newsfirstkannada.com

×

VIDEO: ಅಲಾ ಶಿಫಾ ಆಸ್ಪತ್ರೆಯೇ ಹಮಾಸ್‌ ಉಗ್ರರ ಸೆಂಟರ್‌; ಸುರಂಗ ಮಾರ್ಗ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದ ಇಸ್ರೇಲ್‌

Share :

Published November 16, 2023 at 1:51pm

    ಅಲಾ ಶಿಫಾ ಆಸ್ಪತ್ರೆಯಲ್ಲೇ ಅಡಗಿದೆ ಹಮಾಸ್‌ ಉಗ್ರರ ನೆಟ್‌ವರ್ಕ್

    ಆಸ್ಪತ್ರೆ ಮೇಲಿನ ದಾಳಿಯಲ್ಲಿ ರೋಗಿಗಳು, ಮಕ್ಕಳ ದಾರುಣ ಸಾವು

    ಬುಲ್ಡೇಜರ್‌ಗಳ ಮೂಲಕ ಉಗ್ರರ ಸುರಂಗ ಮಾರ್ಗಗಳು ಧ್ವಂಸ

ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧ ಸತತ 42ನೇ ದಿನವೂ ಮುಂದುವರೆದಿದೆ. ಗಾಜಾ ಪಟ್ಟಿಯನ್ನು ಛಿದ್ರ, ಛಿದ್ರ ಮಾಡಲು ನಿರ್ಧರಿಸಿರುವ ಇಸ್ರೇಲ್ ಯೋಧರು ಹಮಾಸ್ ಉಗ್ರರ ಅಡುಗುತಾಣಗಳನ್ನು ಉಡೀಸ್ ಮಾಡುತ್ತಿದ್ದಾರೆ.

ಇಸ್ರೇಲ್, ಹಮಾಸ್‌ ನಡುವಿನ ಯುದ್ಧದಲ್ಲಿ ಗಾಜಾ ಪಟ್ಟಿಯ ಆಸ್ಪತ್ರೆಗಳ ಮೇಲೂ ದಾಳಿ ನಡೆದಿದೆ. ಆಸ್ಪತ್ರೆಗಳ ಮೇಲಿನ ದಾಳಿಯಲ್ಲಿ ರೋಗಿಗಳು, ಮಕ್ಕಳು, ನೂರಾರು ವಿಶ್ವಸಂಸ್ಥೆಯ ಸ್ವಯಂ ಸೇವಕರು ಸಾವನ್ನಪ್ಪಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಇಸ್ರೇಲ್ ಸೇನೆಯ ನಡೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸದ್ಯ ಇಸ್ರೇಲ್ ಸೇನೆ ಹಮಾಸ್ ಉಗ್ರರು ಆಸ್ಪತ್ರೆಯನ್ನೂ ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸೂಕ್ತವಾದ ಸಾಕ್ಷ್ಯದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಇಸ್ರೇಲ್ ಯೋಧರು ಗಾಜಾದ ಅತಿ ದೊಡ್ಡ ಆಸ್ಪತ್ರೆ ಅಲಾ ಶಿಫಾದ ಮೇಲೆ ಕಳೆದ 24 ಗಂಟೆಯಲ್ಲೇ 2 ಬಾರಿ ಪರಿಶೀಲನೆ ನಡೆಸಿದ್ದಾರೆ. ಈ ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದು, ಆಸ್ಪತ್ರೆಯ ಐಸಿಯು, MRI ವಾರ್ಡ್‌ನಲ್ಲಿ ಹಮಾಸ್ ಉಗ್ರರು ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಮುಚ್ಚಿಟ್ಟಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲ ಅಲಾ ಶಿಫಾ ಆಸ್ಪತ್ರೆಯಲ್ಲೇ ಹಮಾಸ್ ಉಗ್ರರ ಸುರಂಗ ಮಾರ್ಗದ ನೆಟ್‌ವರ್ಕ್ ಇದೆ ಅನ್ನೋ ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದ್ದಾರೆ.

ಇಸ್ರೇಲಿ ಡಿಫೆನ್ಸ್ ಫೋರ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ ಹಮಾಸ್ ಅಲ್-ಶಿಫಾ ಆಸ್ಪತ್ರೆಯಲ್ಲಿ MRI ಕಟ್ಟಡವನ್ನು ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿ ಮತ್ತು ತಾಂತ್ರಿಕ ಉಪಕರಣಗಳ ಸಂಗ್ರಹಕ್ಕಾಗಿ ಬಳಸುತ್ತದೆ ಎಂದು ಹೇಳಿಕೊಂಡಿದೆ. ಅಲ್-ಶಿಫಾ ಆಸ್ಪತ್ರೆಯನ್ನು ಹಮಾಸ್ ಕಮಾಂಡ್ ಸೆಂಟರ್ ಆಗಿ ಬಳಸಿಕೊಂಡಿದೆ. ಹೀಗಾಗಿ ಬುಲ್ಡೇಜರ್‌ಗಳ ಮೂಲಕ ಉಗ್ರರ ಸುರಂಗ ಮಾರ್ಗಗಳನ್ನು ಧ್ವಂಸ ಮಾಡಲು ಇಸ್ರೇಲ್ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಅಲಾ ಶಿಫಾ ಆಸ್ಪತ್ರೆಯೇ ಹಮಾಸ್‌ ಉಗ್ರರ ಸೆಂಟರ್‌; ಸುರಂಗ ಮಾರ್ಗ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದ ಇಸ್ರೇಲ್‌

https://newsfirstlive.com/wp-content/uploads/2023/11/ISrael-Army.jpg

Load More