ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ
ನಾನು ಅಲ್ಲ ಬಿಡು ಅಂದು ಕೇಳುತ್ತಿದ್ದರು ಅಧಿಕಾರಿಯ ದರ್ಪ
ಟ್ವೀಟ್ ಮಾಡಿರುವ ರೈಲ್ವೆ ಸಚಿವರು ಹೇಳಿರುವುದು ಏನು..?
ಬರೌನಿ-ಲಖನೌ ಎಕ್ಸ್ಪ್ರೆಸ್ನ ರೈಲಿನಲ್ಲಿ ಪ್ರಯಾಣಿಕನ ಕೆನ್ನೆಗೆ ಮನ ಬಂದಂತೆ ಹೊಡೆದಿದ್ದ ಟಿಕೆಟ್ ಪರೀಕ್ಷಕ ಅಧಿಕಾರಿ (TTE)ಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇಂತಹ ದುರ್ವರ್ತನೆ ಸಹಿಸಲಾಗದು. ಹೀಗಾಗಿ ಟಿಟಿಇಯನ್ನು ಅಮಾನತುಗೊಳಿಸಲಾಗಿದೆ ಎಂದು ಬರೆದು ಟ್ವೀಟ್ ಶೇರ್ ಮಾಡಿದ್ದಾರೆ. ಟಿಟಿಇ ಅಧಿಕಾರಿ ಪ್ರಯಾಣಿಕನಿಗೆ ಹೊಡೆದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಹೀಗಾಗಿ ಅಧಿಕಾರಿಯನ್ನು ಸದ್ಯ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.
Zero tolerance for such misconduct, TTE has been suspended. https://t.co/MycVdbzw5i
— Ashwini Vaishnaw (@AshwiniVaishnaw) January 18, 2024
ಪ್ರಯಾಣಿಕನಿಗೆ ಟಿಕೆಟ್ ತೋರಿಸು ಎಂದು ಅಧಿಕಾರಿ ತಕರಾರು ತೆಗೆದು ಕೆನ್ನೆ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಟಿಕೆಟ್ ಎಲ್ಲಿ, ಟಿಕೆಟ್ ಎಲ್ಲಿ ಎನ್ನುತ್ತ ಅಧಿಕಾರಿ ಪ್ರಯಾಣಿಕನಿಗೆ ಮತ್ತೆ ಮತ್ತೆ ಕೆನ್ನೆಗೆ ಹೊಡೆದಿದ್ದಾನೆ. ಮತ್ತೊಬ್ಬ ಪ್ರಯಾಣಿಕ ಇದನ್ನು ವಿಡಿಯೋ ಮಾಡುತ್ತಿದ್ದನ್ನು ಕಂಡು ಆತನಿಗೂ ಕ್ಲಾಸ್ ತೆಗೆದುಕೊಳ್ಳೋಕೆ ಅಧಿಕಾರಿ ಸೀಟು ಹತ್ತಿ ವಾರ್ನ್ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ