ಇಡೀ ಗಾಜಾ ಸ್ಟ್ರಿಪ್ನ ಸರ್ವನಾಶಕ್ಕೆ ಪಣ ತೊಟ್ಟ ಇಸ್ರೇಲ್
ಲೆಬನಾನ್ ದಕ್ಷಿಣ ಗಡಿಯಲ್ಲಿ ಭಾರತೀಯ ಯೋಧರ ನಿಯೋಜನೆ
ಹಿಜ್ಬುಲ್ಲಾ-ಇಸ್ರೇಲ್ ಸೇನೆ ನಡುವೆ ಉದ್ವಿಗ್ನತೆ, ಯೋಧರು ಕಾವಲು
ಹಮಾಸ್ ಭಯೋತ್ಪಾದಕರು ಇಸ್ರೇಲ್ಗೆ ನುಗ್ಗಿ ಹಿಂಸಾಚಾರದಲ್ಲಿ ತೊಡಗಿದ್ದು ಅಲ್ಲಿನ ಜನರನ್ನು ಮನಬಂದಂತೆ ಶೂಟ್ ಮಾಡಿ ಹತ್ಯೆ ಮಾಡ್ತಿದ್ದಾರೆ. ಇದಕ್ಕೆ ಪ್ರತಿ ದಾಳಿ ಮಾಡುತ್ತಿರುವ ಇಸ್ರೇಲ್, ಪ್ಯಾಲೆಸ್ತೀನ್ ಭಾಗವಾಗಿ ಇಡೀ ಗಾಜಾ ಸ್ಟ್ರಿಪ್ನ ಸರ್ವನಾಶಕ್ಕೆ ಪಣ ತೊಟ್ಟಿದೆ. ಏರ್ಸ್ಟ್ರೈಕ್ ಮೂಲಕ ಬಾಂಬ್ಗಳನ್ನು ಹಾಕುತ್ತಿರುವ ಇಸ್ರೇಲ್ ದೊಡ್ಡ, ದೊಡ್ಡ ಕಟ್ಟಡಗಳನ್ನು ನೆಲ ಸಮಮಾಡಿದೆ. ಈ ಎಲ್ಲದರ ನಡುವೆ ಲೆಬನಾನ್ನ ದಕ್ಷಿಣ ಗಡಿಯಲ್ಲಿ 900 ಭಾರತೀಯ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಲೆಬನಾನ್ ದಕ್ಷಿಣ ಗಡಿಯಲ್ಲಿ ಇರಾನ್ ಬೆಂಬಲಿತ ಸಂಘಟನೆ ಹಿಜ್ಬುಲ್ಲಾ ಮತ್ತು ಇಸ್ರೇಲ್ ಸೇನೆ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭಾಗವಾಗಿ ಭಾರತೀಯ ಸೈನಿಕರನ್ನು ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಪ್ಯಾಲಿಸ್ತೀನ್ ನಾಗರಿಕರ ಮೇಲೆ ದಾಳಿ ಮಾಡದಂತೆ ಇರಾನ್, ಇಸ್ರೇಲ್ಗೆ ವಾರ್ನಿಂಗ್ ಮಾಡಿದೆ. ಇಸ್ರೇಲ್, ದಾಳಿಯನ್ನು ಮುಂದುವರೆಸಿದರೆ ನಮ್ಮಿಂದ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ಇಸ್ರೇಲ್, ಹಮಾಸ್, ಪ್ಯಾಲೆಸ್ತೀನ್ ಭೀಕರ ಯುದ್ಧದ ನಡುವೆ ಇರಾನ್ ಎಂಟ್ರಿಯಾಗುವುದು ದಟ್ಟವಾಗಿ ಕಾಣುತ್ತಿದೆ.
Israel-Lebanon ಗಡಿಯಲ್ಲಿ ವಿಶ್ವ ಸಂಸ್ಥೆಯ ಐಎಫ್ಐಎಲ್ (United Nations Interim Force in Lebanon) ಭಾಗವಾಗಿ 900 ಭಾರತೀಯ ಯೋಧರು ನಿಯೋಜನೆಗೊಂಡಿದ್ದಾರೆ. UNIFILನಲ್ಲಿರುವ ಭಾರತೀಯ ಯೋಧರು ಸುಮಾರು 110 ಕಿಲೋ ಮೀಟರ್ ದೂರ ಬ್ಲೂ ಲೈನ್ನಲ್ಲಿ ನಿಂತಿದ್ದಾರೆ. ಈ ಹಿಂದೆ ಇಸ್ರೇಲ್ ಮತ್ತು ಹೆಜ್ಬುಲ್ಲ ನಡುವೆ ಸಂಘರ್ಷ ನಡೆದಾಗಲೂ ಭಾರತೀಯ ಯೋಧರು ನಿಯೋಜನೆಗೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ