newsfirstkannada.com

×

ವಿಧಾನಸೌಧದ ಗೇಟ್ ಮುಂದೆ ಸೀಮೆಎಣ್ಣೆ ಸುರಿದುಕೊಂಡ ದಂಪತಿ ಆತ್ಮಹತ್ಯೆಗೆ ಯತ್ನ; ಕಾರಣವೇನು?

Share :

Published January 10, 2024 at 12:53pm

    ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್‌ ವಿರುದ್ಧ ಆರೋಪ

    ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ರೋಸಿ ಹೋಗಿ ಆತ್ಮಹತ್ಯೆಗೆ ಯತ್ನ

    ಸಚಿವ ಜಮೀರ್ ಅಹ್ಮದ್ ಖಾನ್ ತಮಗೆ ಸಹಾಯ ಮಾಡೋ ಭರವಸೆ

ಬೆಂಗಳೂರು: ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಧಾನಸೌಧ ಮೂರನೇ ಗೇಟ್ ಬಳಿ ನಡೆದಿದೆ. ವ್ಯಾಪಾರಕ್ಕಾಗಿ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ಈ ದಂಪತಿ ಬ್ಯಾಂಕ್ ಸಿಬ್ಬಂದಿ ವಿರುದ್ದ ಕಿರುಕುಳ ನೀಡಿದ ಆರೋಪ ಮಾಡಿದೆ.

ಶಾಹಿಸ್ತ ಬಾನು ಗಂಡ ಮುನಾಯಿದುಲ್ಲಾ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಆಸ್ತಿ ಅಡಮಾನ ಮಾಡಿ 50 ಲಕ್ಷ ಸಾಲ ಪಡೆದಿದ್ದಾರೆ. ಆದರೆ 97 ಲಕ್ಷ ರೂಪಾಯಿ ಸಾಲ ಮರು ಪಾವತಿ ಮಾಡಲಾಗಿದೆ. ಆದರೂ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಿಕಾಸಸೌಧ ಮುಂದೆಯೇ ಹೃದಯಾಘಾತ.. ಕ್ಷಣಾರ್ಧದಲ್ಲೇ ಹಾರಿ ಹೋಯ್ತು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಪ್ರಾಣ

ವಿಧಾನಸೌಧದ ಮೂರನೇ ಗೇಟ್ ಮುಂಭಾಗ ಬಂದ ಈ ದಂಪತಿ ಅನ್ಯಾಯ, ಅನ್ಯಾಯ ಎಂದು ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದುಕೊಳ್ಳೋ ಪ್ರಯತ್ನ ಮಾಡಿದರು. ಆಗ ಪೊಲೀಸರು ಅವರನ್ನು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಪಾದರಾಯನಪುರದಲ್ಲಿ ಈ ಕುಟುಂಬ ನೆಲೆಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ತಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಈ ರೀತಿ ಮಾಡಿರಿವುದಾಗಿ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಸೌಧದ ಗೇಟ್ ಮುಂದೆ ಸೀಮೆಎಣ್ಣೆ ಸುರಿದುಕೊಂಡ ದಂಪತಿ ಆತ್ಮಹತ್ಯೆಗೆ ಯತ್ನ; ಕಾರಣವೇನು?

https://newsfirstlive.com/wp-content/uploads/2024/01/Vidhana-soudha-Case.jpg

Load More