ರೋಹಿತ್ಗೆ ಸಾಥ್ ನೀಡಲು ಜೈಸ್ವಾಲ್-ಗಿಲ್ ಮಧ್ಯೆ ಫೈಟ್
ವಿಕೆಟ್ ಕೀಪಿಂಗ್, ಮಿಡಲ್ ಆರ್ಡರ್ ಆಯ್ಕೆಯೇ ಟೆನ್ಷನ್
5 ಸ್ಲಾಟ್ ಫಿಕ್ಸ್.. 9 ಪ್ಲೇಯರ್ಸ್ ಬಗ್ಗೆ ಕ್ಲಾರಿಟಿನೇ ಇಲ್ಲ
ಅಪ್ಘಾನ್ ಟಿ20 ಸರಣಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಭಾರತ-ಅಪ್ಘಾನ್ ಟಿ20 ದಂಗಲ್ ಕೊನೆಗೊಳ್ಳಲಿದೆ. ಇಷ್ಟಾದ್ರು ಮುಂಬರೋ ಟಿ20 ವಿಶ್ವಕಪ್ಗೆ ಭಾರತ ತಂಡ ಫೈನಲ್ ಆಗಿಲ್ಲ. ಬೆರಳೆಣಿಕೆ ಪ್ಲೇಯರ್ಸ್ ಬಿಟ್ರೆ ಮಿಕ್ಕವರ ಸ್ಲಾಟ್ ಕಥೆ ಏನು ಅನ್ನೋದು ಗೊತ್ತಾಗ್ತಿಲ್ಲ.
ಅಪ್ಘಾನಿಸ್ತಾನ ವಿರುದ್ಧ ಎರಡು ಟಿ20 ಪಂದ್ಯಗಳು ಮುಗಿದಿವೆ. ಇಂದು ಟೀಮ್ ಇಂಡಿಯಾ ಕೊನೆ ಪಂದ್ಯವನ್ನಾಡಲಿದೆ. ಇದಾದ ಬಳಿಕ ಭಾರತ ಯಾವುದೇ ಟಿ20 ಪಂದ್ಯಗಳನ್ನಾಡಲ್ಲ. ನೇರವಾಗಿ ಟಿ20 ವಿಶ್ವಕಪ್ ಅಖಾಡಕ್ಕೆ ಎಂಟ್ರಿಕೊಡಲಿದೆ. ರೋಹಿತ್ ಶರ್ಮಾ ಪಡೆ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡವೆನಿಸಿದೆ. ಹಾಗಾದ್ರೆ ಮೆನ್ ಇನ್ ಬ್ಲೂ ಪಡೆ ಮುಂಬರೋ ವಿಶ್ವಕಪ್ಗೆ ಎಷ್ಟೆಲ್ಲಾ ಸಿದ್ಧಗೊಂಡಿದೆ? ಯಾವ ಸ್ಲಾಟ್ನಲ್ಲಿ ಗೊಂದಲ ಇದೆ? ಯಾವ ವಿಭಾಗ ಟೀಮ್ ಮ್ಯಾನೇಜ್ಮೆಂಟ್ ಟೆನ್ಷನ್ ಹೆಚ್ಚಿಸಿದೆ? ಫಿನಿಶರ್ ಯಾರು?

ಬಿಸಿಸಿಐ ಟಿ20 ವಿಶ್ವಕಪ್ಗೆ ತಂಡ ಕಟ್ಟುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಎಕ್ಸ್ಪೆರಿಮೆಂಟ್ ಮೇಲೆ ಎಕ್ಸ್ಪೆರಿಮೆಂಟ್ ಮಾಡಿದೆ. ಇಷ್ಟಾದ್ರು ಕೇವಲ ಐದು ಆಟಗಾರರನ್ನ ಬಿಟ್ಟು ಉಳಿದವರು ಯಾರೆಲ್ಲಾ ವಿಶ್ವಕಪ್ ಅಡ್ತಾರೆ ಅನ್ನೋದು ಕ್ಲಾರಿಟಿ ಸಿಕ್ಕಿಲ್ಲ. ಚುಟುಕು ದಂಗಲ್ಗೆ ಒಟ್ಟು 15 ಸದಸ್ಯರ ತಂಡವನ್ನ ಸೆಲೆಕ್ಟ್ ಮಾಡಲಾಗುತ್ತೆ. ಆ ಪೈಕಿ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಿಟ್ ಆದರೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬೂಮ್ರ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಕನ್ಫರ್ಮ್. ಉಳಿದವರು ಯಾರು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಆರಂಭಿಕನಾಗಿ ರೋಹಿತ್ ಶರ್ಮಾ ಟಿಕೆಟ್ ಗಿಟ್ಟಿಸಿಕೊಳ್ಳುವುದ ಗ್ಯಾರಂಟಿ. ಆದರೆ ರೋಹಿತ್ ಜೊತೆಗಾರನಾಗಲು ಇಬ್ಬರ ಮಧ್ಯೆ ಫೈಟ್ ಏರ್ಪಟ್ಟಿದೆ. ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ನಡುವೆ ವಾರ್ ಏರ್ಪಟ್ಟಿದೆ. ಗಿಲ್ಗೆ ಹೋಲಿಸಿದ್ರೆ ಜೈಸ್ವಾಲ್ ಹೆಚ್ಚು ಅಗ್ರೆಸ್ಸಿವ್. ಟಿ20 ಸೂಟ್ ಆಗೋ ಪ್ಲೇಯರ್. ಹಾಗಂತ ಗಿಲ್ ಅನುಭವ ಕಡೆಗಣಿಸುವಂತಿಲ್ಲ.

ಮಧ್ಯಮ ಕ್ರಮಾಂಕದ ಕಥೆನೂ ಹಾಗೆ ಇದೆ. ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯರನ್ನ ಹೊರತಪಡಿಸಿದ್ರೆ ಉಳಿದ ಒಂದು ಸ್ಥಾನದ ಮೇಲೆ ರಿಂಕು ಸಿಂಗ್, ತಿಲಕ್ ವರ್ಮಾ ಕಣ್ಣಿಟ್ಟಿದ್ದಾರೆ. ಇನ್ನು ವಿಕೆಟ್ ಕೀಪರ್ ಸ್ಥಾನಕ್ಕಂತೂ ಮೆಗಾ ರೇಸ್ ಏರ್ಪಟ್ಟಿದೆ. ಕೆ.ಎಲ್ ರಾಹುಲ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್ ನಡುವೆ ಕದನ ಏರ್ಪಟ್ಟಿದೆ. ಫೈನಲಿ ಯಾರಿಗೆ ಜಾಕ್ಪಾಟ್ ಹೊಡೆಯುತ್ತೆ ಅನ್ನೋದು ಇನ್ನೂ ನಿಗೂಢ. ಒಂದು ವೇಳೆ ಪಂತ್ ಫುಲ್ ಫಿಟ್ ಆದರೆ ಅವರು ಸಹ ರೇಸ್ಗೆ ಎಂಟ್ರಿಕೊಡಲಿದ್ದಾರೆ.
ಬೂಮ್ರ-ಸಿರಾಜ್ ಒಕೆ.. ಉಳಿದ ಕಥೆ ಅಸ್ಪಷ್ಟ..!
ವೇಗಿಗಳಾಗಿ ಜಸ್ಪ್ರೀತ್ ಬೂಮ್ರ, ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಉಳಿದ ವೇಗಿ ಹಾಗೂ ಸ್ಪಿನ್ನರ್ಗಳ ಕಥೆ ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಸ್ಪಿನ್ ಕೋಟಾದಲ್ಲಿ ಕುಲ್ದೀಪ್ ಯಾದವ್, ರವಿ ಬಿಷ್ನೋಯಿ ಮಧ್ಯೆ ಫೈಟ್ ಇದೆ. ಇದಿಷ್ಟೆ ಅಲ್ಲದೇ, ಆಲ್ರೌಂಡರ್ಗಳ ಪಟ್ಟಿಯು ದೊಡ್ಡದಿದೆ. ಹಾರ್ದಿಕ್ಗೆ ಸ್ಲಾಟ್ ಫಿಕ್ಸ್ ಆದರೂ ಮಿಕ್ಕ ಸ್ಥಾನದ ಮೇಲೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ಹದ್ದಿನ ಕಣ್ಣಿಟ್ಟಿದ್ದಾರೆ.
17ನೇ IPLನಲ್ಲಿ ವಿಶ್ವಕಪ್ ತಂಡದ ಸ್ಪಷ್ಟ ಚಿತ್ರಣ..!
ಅಪ್ಘಾನಿಸ್ತಾನ ಎದುರಿನ ಟಿ20 ಸಿರೀಸ್ ಅಂತಿಮ ಘಟ್ಟ ತಲುಪಿದ್ರೂ ವಿಶ್ವಕಪ್ ಆಡುವ ತಂಡದ ಬಗ್ಗೆ ಸಂಪೂರ್ಣ ಕ್ಲಾರಿಟಿ ಸಿಕ್ಕಿಲ್ಲ. ಇಂದಿನ ಅಂತಿಮ ಟಿ20 ಪಂದ್ಯದ ಬಳಿಕ ಸಿಗುವುದು ಅನುಮಾನ. ಮಾರ್ಚ್ 22 ರಿಂದ 17ನೇ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಕಲರ್ಫುಲ್ ಟೂರ್ನಿಯಲ್ಲಿ ವಿಶ್ವಕಪ್ ಆಡುವ ಫೈನಲ್ ತಂಡದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್