newsfirstkannada.com

×

8.5 ಕೋಟಿ ಕದ್ದವರು ಜಸ್ಟ್‌ 10 ರೂಪಾಯಿಗೆ ಸಿಕ್ಕಿಬಿದ್ರು; ಪೊಲೀಸರ ಫ್ರೂಟಿ ಜ್ಯೂಸ್ ಪ್ಲಾನ್‌ ಕೇಳಿದ್ರೆ ನೀವು ಬಿದ್ದು, ಬಿದ್ದು ನಗ್ತೀರಾ

Share :

Published June 19, 2023 at 8:06pm

Update June 19, 2023 at 8:07pm

    ಉತ್ತರಾಖಂಡದ ಚಮೋಲಿ ಹೇಮಕುಂಡ್​ ಸಾಹಿಬ್​ ಅಲ್ಲಿ ಸಿಕ್ಕಿಬಿದ್ದ ಕ್ರೇಜಿ ಕಪಲ್ಸ್

    ಪೊಲೀಸ್​​ ಅಧಿಕಾರಿಗಳು ಹಾಕಿದ ಬಲೆಗೆ ಈ ಕುಖ್ಯಾತ ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ!

    ಕುಖ್ಯಾತ ಕಳ್ಳರ ಗ್ಯಾಂಗ್​​ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದು ಅಷ್ಟಿಷ್ಟಲ್ಲ

ದೆಹಲಿ: ಬರೋಬ್ಬರಿ 8.5 ಕೋಟಿ ರೂಪಾಯಿಯನ್ನು ಗಂಡ, ಹೆಂಡತಿ ದರೋಡೆ ಮಾಡಿ ಸದ್ದಿಲ್ಲದೇ ಪರಾರಿಯಾಗಿದ್ದರು. ಈ ಕಿಲಾಡಿ ಕಪಲ್‌ ಅನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದು ಅಷ್ಟಿಷ್ಟಲ್ಲ. ಆದರೆ ಪೊಲೀಸ್​​ ಅಧಿಕಾರಿಗಳು ಹಾಕಿದ ಬಲೆಗೆ ಈ ಕಳ್ಳರು ಸಿಕ್ಕಿಬಿದ್ದಿದ್ದೇ ಬಲು ರೋಚಕ. ಲೂಧಿಯಾನದಲ್ಲಿ ಕಳ್ಳರ ಗ್ಯಾಂಗ್​ವೊಂದು ಜೂನ್​ 10ರಂದು 8 ಕೋಟಿ 49 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕು ಹಸೀನಾ ಎಂದೇ ಕುಖ್ಯಾತಿ ಪಡೆದಿದ್ದ ಮಂದೀಪ್ ಕೌರ್ ದಂಪತಿಗಳನ್ನು ಉತ್ತರಾಖಂಡದ ಚಮೋಲಿ ಹೇಮಕುಂಡ್​ ಸಾಹಿಬ್​ ಎಂಬ ಸ್ಥಳದಲ್ಲಿ ಅರೆಸ್ಟ್​​ ಮಾಡಿದ್ದಾರೆ.

ಕಳ್ಳರು ಸಿಕ್ಕಿಬಿದ್ದಿದ್ದೇ ಬಲು ರೋಚಕ.. ಅದು ಹೇಗೆ..?
ಮನದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ನೇಪಾಳಕ್ಕೆ ಹೋಗಲು ಪ್ಲಾನ್​ ಮಾಡಿದ್ದರಂತೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಅದಕ್ಕೂ ಮೊದಲು ಈ ಕಳ್ಳ ದಂಪತಿ ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಟ್ ಸಾಹಿಬ್ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್​ ಮಾಡಿದ್ದರು ಎಂದು ಪೊಲೀಸರಿಗೆ ತಿಳಿದು ಬಂದಿತ್ತು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಪೊಲೀಸ್​​ ಅಧಿಕಾರಿಗಳು ಒಂದು ಉಪಾಯವನ್ನು ಮಾಡಿದ್ದರು. ಅದುವೇ 10 ರೂಪಾಯಿ ಜ್ಯೂಸ್​​.

ಉತ್ತರಾಖಂಡದ ಸಿಖ್ ಯಾತ್ರಾ ಸ್ಥಳಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಇದರ ನಡುವೆ ಈ ಕಳ್ಳರನ್ನು ಮಟ್ಟ ಹಾಕಬೇಕೆಂದು ಪೊಲೀಸ್ರು ಉಪಾಯ ಮಾಡಿದ್ದರು. ಹೀಗಾಗಿ ಯಾತ್ರಾರ್ಥಿಗಳಿಗೆ ಉಚಿತವಾಗಿ ಜ್ಯೂಸ್​ ವಿತರಿಸಲು ಪೊಲೀಸರು ಯೋಜನೆ ಮಾಡಿದ್ದಾರೆ. ಅಷ್ಟರಲ್ಲಿ ಆರೋಪಿ ದಂಪತಿ ಅಲ್ಲಿಗೆ ಬಂದಿದ್ದಾರೆ. ಅವರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು, ಆದರೆ ಜ್ಯೂಸ್​ಗಳನ್ನು ಕುಡಿಯಲು ತಮ್ಮ ಮುಖಗಳನ್ನು ತೆರೆಯಬೇಕಾಗಿತ್ತು. ಇದೇ ವೇಳೆ ತಾವು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳಾದ ಮಂದೀಪ್ ಕೌರ್ ಹಾಗೂ ಜಸ್ವಿಂದರ್​ನನ್ನು ಗುರುತಿಸಿದ್ದಾರೆ. ಬಳಿಕ ಹೇಮಕುಂಡ್ ಸಾಹಿಬ್‌ನಲ್ಲಿ ಪೊಲೀಸರು ದಂಪತಿಯನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಈ ದಂಪತಿಯ ಜೊತೆಗೆ ಪಂಜಾಬ್‌ನ ಗಿಡ್ಡರ್‌ಬಾಹಾದಿಂದ ಮತ್ತೊಬ್ಬ ಆರೋಪಿ ಗೌರವ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಅವರ ಬಳಿ ಇದ್ದ 21 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8.5 ಕೋಟಿ ಕದ್ದವರು ಜಸ್ಟ್‌ 10 ರೂಪಾಯಿಗೆ ಸಿಕ್ಕಿಬಿದ್ರು; ಪೊಲೀಸರ ಫ್ರೂಟಿ ಜ್ಯೂಸ್ ಪ್ಲಾನ್‌ ಕೇಳಿದ್ರೆ ನೀವು ಬಿದ್ದು, ಬಿದ್ದು ನಗ್ತೀರಾ

https://newsfirstlive.com/wp-content/uploads/2023/06/thief-2.jpg

Load More