ಇವತ್ತು ನಾಡಿನಲ್ಲೆಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ, ಸಡಗರ
ಸಹೋದರನಿಗೆ ರಾಖಿ ಕಟ್ಟಿ ಶುಭ ಹಾರೈಸಿದ ಸಹೋದರಿಯರು
ಚಾಲೆಂಜಿಂಗ್ ದರ್ಶನ್ಗೆ ರಾಖಿ ಕಟ್ಟಿದ ಪಂಚತಂತ್ರ ನಟಿ ಸೋನಲ್
ಇವತ್ತು ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಹೋದರನಿಗೆ ರಾಖಿ ಕಟ್ಟುವ ಮೂಲಕ ಸಹೋದರಿಯರು ಶುಭ ಹಾರೈಸುತ್ತಿದ್ದಾರೆ. ಇದು ಸಹೋದರ-ಸಹೋದರಿಯ ನಡುವಿನ ಪ್ರೀತಿ, ಅನುಬಂಧ ನೂರಾರು ಕಾಲ ಇರುವಂತೆ ಗಟ್ಟಿಗೊಳಿಸುತ್ತದೆ. ರಕ್ಷಾ ಬಂಧನವನ್ನ ಸೆಲಬ್ರೆಟಿಗಳು ವಿಶೇಷವಾಗಿಯೇ ಆಚರಣೆ ಮಾಡುತ್ತಾರೆ. ಅದರಂತೆ ಇವತ್ತು ಅಭಿಮಾನಿಗಳು ಸೇರಿದಂತೆ ಕೆಲ ಸೆಲೆಬ್ರಿಟಿಗಳು ಸ್ಯಾಂಡಲ್ವುಡ್ ನಟ ದರ್ಶನ್ ಅವರಿಗೆ ಕೈ ತುಂಬಾ ರಾಖಿಗಳನ್ನು ಕಟ್ಟಿದ್ದಾರೆ.
ನಟ ದರ್ಶನ್ ಪ್ರತಿ ವರ್ಷನೂ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷ ದರ್ಶನ್ ಅವರಿಗೆ ಪಂಚತಂತ್ರ ಸಿನಿಮಾ ಖ್ಯಾತಿಯ ನಟಿ ಸೋನಲ್ ಮೊಂಟೆರಿಯೋ ರಾಖಿ ಕಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ನಯನಾ ಅವರು ಕೂಡ ದರ್ಶನ್ಗೆ ರಾಖಿ ಕಟ್ಟಿ ಸಂತಸಗೊಂಡರು. ರಾಖಿ ಕಟ್ಟಿದ ತಕ್ಷಣ ದರ್ಶನ್ಗೆ ಸ್ವೀಟ್ ತಿನಿಸಿದರು. ಇದಕ್ಕೆ ಪ್ರತಿಯಾಗಿ ದರ್ಶನ್ ಕೂಡ ಇಬ್ಬರಿಗೂ ಸಿಹಿ ತಿನಿಸಿದರು. ಸದ್ಯ ಈ ಸಂತಸದ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Today's Exclusive❤️@dasadarshan GOD 🛐#dboss #haveri #kaatera #dbossfans #dbosskingdom #darshan #dbosscraze #dbossfan #dbossquotes #dbossism #dbossfc #dbosssoldiers #dbossfanforever pic.twitter.com/4dFxejDcck
— D Boss Samrajya Haveri (@ka_27_Gajapade) August 30, 2023
ತಮ್ಮ ನೆಚ್ಚಿನ ನಟ ದರ್ಶನ್ಗೆ ರಾಖಿ ಕಟ್ಟೋದು ಎಂದರೆ ಮಹಿಳಾ ಫ್ಯಾನ್ಸ್ಗೂ ಎಲ್ಲಿಲ್ಲದ ಸಂಭ್ರಮ. ಇವತ್ತು ಯುವತಿಯರು ದರ್ಶನ್ ಮನೆ ಬಳಿ ತೆರಳಿ ತಮ್ಮ ನೆಚ್ಚಿನ ನಟನಿಗೆ ರಾಖಿ ಕಟ್ಟಿ ಫುಲ್ ಖುಷ್ ಆಗಿದ್ದಾರೆ. ಜಾಲೆಂಜಿಂಗ್ ಸ್ಟಾರ್ ಅವರ ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರ ಮೂಲಕ ತಮ್ಮ ರಕ್ಷಾ ಬಂಧನ ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ