ಸಾಮರ್ಥ್ಯಕ್ಕಿಂತ ಹೆಚ್ಚು ಹುಲ್ಲನ್ನು ಸಾಗಿಸುತ್ತಿದ್ದಾಗ ನಡೆದ ದುರಂತ
ಬೆಂಕಿ ಹತ್ತಿಕೊಂಡಿದ್ದು ನೋಡಿ ಟ್ರ್ಯಾಕ್ಟರ್ ಚಾಲಕ ಮಾಡಿದ್ದೇನು..?
ಟ್ರ್ಯಾಕ್ಟರ್ ಡ್ರೈವರ್ ಚಾಣಾಕ್ಷತೆಯಿಂದ ತಪ್ಪಿದ ಭಾರೀ ಅನಾಹುತ
ಕೊಡಗು: ಟ್ರ್ಯಾಕ್ಟರ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಹುಲ್ಲು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ಮಾರಿಗುಡಿ ಬಳಿ ನಡೆದಿದೆ.
ಸಾಮರ್ಥ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರ್ನಲ್ಲಿ ಹುಲ್ಲು ಏರಿಕೊಂಡು ಹೋಗುತ್ತಿದ್ದರು. ಈ ವೇಳೆ ಗ್ರಾಮದ ಮಾರಿಗುಡಿ ಬಳಿ ಬರುವಾಗ ಮೇಲಿನಿಂದ ಹಾದು ಹೋಗಿದ್ದ ಕರೆಂಟ್ ವೈರ್ ತಗುಲಿದೆ. ತಕ್ಷಣ ಟ್ರ್ಯಾಕ್ಟರ್ ಚಾಲಕ ಚಾಣಾಕ್ಷತೆಯಿಂದ ಟ್ರಾಲಿಯಲ್ಲಿದ್ದ ಹುಲ್ಲನ್ನು ಲಿಫ್ಟ್ ಮಾಡುವ ಮೂಲಕ ಕೆಳಗೆ ಸುರಿದಿದ್ದಾನೆ. ಹೀಗಾಗಿ ಚಾಲಕ ಪಾರಾಗಿದ್ದಲ್ಲದೇ ಟ್ರ್ಯಾಕ್ಟರ್ ಅನ್ನು ಕೂಡ ಸೇಫ್ ಮಾಡಿ ಆಗುವ ಅನಾಹುತ ತಪ್ಪಿಸಿದ್ದಾನೆ.
ಇನ್ನು ಈ ಹುಲ್ಲು ಕುಂದಳ್ಳಿ ಗ್ರಾಮದ ಪ್ರವೀಣ್ ಎನ್ನುವರಿಗೆ ಸೇರಿದ್ದು ಬೆಟ್ಟದಳ್ಳಿಯಿಂದ ಮಸಗೋಡಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ