ಕನ್ನಡದ ಬಿಗ್ಬಾಸ್ ಸೀಸನ್ 10ಗೆ ಕ್ಷಣಗಣನೇ ಶುರು
ಬಿಗ್ಬಾಸ್ ಮನೆಗೆ ಕಾಲಿಡೋ ಆ ಸ್ಪರ್ಧಿಗಳು ಯಾರು!
ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ!
ಕನ್ನಡದ ಬಿಗ್ಬಾಸ್ ಸೀಸನ್ 10ಗೆ ಒಂದು ದಿನ ಅಷ್ಟೇ ಬಾಕಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ಬಾಸ್ ಮನೆಗೆ ಕಾಲಿಡೋ ಆ ಸ್ಪರ್ಧಿಗಳು ಯಾರು ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನೂ ನಿನ್ನೆ ಒಂದಿಷ್ಟು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯ ಬಗ್ಗೆ ನಿಮ್ಮಗೆ ಮಾಹಿತಿ ನೀಡಿದ್ದೇವೆ. ಅದರಲ್ಲಿ ಈ ಮೂರು ಸ್ಪರ್ಧಿಗಳು ಕನ್ಫರ್ಮ್ ಆಗಿದ್ದಾರೆ ಎಂಬುವುದರ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.
ಹೌದು ಎಲ್ಲಿ ನೋಡಿದರು ಬಿಗ್ಬಾಸ್. ಯಾರ ಮಾತನ್ನು ಕೇಳಿದರು ಬಿಗ್ಬಾಸ್ದ್ದೆ ಹವಾ. ಈಗಂತು ಕುಳಿತರೂ, ನಿಂತರೂ ಬಿಗ್ ಬಾಸ್ ಮಾತು. ಕನ್ನಡ ಬಿಗ್ಬಾಸ್ ಸೀಸನ್ 10 ಅಷ್ಟರ ಮಟ್ಟಿಗೆ ಭಾರಿ ಚರ್ಚೆಯಾಗ್ತಿದೆ. ಸ್ಪರ್ಧಿಗಳ ಪಟ್ಟಿಯಲ್ಲಿ ದಿನದಿಂದ ದಿನಕ್ಕೆ ಒಂದೊಂದು ಹೆಸರು ಆ್ಯಡ್ ಆಗುತ್ತಿವೆ. ಸದ್ಯ ನ್ಯೂಸ್ ಫಸ್ಟ್ಗೆ ಮೂವರು ಸ್ಪರ್ಧಿಗಳ ಪಕ್ಕಾ ಮಾಹಿತಿ ಲಭ್ಯವಾಗಿದೆ.
ಹೌದು, ಈ ಹಿಂದಿನ ಎಲ್ಲಾ ಸೀಸನ್ನಲ್ಲೂ ಬಿಗ್ಬಾಸ್ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನ ಗಮನಿಸಿದರೆ ಅಲ್ಲಿ ಎಲ್ಲಾ ಕ್ಷೇತ್ರದ ಇಂಟ್ರಸ್ಟಿಂಗ್ ವ್ಯಕ್ತಿತ್ವಗಳನ್ನ ಆಯ್ಕೆ ಮಾಡಲಾಗುತ್ತೆ. ಸಿನಿಮಾ, ಸೀರಿಯಲ್, ಕ್ರೀಡೆ, ಅಷ್ಟೇಯಲ್ಲ ಸುದ್ದಿ ಮಾಧ್ಯಮದಿಂದಲೂ ಸ್ಪರ್ಧಿಗಳಿರ್ತಾರೆ. ಇನ್ನೂ ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ನಾಗಿಣಿ ಖ್ಯಾತಿಯ ನಮ್ರತಾ, ಸುದ್ದಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರೋ ಹಿರಿಯ ಪತ್ರಕರ್ತರಾದ ಗೌರಿಶ್ ಅಕ್ಕಿ ಹಾಗೂ ಹರಹರ ಮಹಾದೇವ ಸೀರಿಯಲ್ ಖ್ಯಾತಿಯ ನಟ ವಿನಯ್ ಗೌಡ ಬಿಗ್ಬಾಸ್ ಮನೆಗೆ ಕಾಲಿಡೋದು ಪಕ್ಕಾ ಆಗಿದೆ.
ಇನ್ನೂ ಬಿಗ್ ಬಾಸ್ ಅನೌನ್ಸ್ ಆದಾಗಿಂದ ಹಲವು ಕಿರುತೆರೆ ಸೆಲಬ್ರಿಟಿಗಳ ಹೆಸರು ಕೇಳಿ ಬಂದಿದ್ದವು. ಅದರಲ್ಲೂ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಕೂಡ ಒಬ್ಬರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ರಂಜನಿ, ನಾನು ಬಿಗ್ಬಾಸ್ಗೆ ಹೋಗ್ತಿದ್ದೀನಿ ಅನ್ನೋದು ಸುಳ್ಳು ಸುದ್ದಿ. ನನ್ನ ಕೇರಿಯರ್ ಪ್ಲಾನ್ ಬೇರೆನೇ ಇದೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೇ ಇರಲಿ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂದ್ಹಾಗೆ, ಈ ಹಿಂದೆ ಕನ್ನಡತಿ ಪ್ರಮೋಷನ್ ಟೈಮ್ನಲ್ಲಿ ರಂಜನಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಬಿಗ್ ಮನೆಯಲ್ಲಿ ಹಲವು ಗಂಟೆ ಸಮಯ ಕಳೆದಿದ್ದನ್ನ ಇಲ್ಲಿ ಸ್ಮರಿಸಬಹುದು.
ಇನ್ನೂ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹೆಸರು ಕೂಡ ಕೇಳಿ ಬಂದಿತ್ತು. ಆದ್ರೆ ಇದು ಕೂಡ ಸುಳ್ಳು ಸುದ್ದಿಯಾಗಿದ್ದು, ಮೇಘಾ ಅವರು ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಮಾಜ ಸೇವೆಯಲ್ಲಿ ನಿರತರಾಗಿರುವ ಅಕ್ಕ ಅನು ಅವರ ಹೆಸರು ಕೂಡ ಹರಿದಾಡ್ತಾ ಇತ್ತು. ಈ ಬಗ್ಗೆ ಒಂದು ಪೇಜ್ ಪೋಸ್ಟ್ ಮಾಡಿತ್ತು ಅದಕ್ಕೆ ರಿಪ್ಲೈ ಮಾಡಿರೋ ಅಕ್ಕ ಅನು, ಬಿಗ್ ಬಾಸ್ಗೆ ಹೋಗುತ್ತಿಲ್ಲ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಿ ನಮ್ರತಾ, ನಟ ವಿನಯ್ ಗೌಡ, ಪತ್ರಕರ್ತ ಗೌರಿಶ್ ಅಕ್ಕಿ ಬಿಗ್ ಬಾಸ್ ಪಕ್ಕಾ ಸ್ಪರ್ಧಿಗಳಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ