newsfirstkannada.com

×

ನ್ಯೂಸ್​ಫಸ್ಟ್​​ ವರದಿಗೆ ಬೆಚ್ಚಿಬಿದ್ದ ಬಿಬಿಎಂಪಿ; 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಶುರು!

Share :

Published September 14, 2023 at 6:17pm

    ನ್ಯೂಸ್​ ಫಸ್ಟ್ ಇಂಪ್ಯಾಕ್ಟ್.. ದಶಕದ ಸಮಸ್ಯೆಗೆ ಪರಿಹಾರ

    ಜಕ್ಕೂರು ರೇಲ್ವೆ ಓವರ್ ಬ್ರಿಡ್ಜ್​​ ಕಾಮಗಾರಿಗೆ ಮರುಜೀವ

    ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಕೂಗಿಗೆ BBMP ಸ್ಪಂದನೆ

ಬೆಂಗಳೂರು: ಒಂದಲ್ಲ ಎರಡಲ್ಲ.. ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು ಆ ಕಾಮಗಾರಿ. ಧೂಳು.. ಟ್ರಾಫಿಕ್​ ಜಂಜಾಟದಲ್ಲೇ ಕಾಲ ಕಳೆಯುತ್ತಿದ್ದ ಅಲ್ಲಿನ ಜನರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.. ಅಂತೂ ಸಮಸ್ಯೆಗೆ ಮುಕ್ತಿ ಸಿಕ್ತು ಅಂತ ಸಮಾಧಾನವಾಗಿದೆ.

ಇದು ಬೆಂಗಳೂರಿನ ಜಕ್ಕೂರು ರೇಲ್ವೇ ಓವರ್ ಬ್ರಿಡ್ಜ್.. ದಶಕದಿಂದ ಕಾಮಗಾರಿಯಿಲ್ಲದೆ ನೆನೆಗುದಿಗೆ ಬಿದ್ದಿದ್ದ ಈ ಬ್ರಿಡ್ಜ್​ನಿಂದ ಸಾಕಷ್ಟು ಜನರಿಗೆ ತೊಂದರೆಗೀಡಾಗಿದ್ರು. ಈ ಬಗ್ಗೆ ನ್ಯೂಸ್​ ಫಸ್ಟ್​​ ವಿಸ್ತೃತ ವರದಿ ಪ್ರಸಾರ ಮಾಡಿ ಪಾಲಿಕೆ ಅಧಿಕಾರಿಗಳ ಕಣ್ತೆರೆಸೋ ಕೆಲಸ ಮಾಡಿತ್ತು. ಈ ಬೆನ್ನಲ್ಲೇ ಕಾಮಗಾರಿಗೆ ಚಾಲನೆ ಸಿಕ್ಕಿದೆ.

ಅಷ್ಟಕ್ಕೂ ಈ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣ ಏನು ಗೊತ್ತಾ?

2012ರಲ್ಲಿ ಕಾಮಗಾರಿ ಆರಂಭಿಸಿದ ರೇಲ್ವೆ ಇಲಾಖೆ ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿತ್ತು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, 2013ರಲ್ಲಿ ಬಿಬಿಎಂಪಿ ಕಾಮಗಾರಿಯನ್ನ ಸ್ಥಗಿತಗೊಳಿಸಿತ್ತು. ಇನ್ನು ಭೂಸ್ವಾಧೀನ ಪರಿಹಾರದ ವಿರುದ್ಧ ಹಲವು ಕುಟುಂಬಗಳು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದವು. ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆಯೂ ಒತ್ತಾಯಿಸಿದ್ದವು. ಜೊತೆಗೆ ಸೇತುವೆ ವಿನ್ಯಾಸವನ್ನ ಸಹ ಮಧ್ಯದಲ್ಲಿ ಬದಲಾಯಿಸಿ, ಎರಡು-ಪಥದ ಮೇಲ್ಸೇತುವೆಯನ್ನ ನಾಲ್ಕು-ಪಥಕ್ಕೆ ವಿಸ್ತರಿಸಲಾಗಿತ್ತು. ಇದ್ರಿಂದ ಕಾಮಗಾರಿ ವಿಳಂಬವಾಗಿದ್ದು, ಸ್ಥಳೀಯರು ಪರದಾಡುವಂತಾಗಿತ್ತು.

ನಮಗೆ ಬಹಳ ಸಹಾಯ ಮಾಡಿದ್ರು

ಒಟ್ನಲ್ಲಿ.. ಸೇತುವೆಗೆ ಸಂಬಂಧಿಸಿದಂತೆ ಟೆಂಡರ್ ಕರೆದಿರೋ ಬಿಬಿಎಂಪಿ, ಸರ್ಕಾರದ ಒಪ್ಪಿಗೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ತಿದೆದ್ದು, ಮುಂದಿನ ಏಳೆಂಟು ತಿಂಗಳಲ್ಲಿ ಬಿಬಿಎಂಪಿ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ನೀಡಿದೆ. ಈ ಭರವಸೆ ಕಾರ್ಯರೂಪಕ್ಕೆ ಬಂದ್ರೆ ಇಲ್ಲಿನ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್​ಫಸ್ಟ್​​ ವರದಿಗೆ ಬೆಚ್ಚಿಬಿದ್ದ ಬಿಬಿಎಂಪಿ; 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಶುರು!

https://newsfirstlive.com/wp-content/uploads/2023/09/Bridge-News.jpg

Load More