2 ವರ್ಷಗಳ ಹಿಂದೆ ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದ ಕೊಹ್ಲಿ
ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಗ್ಗೆ ಕೊನೆಗೂ ಮೌನಮುರಿದ ಗಂಗೂಲಿ
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು..?
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಎಲ್ಲಾ ಮಾದರಿ ಕ್ಯಾಪ್ಟನ್ಸಿ ತೊರೆದು ಬರೋಬ್ಬರಿ 2 ವರ್ಷಗಳು ಆಗಿವೆ. ಕೊಹ್ಲಿ ನಂತರ ಟೀಂ ಇಂಡಿಯಾದ ಎಲ್ಲಾ ಮಾದರಿ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ರೋಹಿತ್ ಟೀಂ ಇಂಡಿಯಾದ ಕ್ಯಾಪ್ಟನ್ ಆದ್ರೂ ಫಾರ್ಮ್ನಲ್ಲೇ ಇದ್ದ ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕಿತ್ತು ಹಾಕಿದ್ದು ಯಾಕೆ? ಎಂಬ ಚರ್ಚೆ ನಡೆಯುತ್ತಿದೆ. ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಯೇ ಕಾರಣ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮೊದಲ ಬಾರಿಗೆ ಕೊಹ್ಲಿ ಕ್ಯಾಪ್ಟನ್ಸಿ ತೊರೆದ ಬಗ್ಗೆ ಸೌರವ್ ಗಂಗೂಲಿ ಮಾತಾಡಿದ್ದಾರೆ.
ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಅದ್ಭುತ ಕ್ಯಾಪ್ಟನ್. ಇವತ್ತಿಗೂ ಯಾಕೆ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ರು ಎಂದು ಯಾರಿಗೂ ಗೊತ್ತಿಲ್ಲ. ಟೀಂ ಇಂಡಿಯಾ ಕ್ಯಾಪ್ಟನ್ಸಿ ತೊರೆದಿದ್ದಕ್ಕೆ ಕಾರಣವೇನು ಎಂದು ಕೊಹ್ಲಿ ಮಾತ್ರ ರಿವೀಲ್ ಮಾಡಲು ಸಾಧ್ಯ. ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ತೊರೆದಾಗ ಬಿಸಿಸಿಐ ಪ್ರಿಪೇರ್ ಆಗಿರಲಿಲ್ಲ, ನಾನಂತೂ ಶಾಕ್ ಆಗಿದ್ದೆ. ಸೆಲೆಕ್ಟರ್ಸ್ ರೋಹಿತ್ಗೆ ಟೆಸ್ಟ್ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ರು. ನಮಗೆ ಇದಕ್ಕಿಂತ ಬೆಸ್ಟ್ ಆಪ್ಷನ್ ಯಾವುದು ಸಿಗಲಿಲ್ಲ ಎಂದರು.
ಟೆಸ್ಟ್ ಕ್ಯಾಪ್ಟನ್ಸಿಯನ್ನು ಕೊಹ್ಲಿ ತೊರೆದ ಬಳಿಕ ಟೀಂ ಇಂಡಿಯಾಗೆ ಒಳ್ಳೇ ನಾಯಕ ಸಿಗಲಿಲ್ಲ. ರೋಹಿತ್ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾಗೆ ಒಳ್ಳೇ ಕ್ಯಾಪ್ಟನ್ ಅಲ್ಲ, ಅಂದು ವೈಸ್ ಕ್ಯಾಪ್ಟನ್ ಆಗಿದ್ದ ಅಜಿಂಕ್ಯ ರಹಾನೆಯನ್ನೇ ಆಯ್ಕೆ ಮಾಡಬಹುದಿತ್ತು. ಆದರೆ, ರಹಾನೆಯನ್ನೇ ಬೇಕಂತಲೇ ಕಡೆಗಣಿಸಿ ರೋಹಿತ್ಗೆ ಪಟ್ಟ ಕಟ್ಟಿದ್ರು ಎಂಬ ಆರೋಪಗಳು ಕೇಳಿ ಬಂದಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ