ಸಿನಿಮಾ ಮತ್ತು ಕ್ರೀಡಾ ಲೋಕದ ಗಣ್ಯರಿಗೆ ಕಾಂಗ್ರೆಸ್ ಗಾಳ
ಕಾಂಗ್ರೆಸ್ ಸೇರಿದ ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್!
ನನಗೆ ರಾಹುಲ್ ಗಾಂಧಿಯೇ ಸ್ಫೂರ್ತಿ ಎಂದ ಪ್ರಬೋಧ್ ಟಿರ್ಕಿ
ಭುವನೇಶ್ವರ್: ಇತ್ತೀಚೆಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಇಡೀ ದೇಶಾದ್ಯಂತ ಎಲ್ಲಾ ಎಲೆಕ್ಷನ್ಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಸಿನಿಮಾ, ಕ್ರೀಡಾ ಲೋಕ ಹೀಗೆ ಎಲ್ಲಾ ಕ್ಷೇತ್ರದ ಗಣ್ಯರಿಗೂ ಪಕ್ಷ ಸೇರುವಂತೆ ಆಹ್ವಾನ ನೀಡಿದೆ. ಈಗ ಸದ್ಯದಲ್ಲೇ ಒಡಿಶಾ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿಕೊಂಡಿದೆ.
ಹೌದು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿನಿಮಾ ಮತ್ತು ಕ್ರೀಡಾ ಲೋಕದ ಗಣ್ಯರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಈಗ ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಪ್ರಬೋಧ್ ಟಿರ್ಕಿ ಕಾಂಗ್ರೆಸ್ ಸೇರಿದ್ದಾರೆ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಲ್ಸಾರಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದಾರೆ.
ಇನ್ನು, ಕಾಂಗ್ರೆಸ್ ಸೇರಿದ ಬಳಿಕ ಮಾತಾಡಿದ ಪ್ರಬೋಧ್ ಟಿರ್ಕಿ, ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶರತ್ ಪಟ್ಟನಾಯಕ್ ಸಮ್ಮುಖದಲ್ಲೇ ಪಕ್ಷ ಸೇರ್ಪಡೆ ಆಗಿದ್ದೇನೆ. ನಾನು ಕಾಂಗ್ರೆಸ್ ಸೇರಲು ರಾಹುಲ್ ಗಾಂಧಿಯವರೇ ಕಾರಣ. ರಾಹುಲ್ ಗಾಂಧಿ ಕೆಲಸದಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ ಎಂದರು.
ಪ್ರಬೋಧ್ ಟಿರ್ಕಿ ಯಾರು..?
ಇವರು ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್. ಟಿರ್ಕಿ ಸುಮಾರು 130ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2007ರಲ್ಲಿ ಏಷ್ಯಾಕಪ್ ಗೆದ್ದಾಗ ಟಿರ್ಕಿ ಭಾರತ ಹಾಕಿ ತಂಡದ ಭಾಗವಾಗಿದ್ದರು. ಇವರಿಗೆ ಏಕಲವ್ಯ ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ