ಸಿಲಿಕಾನ್ ಸಿಟಿ ಮಂದಿ ಓದಲೇಬೇಕಾದ ಸ್ಟೋರಿ ಇದು
ಕಳೆದ 9 ತಿಂಗಳಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಯ್ತು ಡೆಂಗ್ಯೂ
ಡೆಂಗ್ಯೂ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ನಮ್ಮ ಕ್ಲಿನಿಕ್ ಅನ್ನು 12 ಗಂಟೆಗಳ ಕಾಲ ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತಾಡಿದ್ದಾರೆ.
ನಗರದಲ್ಲಿ ಡೆಂಗ್ಯೂಗೆ 7 ಮಂದಿ ಸಾವನ್ನಪ್ಪಿದ್ದಾರೆ. ಮರಣ ಹೊಂದಿದ ಮೂವರ ಲ್ಯಾಬ್ ರಿಪೋರ್ಟ್ ಬರಬೇಕಿದೆ. ಮಳೆಗಾಲದಲ್ಲಿ ಡೆಂಗ್ಯೂ ಕೇಸುಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಟೆಸ್ಟಿಂಗ್ ಹೆಚ್ಚು ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಲೆಕ್ಟ್ ಮಾಡುವ ಸ್ಯಾಂಪಲ್ ಟೆಸ್ಟ್ ಮಾಡಲು ಸೂಚನೆ ಕೊಟ್ಟಿದ್ದೇನೆ. ಇದಕ್ಕೆ ಹೆಚ್ಚುವರಿ ಹಣ ಬೇಕಿದೆ. ಹೆಚ್ಚುವರಿ ಹಣ ಬೇಕು ಎಂದಾದರೆ ಇಲಾಖೆಯಿಂದ ನೀಡುತ್ತೇವೆ ಎಂದರು.
ಇನ್ನು, ಡೆಂಗ್ಯೂ ಮಾನಿಟರಿಂಗ್ ಆ್ಯಪ್ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯಿಂದ ರೆಡಿ ಆಗಲಿದೆ. ಬೆಂಗಳೂರಿಗೆ ಮಾತ್ರ ಈ ಆ್ಯಪ್ ರೆಡಿ ಮಾಡಿದ್ದೇವೆ. ನಾಳೆಯೇ ಈ ಆ್ಯಪ್ ಲಾಂಚ್ ಆಗಲಿದೆ. ಡೆಂಗ್ಯೂ ತಡೆಗೆ ಇದು ಸಹಾಯ ಮಾಡಲಿದೆ ಎಂದು ಹೇಳಿದರು.
ಡೆಂಗ್ಯೂ ಹೆಚ್ಚಳ
ಕಳೆದ ಜನವರಿಯಿಂದ ಸೆಪ್ಟೆಂಬರ್ 7ನೇ ತಾರೀಕಿನವರೆಗೂ 4926 ಡೆಂಗ್ಯೂ ಕೇಸ್ ಪತ್ತೆ ಆಗಿವೆ. ಬೊಮ್ಮನಹಳ್ಳಿ 272, ದಾಸರಹಳ್ಳಿ 73, ಬೆಂಗಳೂರು ಪೂರ್ವ ವಲಯ 1218, ಮಹದೇವಪುರ 875, ಆರ್.ಆರ್ ನಗರ 457, ಬೆಂಗಳೂರು ದಕ್ಷಿಣ 1003, ಬೆಂಗಳೂರು ಪಶ್ಚಿಮ 635, ಯಲಹಂಕ 393 ಕೇಸ್ಗಳು ವರದಿಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ