newsfirstkannada.com

×

ಮೈಚಾಂಗ್​ ಬಳಿಕ ವರುಣನ ಎಂಟ್ರಿ.. ಧುಮ್ಮಿಕ್ಕಿ ಹರಿಯುತ್ತಿರುವ ನದಿಗಳು.. ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು

Share :

Published December 18, 2023 at 6:40am

    ಮೈಚಾಂಗ್​ ಅಬ್ಬರ ಮಾಸೋ ಮುನ್ನವೇ ಮತ್ತೆ ವರುಣನ ಆರ್ಭಟ

    ನಿಲ್ಲಿಸಿದ್ದ ಮಿನಿ ಬಸ್​ ಮೇಲೆ ಬಿದ್ದ ಬೃಹತ್​ ಮರ

    ಭಾರೀ ಮಳೆಯ ನಡುವೆಯೂ ಚಾಲಕನ ಹುಚ್ಚಾಟ

ಮೈಚಾಂಗ್‌. ತಮಿಳುನಾಡಿನ ಜನರ ನಿದ್ದೆಗೆಡಿಸಿತ್ತು. ಇನ್ನೇನು ಚಂಡಮಾರುತ ಹೋಯ್ತು ಅಂತ ಖುಷಿಪಡ್ತಿರಬೇಕಾದ್ರೆ ಮತ್ತೊಂದು ಚಂಡಮಾರುತದ ರೂಪದಲ್ಲಿ ವರುಣ ಎಂಟ್ರಿ ಕೊಟ್ಟಿದ್ದಾನೆ. ಎಡೆಬಿಡದೆ ಸುರಿದ ಭಾರೀ ಮಳೆಗೆ ತಮಿಳುನಾಡು ಅಕ್ಷರಶಃ ತತ್ತರಿಸಿದೆ.

ಕೆರೆಯಂತಾಗಿರುವ ರಸ್ತೆಗಳು. ಜಲಾವೃತವಾದ ರಸ್ತೆಯಲ್ಲಿ ಪರದಾಡುತ್ತಿರುವ ವಾಹನ ಸವಾರರು. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಕಂಗಾಲಾಗಿರುವ ಜನರು. ಧುಮ್ಮಿಕ್ಕಿ ಹರಿಯುತ್ತಿರುವ ನದಿ ಹಾಗೂ ಜಲಪಾತಗಳು. ತುಂಬಿದ ನೀರಿನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಮಕ್ಕಳು.

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್

ಭಾರೀ ಮಳೆಗೆ ತಮಿಳುನಾಡು ಮತ್ತೆ ತತ್ತರಿಸಿದೆ. ಮೈಚಾಂಗ್‌ ಚಂಡಮಾರುತ ಪ್ರಭಾವದಿಂದ ದೇಶದ ಕೆಲವೆಡೆ ಹಲವು ದಿನಗಳಿಂದ ಅಬ್ಬರದ ಮಳೆಯಾಗಿತ್ತು. ಅದರಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಇದರಿಂದ ಹೊರಗೆ ಬರೋ ಮುನ್ನವೇ ಮತ್ತೋಂದು ಭಯಾನಕ ಚಂಡಮಾರುತ ಬಂದಪ್ಪಳಿಸಿದೆ. ಮುಂದಿನ 7 ದಿನಗಳ ಕಾಲ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕನ್ಯಾಕುಮಾರಿ, ತಿರುನಲ್ವೇಲಿ, ಶಿವಗಂಗಾ, ರಾಮನಾಥಪುರಂ, ನಾಗಪಟ್ಟಣಂ, ತಿರುವರೂರು, ತಂಜಾವೂರು, ಪುದುಕೊಟ್ಟೈ, ರಾಮನಾಥಪುರಂ, ಮತ್ತು ವಿರುಧನಗರ ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಭಾರೀ ಮಳೆ ಹಿನ್ನೆಲೆ 4 ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ

ಸುಮಾರು 50 ವರ್ಷದ ಬಳಿಕ ರಣ ಭೀಕರ ಮಳೆ ತಮಿಳುನಾಡಿನ ಮೇಲೆ ತಾಂಡವವಾಡುತ್ತಿದ್ದು, ಪಾಳ್ಯಂಕೊಟ್ಟೈ ಎಂಬಲ್ಲಿ 260 ಮಿಲಿಮೀಟರ್​ನಷ್ಟು ದಾಖಲೆಯ ಮಳೆಯಾಗಿದೆ. ತೂತುಕುಡಿ ಜಿಲ್ಲೆಯ ಶ್ರೀವೈಕುಂಠಂನಲ್ಲಿ ಸುಮಾರು 500 ಮಿಲಿಮೀಟರ್​ ಮಳೆಯಾಗಿದೆ. ತಮಿಳುನಾಡಿನ ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ತಿರುನಲ್ವೇಲಿ, ಕನ್ಯಾಕುಮಾರಿ, ತೂತುಕುಡಿ ಮತ್ತು ತೆಂಕಾಶಿ ನಾಲ್ಕು ಜಿಲ್ಲೆಗಳಲ್ಲಿ ಇಂದು ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು ಯಾವ್ಯಾವ ಜಿಲ್ಲೆಗಳಲ್ಲಿ. ಯಾವ್ಯಾವ ಭಾಗಗಳಲ್ಲಿ. ಎಷ್ಟೆಷ್ಟು ಅನಾಹುತ. ಆಸ್ತಿಪಾಸ್ತಿಗಳು ಹಾನಿಗಳಾಗಿವೆ ಅಂತ ನೋಡೋದಾದ್ರೆ.

ತಿರುನೆಲ್ವೇಲಿ

ತಿರುನೆಲ್ವೇಲಿ ಜಿಲ್ಲೆಯ ಅಗಸ್ತಿಯಾರ್ ಜಲಪಾತವು ಭಾರೀ ಮಳೆಯಿಂದಾಗಿ ಧುಮ್ಮಿಕ್ಕುತ್ತಾ ಬೋರ್ಗರೆಯುತ್ತಿದೆ. ನಾವೆಲ್ಲ ಮಕ್ಕಳಿದ್ದಾಗಿನಿಂದ ಈ ಜಲಪಾತದಲ್ಲಿ ಹೀಗೆ ನೀರು ಹರಿದಿದ್ದೇ ನೋಡೇ ಇಲ್ಲವೇನೋ ಎನ್ನುವಂತೆ ವಿಡಿಯೋಗಳನ್ನ ಮಾಡಿ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ತೂತುಕುಡಿ

ತೂತುಕುಡಿಯಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಮರಗಳು.. ವಿದ್ಯುತ್​ ಕಂಬಗಳು ಧರೆಗುರುಳೀವೆ. ಇನ್ನೂ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಮಿನಿ ಬಸ್​ ಮೇಲೆ ಮರ ಬಿದ್ದ ಪರಿಣಾಮ ಜಖಂಗೊಂಡಿದೆ.

ತಿರುಚೆಂದೂರು

ಇತ್ತ ರಸ್ತೆಗಳ ಮೇಲೆ ಸುಮಾರು 4 ರಿಂದ 5 ಅಡಿಗಳಷ್ಟು ನೀರು ನಿಂತಿದ್ದರೂ ತಮಿಳುನಾಡು ಸರ್ಕಾರಿ ಬಸ್ ಚಾಲಕರು ಜಲಾವೃತದ ನಡುವೆಯೇ ಬಸ್​ ಚಲಾಯಿಸಿ ಹುಚ್ಚಾಟ ಮೆರೆದಿದ್ದಾರೆ. ಸರ್ಕಾರಿ ಬಸ್​ಗಳೇ ಹೋಗುತ್ತಿದೆ ಅದನ್ನ ಫಾಲೋ ಮಾಡ್ಕೊಂಡು ನಾವು ಹೋಗಿಬಿಡೋಣ ಅಂತ ಶಾಲಾ ಬಸ್​ ಚಾಲಕ ಕೂಡ ಹುಚ್ಚಾಟ ಮೆರೆದಿದ್ದಾನೆ.

ಕೋವಿಲ್‌ಪಟ್ಟಿ

ಕೋವಿಲ್‌ಪಟ್ಟಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ರೈಲ್ವೆ ಸಬ್‌ವೇ ಸಂಪೂರ್ಣ ಜಲಾವೃತವಾಗಿದೆ. ಇನ್ನೂ ಇದನ್ನ ನೋಡಿದವರು ಇಲ್ಲಿ ರೈಲು ಓಡಾಡುತ್ತಿತ್ತು ಅಂದ್ರೆ ನಾನು ನಂಬಲ್ಲ. ಪಕ್ಕಾ ಇದು ಕೆರೆನೇ ಅಂತಿದ್ದಾರೆ.

ತಾಮಿರಪರಣಿ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಮಿರಪರಣಿ ನದಿಯಲ್ಲಿ ನೀರು ಮಟ್ಟವನ್ನೂ ಮೀರಿ ಹರಿಯುತ್ತಿದ್ದು, ಸುತ್ತ ಮುತ್ತಲಿನ ಪ್ರದೇಶದ ಜನರನ್ನ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಕನ್ಯಾಕುಮಾರಿ

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಹಲವು ಭಾಗದಲ್ಲಿ ಎಡಬಿಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಸೊಂಟದ ಮಟ್ಟಕ್ಕೆ ನೀರು ಹರಿಯುತ್ತಿದ್ದು, ಹರಿದು ಬರುತ್ತಿರುವ ನೀರಿನಲ್ಲಿ ಹಾವು.. ಚೇಳು.. ವಿಷ ಜಂತುಗಳು ಏನಾದ್ರು ಬಂದು ಎಲ್ಲಿ.. ಯಾರಿಗೆ.. ಏನು ಮಾಡುತ್ತೋ ಅಂತ ಕನ್ಯಾಕುಮಾರಿ ಭಾಘದ ಜನ ಆತಂಕದಲ್ಲಿದ್ದಾರೆ.

ಇಷ್ಟೆಲ್ಲಾ ತಮಿಳುನಾಡಿನಲ್ಲಿ ಮಳೆರಾಯ ಮಾಡುತ್ತಿರುವ ಅವಾಂತರವಾದ್ರೆ.. ಇತ್ತ ಕೇರಳದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟ ಮೂರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಅಷ್ಟೇ ಅಲ್ಲದೆ ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿಯ ನಾಲ್ಕು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಚಾಂಗ್​ ಬಳಿಕ ವರುಣನ ಎಂಟ್ರಿ.. ಧುಮ್ಮಿಕ್ಕಿ ಹರಿಯುತ್ತಿರುವ ನದಿಗಳು.. ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು

https://newsfirstlive.com/wp-content/uploads/2023/12/Rain-Tamilnadu.jpg

Load More