newsfirstkannada.com

×

‘ಆದಿಪುರುಷ’ನ ಗೆಲ್ಲಿಸಲು ಟೊಂಕ ಕಟ್ಟಿ ನಿಂತ ಕನ್ನಡ ಇಂಡಸ್ಟ್ರಿ.. ಮೆಗಾ ಪ್ರಿಮಿಯರ್ ಶೋಗೆ ಯಾರೆಲ್ಲ ಬರ್ತಾರೆ..?

Share :

Published June 14, 2023 at 9:45am

Update June 14, 2023 at 12:51pm

    ಕರ್ನಾಟಕದಲ್ಲಿ ‘ಆದಿಪುರುಷ್’​ಗೆ ಅದ್ಧೂರಿ ಓಪನಿಂಗ್

    ಪ್ರಭಾಸ್​ ಚಿತ್ರಕ್ಕೆ ಸಿಕ್ತು ಕೆಆರ್​ಜಿ ಸ್ಟುಡಿಯೋಸ್​ ಬಲ

    ರಾಮ್​ ಚರಣ್, ರಣಬೀರ್ ತಲಾ 10 ಸಾವಿರ ಟಿಕೆಟ್ ಖರೀದಿ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್​ ಪಾಲಿಗೆ ಆದಿಪುರುಷ್ ತುಂಬಾನೇ ಇಂಪಾರ್ಟೆಂಟ್​. ಎರಡು ಸೋಲು ಕಂಡಿರೋ ಪ್ರಭಾಸ್​ ಈ ಸಲ ಗೆಲ್ಲಲೇಬೇಕು. ಸ್ಪೆಷಲ್ ಏನಪ್ಪಾ ಅಂದ್ರೆ ಆದಿಪುರುಷನನ್ನು ಗೆಲ್ಲಿಸಲೇಬೇಕು ಅಂತ ಕನ್ನಡ ಇಂಡಸ್ಟ್ರಿ ಟೊಂಕ ಕಟ್ಟಿ ನಿಂತಿದೆ. ಅದಕ್ಕಾಗಿ ಮೆಗಾ ಪ್ಲಾನ್​ವೊಂದು ರೆಡಿಯಾಗಿದೆ.

ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾ ಜೂನ್ 16ಕ್ಕೆ ವರ್ಲ್ಡ್​ವೈಡ್​ ತೆರೆಗೆ ಬರ್ತಿದೆ. ಓಂ ರಾವತ್ ನಿರ್ದೇಶನದ ಈ ಚಿತ್ರ ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಯಲ್ಲಿ ಜಗತ್ತಿನಾದ್ಯಂತ ಜಗಮಗಿಸಲಿದೆ. ಆದಿಪುರುಷ್​ಗೆ ದೇಶಾದ್ಯಂತ ಭಾರಿ ಬೆಂಬಲ ಸಿಗ್ತಿದ್ದು, ರಣಬೀರ್ ಕಪೂರ್, ರಾಮ್ ಚರಣ್​ ಸೇರಿ ಹಲವು ಸ್ಟಾರ್​ಗಳು ಸಾಥ್ ಕೊಡ್ತಿದ್ದಾರೆ. ವೈಯಕ್ತಿಕವಾಗಿ ಹತ್ತತ್ತು ಸಾವಿರ ಟಿಕೆಟ್​ ಖರೀದಿಸಿ ಜನಸಾಮಾನ್ಯರಿಗೆ ಉಚಿತವಾಗಿ ಆದಿಪುರುಷ್​ ತೋರಿಸೋ ಕ್ಯಾಂಪೇನ್ ಸಹ ನಡೀತಿದೆ.

ಪ್ರಭಾಸ್​ ಚಿತ್ರಕ್ಕೆ ಸಿಕ್ತು ಕೆಆರ್​ಜಿ ಸ್ಟುಡಿಯೋಸ್​ ಬಲ!

ಆಂಧ್ರ-ತೆಲಂಗಾಣ ಹಾಗೂ ಉತ್ತರ ಭಾರತದಲ್ಲಿ ಆದಿಪುರುಷ್​ಗೆ ಬಿಗ್ಗೆಸ್ಟ್​ ಓಪನಿಂಗ್ ಸಿಗ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಪ್ರಭಾಸ್​ ಸಿನಿಮಾ ಅದ್ಧೂರಿ ಎಂಟ್ರಿ ಸಿಗುವ ಎಲ್ಲಾ ಲಕ್ಷಣ ಕಾಣ್ತಿದೆ. ಹೌದು, ಕರ್ನಾಟಕದ ಖ್ಯಾತ ವಿತರಣ ಸಂಸ್ಥೆ ಕೆ.ಆರ್​.ಜಿ ಸ್ಟುಡಿಯೋಸ್​ ಆದಿಪುರುಷ್ ಚಿತ್ರವನ್ನ ರಾಜ್ಯದಲ್ಲಿ ಬಿಡುಗಡೆ ಮಾಡ್ತಿದ್ದು, ಅತಿ ಹೆಚ್ಚು ಥಿಯೇಟರ್​ಗಳಲ್ಲಿ ರಾಮಾಯಣ ದರ್ಶನ ಆಗುವ ಸಾಧ್ಯತೆ ಇದೆ.​ ಬಿಗ್ಗೆಸ್ಟ್​ ಓಪನಿಂಗ್ ಕೊಡಿಸುವುದು ಮಾತ್ರವಲ್ಲ ಆದಿಪುರುಷ್​ನ ಗೆಲ್ಲಿಸಲೇಬೇಕು ಅಂತ ಮೆಗಾ ಪ್ರಿಮಿಯರ್​ ಮಾಡೋಕು ನಿರ್ಧರಿಸಿದೆ ಕೆಆರ್​ಜಿ ಟೀಮ್.

ಜೂನ್ 16ಕ್ಕೆ ಆದಿಪುರುಷ್ ಸಿನಿಮಾ ಪಂಚಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಕರ್ನಾಟಕದಲ್ಲೂ ಆದಿಪುರುಷ್​ಗೆ ಸಕ್ಸಸ್ ಕೊಡ್ಬೇಕು ಅನ್ನೋ ಕಾರಣಕ್ಕೆ ಕೆಆರ್​ಜಿ ಕಡೆಯಿಂದ ಮೆಗಾ ಪ್ರಿಮಿಯರ್ ಆಯೋಜನೆ ಆಗ್ತಿದೆ. ಜೂನ್ 16ಕ್ಕೆ ಈ ಪ್ರಿಮಿಯರ್ ಶೋ ಆರ್ಗನೈಸ್​ ಆಗ್ತಿದ್ದು ಸ್ಯಾಂಡಲ್​ವುಡ್​ನ ಮೆಗಾ ಸ್ಟಾರ್​ಗಳು ಸಿನಿಮಾ ನೋಡೋಕೆ ಬರ್ತಾರಂತೆ. ಈ ಬಗ್ಗೆ ಖುದ್ದು ಕೆಆರ್​ಜಿ ಸಂಸ್ಥೆಯ ಮಾಲೀಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದ್ದಾರೆ.

ಪ್ರಭಾಸ್ ಚಿತ್ರವನ್ನ ಕರ್ನಾಟಕದಲ್ಲಿ ಕೆಆರ್​ಜಿ ಸಂಸ್ಥೆ ರಿಲೀಸ್ ಮಾಡ್ತಿದೆ ಅಂದಾಗಲೇ ಆದಿಪುರುಷ್​ಗೆ ಆರಂಭಿಕ ಮುನ್ನಡೆ ಸಿಕ್ಕಂತಾಗಿತ್ತು. ಇದರ ಜೊತೆಗೆ ಮೆಗಾ ಪ್ರಿಮಿಯರ್ ಅಂತಾ ಬೇರೆ ಹೇಳ್ತಿದ್ದಾರೆ. ಇದು ಸ್ಯಾಂಡಲ್​ವುಡ್​ ಮಂದಿಯಲ್ಲಿ ಇನ್ನಷ್ಟು ಥ್ರಿಲ್ ಹೆಚ್ಚಿಸಿದೆ. ಸದ್ಯಕ್ಕೆ ಆದಿಪುರುಷ್ ಮೆಗಾ ಪ್ರಿಮಿಯರ್​ನಲ್ಲಿ ಯಾರೆಲ್ಲಾ ಭಾಗವಹಿಸ್ತಾರೆ ಅನ್ನೋದು ಅಫಿಶಿಯಲ್ ಆಗಿಲ್ಲ. ಆದರೆ ಹೊಂಬಾಳೆ ಮತ್ತು ಕೆಆರ್​ಜಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಬಹುತೇಕ ಸ್ಟಾರ್​ಗಳು ಈ ಶೋಗೆ ಬರ್ತಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಮ್ಯಾ, ಸಪ್ತಮಿ ಗೌಡ, ಶ್ರೀಮುರಳಿ ಸೇರಿ ಸಾಕಷ್ಟು ಮಂದಿ ಆದಿಪುರುಷ್​ ಪ್ರಿಮಿಯರ್​ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಅದೊಂದು ಟೈಮ್ ಇತ್ತು. ಪರಭಾಷೆ ಚಿತ್ರಗಳನ್ನ ಕರ್ನಾಟಕದಲ್ಲಿ ಪ್ರಚಾರ ಮಾಡಿ ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡ್ತಾರೆ ಅಂತ. ಆದ್ರೀಗ ಪ್ಯಾನ್ ಇಂಡಿಯಾ ಟ್ರೆಂಡ್​ ಬಂದ್ಮೇಲೆ ಎಲ್ಲವೂ ಒಂದೇ ಎನ್ನುವಂತಾಗಿದೆ. ಕನ್ನಡದಲ್ಲೂ ಆದಿಪುರುಷ್ ಬರ್ತಾ ಇರೋದ್ರಿಂದ ಸಹಜವಾಗಿಯೇ ಇದು ಸ್ಯಾಂಡಲ್​ವುಡ್​ ಮಂದಿಗೂ ಹತ್ತಿರವೆನಿಸಿದೆ. ಎನಿ ವೇ.. ಅತಿಯಾದ ನಿರೀಕ್ಷೆಯೊಂದಿಗೆ ಬರ್ತಿರೋ ಆದಿಪುರುಷ್​ ಗೆಲ್ತಾನಾ? ಕರ್ನಾಟಕದಲ್ಲಿ ಪ್ರಭಾಸ್​ಗೆ ಅದೃಷ್ಟ ಒಲಿಯುತ್ತಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆದಿಪುರುಷ’ನ ಗೆಲ್ಲಿಸಲು ಟೊಂಕ ಕಟ್ಟಿ ನಿಂತ ಕನ್ನಡ ಇಂಡಸ್ಟ್ರಿ.. ಮೆಗಾ ಪ್ರಿಮಿಯರ್ ಶೋಗೆ ಯಾರೆಲ್ಲ ಬರ್ತಾರೆ..?

https://newsfirstlive.com/wp-content/uploads/2023/06/PRABHAS14062023.jpg

Load More