ಇಂಡಿಯಾಗೆ ಕಾಡಲಿದೆ ಅಭ್ಯಾಸ ಪಂದ್ಯಗಳ ಕೊರತೆ
2021ರ ಟಿ20 ವಿಶ್ವಕಪ್ ನೆನಪಿಸುತ್ತಿದೆ ಈ ವರ್ಷ
2021ರಲ್ಲಿ IPL ಟು ವಿಶ್ವಕಪ್.. ಹೀನಾಯ ಪ್ರದರ್ಶನ
ಅಫ್ಘನ್ ಸರಣಿಯನ್ನು 3-0 ಅಂತರದಿಂದ ಟೀಮ್ ಇಂಡಿಯಾ ಕ್ಲೀನ್ಸ್ವೀಪ್ ಮಾಡ್ತು. ಇದರೊಂದಿಗೆ ಟೀಮ್ ಇಂಡಿಯಾದ ಧ್ಯೇಯವೂ ಕಂಪ್ಲೀಟ್ ಆಯ್ತು. ಕೋಚ್ ರಾಹುಲ್ ದ್ರಾವಿಡ್ಗೆ ಮಾತ್ರ, ಈ ರಿಸಲ್ಟ್ ಸಮಾಧಾನ ತಂದಿಲ್ಲ. ಆ ಇಂದು ಚಿಂತೆ ಇನ್ನಿಲ್ಲದೆ ಕಾಡ್ತಿದೆ.
ಅಫ್ಘನ್ ಎದುರಿನ ಟಿ20 ಸಿರೀಸ್ ಗೆದ್ದಾಗಿದೆ. ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಆಟಗಾರರ ಸಂಘಟಿತ ಆಟಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. 3-0 ಅಂತರದಿಂದ ಸರಣಿ ಗೆದ್ದ ಟೀಮ್ ಇಂಡಿಯಾ, ತವರಿನಲ್ಲಿ ಸರಣಿ ಗೆಲುವಿನ ದಂಡಯಾತ್ರೆ ಮುಂದುವರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ನಾಯಕನ ಆಟಕ್ಕೆ ಫುಲ್ ಮಾರ್ಕ್ಸ್ ಕೂಡ ಸಿಕ್ಕಿದೆ. ದ್ರೋಣಾಚಾರ್ಯ ರಾಹುಲ್ ದ್ರಾವಿಡ್ಗೆ ಟೀಮ್ ಇಂಡಿಯಾ ಗೆದ್ದರೂ, ಬೇಸರ ಮಾತ್ರ ಕಾಡ್ತಿದೆ. ಇದಕ್ಕೆ ಕಾರಣ ಮುಂದಿನ ಟಿ20 ವಿಶ್ವಕಪ್.
ದುರಾದೃಷ್ಟವಶಾತ್. ನಾವು ಮುಂದೆ ಒಂದು ತಂಡವಾಗಿ ಹೆಚ್ಚು ಕ್ರಿಕೆಟ್ ಆಡಲ್ಲ. ನಿಮಗೆಲ್ಲಾ ಗೊತ್ತಿರುವಂತೆ ಮುಂದೆ ನಮಗೆ ಐಪಿಎಲ್ ಇದೆ. ಎಲ್ಲರೂ ಯಾರು ಹೇಗೆ ಆಡುತ್ತಾರೆ ಎಂದು ನೋಡುತ್ತಾರೆ. ನಾವು ಯಾವ ಸ್ಲಾಟ್, ಟೀಮ್ನಲ್ಲಿ ತುಂಬಬೇಕು ಅನ್ನೋದು ನೋಡುತ್ತಾರೆ -ರಾಹುಲ್ ದ್ರಾವಿಡ್, ಹೆಡ್ ಕೋಚ್
2024ರ ಟಿ20 ವಿಶ್ವಕಪ್ ತಯಾರಿ ಆರಂಭಿಸಿರುವ ಟೀಮ್ ಇಂಡಿಯಾ, ಟಿ20 ವಿಶ್ವಕಪ್ಗೂ ಮುನ್ನ ಆಡಿದ ಕೊನೆ ಟಿ20 ಸಿರೀಸ್ ಅಫ್ಘನ್ ಎದುರಿನ ಸರಣಿಯಾಗಿದೆ. ಈ ಬಳಿಕ ಐಪಿಎಲ್ನಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾ ಆಟಗಾರರು, ನಂತರ ನೇರವಾಗಿ ಟಿ20 ವಿಶ್ವಕಪ್ನಲ್ಲಿ ಭಾಗವಹಿಸ್ತಾರೆ. ಇದೇ ಕೋಚ್ ರಾಹುಲ್ ದ್ರಾವಿಡ್ರ ಚಿಂತನೆ ದೂಡಿದೆ. ಇದಕ್ಕೆ ಮೇನ್ ರೀಸನ್ ಕೂಡ ಇದೆ.
ಐಪಿಎಲ್ ಬಳಿಕ ಭಾರತಕ್ಕಿಲ್ಲ ಟಿ20 ಸಿರೀಸ್
ಅಫ್ಘನ್ ಸರಣಿ ಮುಗಿಸಿರುವ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ 2 ತಿಂಗಳ ಕಾಲ ಟೀಮ್ ಇಂಡಿಯಾ ಆಟಗಾರರ ಐಪಿಎಲ್ನಲ್ಲಿ ಬ್ಯುಸಿಯಾಗಲಿದ್ದು, ಇಲ್ಲಿಯೇ ಟಿ20 ವಿಶ್ವಕಪ್ ತಂಡದ ರೂಪುರೇಷ ಸಿದ್ಧವಾಗಲಿದೆ. ಇದೇ ಈಗ ಟೀಮ್ ಇಂಡಿಯಾಗೆ ಮಾರಕವಾಗಲಿದೆ. ಯಾಕಂದ್ರೆ ಐಪಿಎಲ್ನಲ್ಲಿ ಆಡಿದ ಆಟಗಾರರಲ್ಲೇ ಟೀಮ್ ಕಾಂಬಿನೆಷನ್ ಸೆಟ್ ಮಾಡಬೇಕಾಗುತ್ತೆ. ಇದು ನಿಜಕ್ಕೂ ತಂಡದ ಮೇಲೆ ವ್ಯತಿರಕ್ತ ಪರಿಣಾಮವೇ ಬೀಳಲಿದೆ.
ವಿವಿಧ ತಂಡಗಳ ಪರ ಆಡುವ ಆಟಗಾರರು, ಒಂದು ತಂಡವಾಗಿ ಆಡಬೇಕು. ಇದಕ್ಕೆ ತಕ್ಕಂತೆ ತಂಡದ ಕಾಂಬಿನೇಷನ್ ರೆಡಿ ಮಾಡಬೇಕು. ಒಮ್ಮೆಲೆ ಐಪಿಎಲ್ ಬಳಿಕ ಟಿ20 ವಿಶ್ವಕಪ್ ಆಡುವ ಈ ಆಟಗಾರರು ಒಂದು ತಂಡವಾಗಿ ಆಡುವ ಅವಕಾಶವೇ ಸಿಗಲ್ಲ. ಇದು ಟೀಮ್ ಇಂಡಿಯಾದ ಪ್ರಿಪರೇಷನ್ ಮೇಲೆ ಸಹಜವಾಗೇ ತಂಡದ ಮೇಲೆ ಎಫೆಕ್ಟ್ ಆಗಲಿದೆ.
2021ರ ಟಿ20 ವಿಶ್ವಕಪ್ ಗತಿಯೇ ಆಗುತ್ತಾ?
2021 ಟಿ20 ವಿಶ್ವಕಪ್ ನೆನಪಿರಬೇಕು. ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಕ್ಷರಶಃ ನಿರಾಸ ಪ್ರದರ್ಶನ ನೀಡಿದ್ದರು. ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಸೆಲೆಕ್ಷನ್ ಕಮಿಟಿ ತಂಡ ಪ್ರಕಟಿಸಿತ್ತು. ನೇರವಾಗಿ ಅಂದು ಟೀಮ್ ಇಂಡಿಯಾ ಆಟಗಾರರು ಐಪಿಎಲ್ ಬಳಿಕ ಆಡಿದ್ದು ಟಿ20 ವಿಶ್ವಕಪ್ ಟೂರ್ನಿಯನ್ನೇ. ಇದೀಗ ಟೀಮ್ ಇಂಡಿಯಾ ಅಂಥದ್ದೇ ಪರಿಸ್ಥಿತಿ ಎದುರಿಸುತ್ತಿದೆ. ಐಪಿಎಲ್ ಬಳಿಕ ನೇರವಾಗಿ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲಿದೆ. ಇದು ಸಹಜವಾಗೇ ಕೋಚ್ ರಾಹುಲ್ ದ್ರಾವಿಡ್ ಚಿಂತೆಗೆ ಕಾರಣವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್