ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಎಂದಿದ್ದೇಕೆ?
ಆಟದಲ್ಲಿ ಸೋಲಿನಿಂದ ಸಪ್ಪೆ ಮೊರೆ ಹಾಕಿದ ಬಿಗ್ಬಾಸ್ ಮಂದಿ
ವಿನಯ್ ಪರ ಮಾತಾಡಿದ ಸಂಗೀತಾ ವಿರುದ್ಧ ವರ್ತೂರು ಗರಂ
ಬಿಗ್ಬಾಸ್ ಮನೆಗೆ ಮಾಜಿ ಸ್ಪರ್ಧಿಗಳ ಆಗಮನ ಆಗಿದೆ. ಖುಷಿ ಸಂಭ್ರಮ ಇರುವ ಈ ಹೊತ್ತಲ್ಲೇ ಬಿಗ್ಬಾಸ್ ಮನೆಯ ಮಂದಿಗೆ ಟಾಸ್ಕ್ವೊಂದನ್ನು ನೀಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಿಲೀಸ್ ಆದ ಪ್ರೋಮೋದಲ್ಲಿ ಮನೆ ಒಂದು ಲಕ್ಷ ಗಳಿಸೋಕೆ ಮನೆಯವರ ಆಯ್ಕೆಯ ಪ್ರಕಾರ ವರ್ತೂರು ಸಂತೋಷ್ ಅವರು ಆಟ ಆಡೋದಕ್ಕೆ ಹೋಗ್ತಾರೆ.
ಆಟದಲ್ಲಿ ಸೋಲುಂಡ ಮನೆಯವರು ಸಪ್ಪೆ ಮೊರೆ ಹಾಕಿ ಕೂತಿದ್ದಾರೆ. ಮನೆಯ ಕ್ಯಾಪ್ಟನ್ ಸಂಗೀತಾ ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಅಂತ ನಾನ್ ಹೇಳಿದ್ದೆ ಅಲ್ವಾ ಎಂದು ಎಲ್ಲರ ಮುಂದೆ ಕೂಗಾಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವರ್ತೂರು ಸಂತೋಷ್ ಇದು ತುಂಬಾ ಇರ್ರೆಸ್ಪೆಕ್ಟಿವ್ (ಪರಿಗಣಿಸದ ರೀತಿಯಲ್ಲಿ) ಆಗಿ ಕಾಣುತ್ತಿದೆ. ಕಳಿಸೋಕೆ ಮುಂಚೆ ಆಯ್ಕೆ ಮಾಡೋ ರೀತಿ ಸರಿಯಾಗಿ ಇರಬೇಕು. ಬೇರೆಯವರನ್ನ ಹಿಯಾಳಿಸೋ ಬದಲು ನೀವು ಉತ್ತಮವಾಗಿದ್ದೀರಾ ಅನ್ನೋದನ್ನ ನೋಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.
ಸದ್ಯ ಬಿಗ್ಬಾಸ್ ಸೀಸನ್ 10 ಕೊನೆಯ ಹಂತಕ್ಕೆ ತಲುಪಿದೆ. ಈ ವಾರ ಒಟ್ಟು ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳೆಂದರೆ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತನಿಷಾ, ವಿನಯ್ ಗೌಡ, ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್. ಈ ಆರು ಸ್ಪರ್ಧಿಗಳಲ್ಲಿ ಯಾರು ಬಿಗ್ಬಾಸ್ ಮನೆಯ ಆಟವನ್ನು ಮುಕ್ತಾಯಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ