8 ದಶಕಗಳ ಕಾಲ ನಗರದಲ್ಲಿ ಸೇವೆ ಸಲ್ಲಿಸಿದ್ದ ಬಸ್ಗಳು
ಮುಂಬೈನಲ್ಲಿ ಇನ್ಮುಂದೆ ಡೆಬಲ್ ಡೆಕ್ಕರ್ ಸೇವೆ ಇರಲ್ಲ..!
ಡಬಲ್ ಡೆಕ್ಕರ್ ಬಸ್ ನೆನಪು ಮೆಲುಕು ಹಾಕಿದ ನೆಟ್ಟಿಗರು
ಮುಂಬೈ: 1900ನೇ ಇಸವಿಯಿಂದ ಇಲ್ಲಿಯವರೆಗೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಮುಂಬೈ ನಗರದ ಐಕಾನಿಕ್ ಡಬಲ್ ಡೆಕ್ಕರ್ ಬಸ್ಗಳು ತಮ್ಮ ಸೇವೆಯನ್ನು ನಿನ್ನೆಗೆ ಮುಗಿಸಿವೆ. ಇನ್ನು ಮುಂದೆ ಮುಂಬೈ ನಗರದಲ್ಲಿ ಈ ಡಬಲ್ ಡೆಕ್ಕರ್ ಬಸ್ಗಳು ಕಾಣುವುದಿಲ್ಲ.
ನಗರದಲ್ಲಿ 7 ಡಬಲ್ ಡೆಕ್ಕರ್ ಬಸ್ಗಳು ಓಡಾಡುತ್ತಿದ್ದವು. ಇದರಲ್ಲಿ 3 ತೆರೆದ ಮೇಲ್ಛಾವಣಿ ಹೊಂದಿದ ಬಸ್ಗಳಾಗಿದ್ದವು. ಇಲ್ಲಿಗೆ ಇವು 15 ವರ್ಷಗಳನ್ನು ಪೂರೈಸಿದ್ದು ತುಂಬಾ ಹಳೆಯದಾಗಿ ಕಾಣುತ್ತಿವೆ. ಸೆ.15 ಅಂದರೆ ನಿನ್ನೆಗೆ ಈ ಡಬಲ್ ಡೆಕ್ಕರ್ ಬಸ್ಗಳು ತಮ್ಮ ಸೇವೆಯನ್ನು ಅಂತ್ಯಗೊಳಿಸಿವೆ. ಅಲ್ಲದೇ ತೆರೆದ ಮೇಲ್ಛಾವಣಿ ಹೊಂದಿದ ಡಬಲ್ ಡೆಕ್ಕರ್ ಬಸ್ಗಳು ಮುಂದಿನ ತಿಂಗಳು ಅಕ್ಟೋಬರ್ 5 ರವರೆಗೆ ಮಾತ್ರ ಸೇವೆ ನೀಡಿ ನಂತರ ಕಾರ್ಯವನ್ನು ಅಂತ್ಯಗೊಳಿಸಲಿವೆ ಎಂದು ವರದಿ ಮಾಡಲಾಗಿದೆ.
My last ride today on #Mumbai's iconic & favourite vehicle – the Red double decker BEST bus. I had fond memories of travelling in this bus during my childhood days espcially on top deck window seat. 🌟♥️ Bye Bye Double decker BEST bus. 👋 @myBESTBus #BESTBus #MumbaiDoubledecker pic.twitter.com/w2yr2rb7pa
— Adv. Hetal Panjari (@HetalPanjari) September 15, 2023
ಡಬಲ್ ಡೆಕ್ಕರ್ ಬಸ್ಗಳ ನಿನ್ನೆ ಕೊನೆ ಸೇವೆ ನೀಡುವ ವೇಳೆ ಬಸ್ಗಳನ್ನು ಬಲೂನ್ಗಳಿಂದ ಸಿಂಗಾರಿಸಲಾಗಿತ್ತು. ಈ ವೇಳೆ ಡ್ರೈವರ್, ಕಂಡಕ್ಟರ್ ತಮ್ಮ ಅನುಭವವನ್ನು ಹಂಚಿಕೊಂಡರು. ಅಲ್ಲದೆ ನಗರ ವಾಸಿಗಳು ಕೂಡ ಬಸ್ನಲ್ಲಿ ಪ್ರಯಾಣಿಸಿದ್ದ ಹಳೆಯ ನೆನಪುಗಳನ್ನು ಹೇಳಿಕೊಂಡಿದ್ದಾರೆ.
Goodbye Double-Decker Bus.
The Last Double Decker bus (non-AC) leaving from Marol Depot today morning pic.twitter.com/fSE0ygABij— Mumbai Heritage (@mumbaiheritage) September 15, 2023
ಡಬಲ್ ಡೆಕ್ಕರ್ ಬಸ್ಗಳು ತೆರೆದ ಮೇಲ್ಛಾವಣಿ ಹೊಂದಿದ್ದರಿಂದ ನಗರದ ಪ್ರವಾಸಕ್ಕೆ ಹೇಳಿ ಮಾಡಿಸಿದಂತ್ತಿದ್ದವು. ಕಳೆದ ಎಂಟು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಬಸ್ಗಳನ್ನು ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡುವುದಿಲ್ಲ ಎನ್ನಲಾಗಿದೆ. ಸದ್ಯ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕಾಲೇಜಿನ ದಿನಗಳನ್ನು, ಫ್ಯಾಮಿಲಿ, ಫ್ರೆಂಡ್ಸ್ ಜೊತೆ ನಗರ ಸುತ್ತಾಡಿದ್ದರ ಬಗ್ಗೆ ನೆಟ್ಟಿಗರು ನೆನಪು ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ