತುಂಬಾನೆ ಅಚ್ಚು ಮೆಚ್ಚು..!

    ಇಬ್ಬರು ತೆರೆ ಮೇಲೆ ಅಕ್ಕ-ತಂಗಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ

ಧಾರಾವಾಹಿಗಳು ಅಂದ್ಮೇಲೆ ಅದು ಒಂದು ಕುಟುಂಬವಿದ್ದಂತೆ. ಶೂಟಿಂಗ್​ ಅನ್ನೋ ಹೆಸರಲ್ಲಿ ಪ್ರತಿದಿನ ಭೇಟಿ ಆಗಿ ಕಲಾವಿದರಿಂದ ಫ್ರೆಂಡ್ಸ್​ ಆಗಿ ಸುಖ ದುಖಃಗಳಲ್ಲಿ ಜೊತೆಯಾಗಿ ಎಲ್ಲದರಲ್ಲೂ ಭಾಗಿಯಾಗಿ ನಿಧಾನವಾಗಿ ಒಂದು ಬಾಂಧವ್ಯಕ್ಕೆ ತಿರುಗಿ ಬಿಡುತ್ತೆ. ಭಾಗ್ಯಲಕ್ಷ್ಮೀ ಸೀರಿಯಲ್​ ಖ್ಯಾತಿಯ ನಟಿ ಸುಶ್ಮಾ ರಾವ್ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ರಮೇಶ್ ಇಬ್ಬರು ಧಾರಾವಾಹಿಯ ಮೂಲಕ ಭೇಟಿ ಆದವರು. ತೆರೆಯ ಮೇಲೆ ಅಕ್ಕ-ತಂಗಿ ಪಾತ್ರವನ್ನ ನಿರ್ವಹಿಸುತ್ತಾ ಇದ್ದಾರೆ. ಇವರು ಸೀರಿಯಲ್​ನಲ್ಲಿ ಅಷ್ಟೇ ಅಲ್ಲದೇ ರಿಯಲ್​ ಲೈಫಲ್ಲೂ ಕೂಡ ಅಕ್ಕ ತಂಗಿಯಂತೆ ಇದ್ದಾರೆ.

ಮುಂಚೆ ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯಲಕ್ಷ್ಮೀ ಎರಡು ಕೂಡ ಒಂದೇ ಸೀರಿಯಲ್ ಆಗಿತ್ತು. ಆದರೆ ಈಗ ಎರಡು ಸೀರಿಯಲ್ ಅಕ್ಕ-ಪಕ್ಕ ಆಗಿವೆ. ಸದ್ಯ ಆಗೊಮ್ಮೆ ಈಗೊಮ್ಮೆ ಸಿಗೋ ಇವರು, ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್​ನ ಮೂಲಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸುಶ್ಮಾ ಭೂಮಿಕಾಗೆ ತುಂಬಾನೆ ಖುಷಿಯ ವಿಚಾರ. ಭೂಮಿಕಾಗೆ ಸುಶ್ಮಾ ಅವರನ್ನು ಕಂಡರೆ ತುಂಬಾನೆ ಅಚ್ಚು ಮೆಚ್ಚು. ನಿಜ ಜೀವನದಲ್ಲಿ ಭೂಮಿಕಾ ಆಕಾಶ್ ಎಂಬುವರು ತಮ್ಮ ಇದ್ದಾರೆ. ಆದರೆ ಅಕ್ಕಾ ಯಾರು ಇಲ್ಲಾ ಆ ಕಾರಣ ಸುಶ್ಮಾ ಅವರನ್ನು ಕಂಡರೆ ತುಂಬಾನೆ ಅಕ್ಕರೆ. ‘ನನಗೆ ರಿಯಲ್​ ಲೈಫ್​ಲ್ಲಿ ತಮ್ಮ ಬಿಟ್ಟರೆ ಅಕ್ಕಾ ಯಾರು ಇಲ್ಲಾ. ನನ್ನ ಫ್ರೆಂಡ್ಸ್ ಸರ್ಕಲ್ ಕೂಡ ದೊಡ್ಡದು ಇಲ್ಲಾ, ನನಗೆ ಅಕ್ಕನ ಪ್ರೀತಿ ಕೊಟ್ಟಿದ್ದಾರೆ ಸುಶ್ಮಾ. ಅಕ್ಕಮ್ಮನ ಪ್ರೀತಿ ರಿಯಲ್ ಲೈಫ್​ನಲ್ಲೂ ನನಗೆ ಕೊಡ್ತಾ ಬಂದಿದ್ದಾರೆ. ನಮ್ಮಿಬ್ಬರ ಬಾಡಿಂಗ್ ಯಾವಾಗಲೂ ಹೀಗೆ ಇರಲಿ ಅಂತಾ ನಾನು ಆ ದೇವರ ಹತ್ತಿರ ಬೇಡಿ ಕೊಳ್ತೀನಿ ಅಂತಾ ಹೇಳಿ ನಟಿ ಭೂಮಿಕಾ ತುಂಬಾನೆ ಭಾವುಕರಾದರು.

View this post on Instagram

A post shared by Sushma K Rao (@sushma_k_rao_)

ಇದರ ಜೊತೆ ತನ್ನ ತಮ್ಮನನ್ನ ಕೂಡ ತಾನು ಎಷ್ಟು ಪ್ರೀತಿ ಮಾಡ್ತೀನಿ ಅಂತಾ ಹೇಳಿಕೊಂಡಿದ್ದಾರೆ ಭೂಮಿಕಾ. ಆಕಾಶ್ ಕೂಡ ನನಗೆ ಸಿಕ್ಕಾಪಟ್ಟೆ ಇಷ್ಟ. ಅವನು ಈಗಲೇ ನನಗೆ ಅಮ್ಮನ ಸ್ಥಾನ ಕೊಟ್ಟಿದ್ದಾನೆ. ಅವನೆಂದರೆ ನನಗೆ ತುಂಬಾನೆ ಇಷ್ಟ ಅಂತಾ ತನ್ನ ತಮ್ಮನ ಜೊತೆ ಇರೋ ಬಾಡಿಂಗ್​ನ ಹೇಳಿಕೊಂಡಿದ್ದಾರೆ ನಟಿ ಭೂಮಿಕಾ ರಮೇಶ್​. ಇನ್ನು ಈ ಸಂಬಂಧದ ಬಗ್ಗೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಅದು ಎಲ್ಲರಿಗೂ ಸಿಗಲ್ಲ ನನಗೋಸ್ಕರ ಮಾತ್ರ ಗೊತ್ತಿರುತ್ತೆ. ಅದು ತಮ್ಮನ ಪ್ರೀತಿ ಜಾಸ್ತಿ. ನಿಮ್ಮಂತ ಅಕ್ಕಂದಿರು ಸಿಕ್ಕಿದ್ರೆ ಚಂದ, ಯಾವಾಗಲೂ ಹೀಗೆ ಇರಿ. ನಿಮ್ಮ ಮೇಲೆ ಯಾರ ದೃಷ್ಟಿ ಬೀಳದಿರಲಿ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವರ್ಗವೇ ನಾಚುವಂತಿದೆ ಈ ಭಾಗ್ಯಲಕ್ಷ್ಮೀ ಸಂಬಂಧ; ಅಕ್ಕ ತಂಗಿ ಅನುಬಂಧಕ್ಕೆ ಮನಸೋತ ಫ್ಯಾನ್ಸ್

https://newsfirstlive.com/wp-content/uploads/2023/08/laxmi-2.jpg

Load More